EMUNGARU @ SINCE 2017
BREAKING
[ಹೋಮ್] ಕರಾವಳಿ
[ಹೋಮ್] ರಾಜ್ಯ
[ಹೋಮ್] ಗ್ಲಾಮರ್
[ಹೋಮ್] ಕ್ರೈಂ
[ಹೋಮ್] ವಿಶೇಷ
[ಹೋಮ್] ದೇಶ ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ತಂತ್ರಜ್ಞಾನ
COASTAL

ಕರಾವಳಿ ಕಲಾವಿದರ ‘ಮ್ಯಾರೇಜ್ ಪಾರ್ಟಿ’ ಡಿಸೆಂಬರ್ 4ರಂದು ರಾಜ್ಯಾದ್ಯಂತ ತೆರೆಗೆ: ನ. 29ರಂದು ಮಂಗಳೂರಿನಲ್ಲಿ ಪ್ರೀಮಿಯರ್ ಶೋ; ಕನ್ನಡದ ಬಳಿಕ ಮಲಯಾಳಂನಲ್ಲೂ ಬಿಡುಗಡೆ! Marriage party

 


ಮಂಗಳೂರು: ಶ್ರೀ ವಾರಾಹಿ ಫಿಲ್ಮ್ಸ್ ಲಾಂಛನದಡಿ ಉದ್ಯಮಿ ಸಂತೋಷ್ ವಿ. ನಿರ್ಮಾಣದಲ್ಲಿ, ಚಯನ್ ಶೆಟ್ಟಿ ನಿರ್ದೇಶನದ ಕಾಮಿಡಿ-ಹಾರರ್ ಕನ್ನಡ ಚಲನಚಿತ್ರ ‘ಮ್ಯಾರೇಜ್ ಪಾರ್ಟಿ’ ಡಿಸೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆಗೂ ಮುನ್ನ ನವೆಂಬರ್ 29ರಂದು ಮಂಗಳೂರಿನಲ್ಲಿ ವಿಶೇಷ ಪ್ರೀಮಿಯರ್ ಶೋ ಆಯೋಜಿಸಲಾಗಿದೆ ಎಂದು ನಿರ್ದೇಶಕ ಚಯನ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕನ್ನಡದ ಬೆನ್ನಲ್ಲೇ ಮಲಯಾಳಂನಲ್ಲೂ ರಿಲೀಸ್:

ಈ ಹಿಂದೆ ‘ಬಿಗ್ ಬಾಸ್’ ವಿಜೇತ ರೂಪೇಶ್ ಶೆಟ್ಟಿ ಅವರ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದ ಚಯನ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. "ಮ್ಯಾರೇಜ್ ಪಾರ್ಟಿ ಸಂಪೂರ್ಣ ಮನರಂಜನಾತ್ಮಕ ಕಾಮಿಡಿ-ಹಾರರ್ ಚಿತ್ರವಾಗಿದ್ದು, ಕರಾವಳಿ ಭಾಗದ ಕಲಾವಿದರನ್ನು ಒಳಗೊಂಡು ನಿರ್ಮಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೈಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 'ಗಲಾಟೆ' ಮತ್ತು 'ಅಂದಗಾತಿಯೇ' ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ. ಡಿಸೆಂಬರ್ 4ರಂದು ಕನ್ನಡದಲ್ಲಿ ತೆರೆಕಾಣಲಿದ್ದು, ಇದಾದ ಎರಡು ವಾರಗಳ ಬಳಿಕ ಮಲಯಾಳಂ ಭಾಷೆಯಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಾಗುವುದು" ಎಂದು ನಿರ್ದೇಶಕರು ಮಾಹಿತಿ ನೀಡಿದರು. ಚಿತ್ರವನ್ನು ಎಂಪಿ ಫಿಲಂಸ್ ಮೂಲಕ ಮುನೀಂದ್ರ ಅವರು ವಿತರಣೆ ಮಾಡಲಿದ್ದಾರೆ.

‘ಕುಸೇಲ್ದರಸೆ’ ನವೀನ್ ಡಿ. ಪಡೀಲ್ ಪ್ರಮುಖ ಆಕರ್ಷಣೆ:

ಚಿತ್ರದ ಕುರಿತು ಮಾತನಾಡಿದ ಹಿರಿಯ ನಟ ನವೀನ್ ಡಿ. ಪಡೀಲ್, "ಚಿತ್ರದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಜನಮನ ಗೆದ್ದಿವೆ. ಹಾಸ್ಯದ ಜೊತೆಗೆ ಹಾರರ್ ಅಂಶಗಳೂ ಚಿತ್ರದಲ್ಲಿವೆ. ಪ್ರೇಕ್ಷಕರು ಕಲಾವಿದರನ್ನು ಬೆಳೆಸಿದಾಗ ಮಾತ್ರ ನಾವು ಉಳಿಯಲು ಸಾಧ್ಯ" ಎಂದರು.

ನಾಯಕ ನಟ ವಿನೀತ್ ಕುಮಾರ್ ಮಾತನಾಡಿ, "ಇದು ಕರಾವಳಿ ಭಾಗದ ಸೊಗಡಿನ ಕಥೆಯನ್ನು ಹೊಂದಿದ್ದು, ದಟ್ಟ ಕಾಡಿನ ಮಧ್ಯೆ ಚಿತ್ರೀಕರಣ ನಡೆಸಲಾಗಿದೆ. ಇಡೀ ಸಿನಿಮಾವನ್ನು 'ಕುಸೇಲ್ದರಸೆ' ನವೀನ್ ಡಿ. ಪಡೀಲ್ ಅವರು ಆವರಿಸಿಕೊಂಡಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಮಾಪಕ ಸಂತೋಷ್ ವಿ. ಮಾತನಾಡಿ, ಚಯನ್ ಶೆಟ್ಟಿ ಅವರ ನಿರ್ದೇಶನದಲ್ಲಿ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾ ನೀಡಬೇಕೆಂಬ ಕನಸು ಈ ಚಿತ್ರದ ಮೂಲಕ ನನಸಾಗಿದ್ದು, ಕಲಾವಿದರೆಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ ಎಂದರು.

ತಾರಾಗಣ ಮತ್ತು ತಾಂತ್ರಿಕ ವರ್ಗ:

ಚಿತ್ರದ ಪ್ರಮುಖ ತಾರಾಗಣದಲ್ಲಿ ವಿನೀತ್ ಕುಮಾರ್, ನವೀನ್ ಡಿ. ಪಡೀಲ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಜ್ಯೋತಿಶ್ ಶೆಟ್ಟಿ, ಅನನ್ಯಾ ಹಾಗೂ ರಕ್ಷಿತಾ ಪೂಜಾರಿ ಸೇರಿದಂತೆ ಕರಾವಳಿಯ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ‘ಸು ಫ್ರಮ್ ಸೋ’ ಖ್ಯಾತಿಯ ನಿತೀನ್ ಶೆಟ್ಟಿ ಸಂಕಲನ, ಶ್ರೀಕಾಂತ್ ಛಾಯಾಗ್ರಹಣ ಹಾಗೂ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆಯಿದ್ದು, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿಶ್ ಶೆಟ್ಟಿ, ಕಾರ್ತಿಕ್ ರಾವ್, ಅನನ್ಯಾ, ರಕ್ಷಿತಾ ಪೂಜಾರಿ, ಭೀಮರಾವ್, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

📢 ಇ ಮುಂಗಾರು WhatsApp ಚಾನೆಲ್ — ತಕ್ಷಣದ ಬ್ರೇಕಿಂಗ್ ನ್ಯೂಸ್!