ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ರಸ್ತೆಯಲ್ಲಿ ಬಿಡಾಡಿ ದನಗಳ ದಾಂಧಲೆ, ಸುಗಮ ಸಂಚಾರಕ್ಕೆ ಅಡ್ಡಿ: ಹಸು ಮಾಲೀಕನ ವಿರುದ್ಧ ಕೊನೆಗೂ ಎಫ್‌ಐಆರ್!

 



ಓಲ್ಡ್ ಏರ್‌ಪೋರ್ಟ್ ಸಂಚಾರ ಠಾಣೆ ಪೊಲೀಸರ ಕ್ರಮ; ನಿರ್ಲಕ್ಷ್ಯ ವಹಿಸಿದ ಸಂತೋಷ್ ವಿರುದ್ಧ ಬಿಎನ್‌ಎಸ್ ಕೇಸ್!

ಬೆಂಗಳೂರು:

ರಸ್ತೆಯಲ್ಲಿ ಬಿಡಾಡಿ ಹಸುಗಳನ್ನು ಬಿಟ್ಟು ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಆರೋಪದ ಮೇಲೆ ಹಸುವಿನ ಮಾಲೀಕನ ವಿರುದ್ಧ ಓಲ್ಡ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಾರತ್‌ಹಳ್ಳಿ ವ್ಯಾಪ್ತಿಯ ಅಶ್ವಥ್ ನಗರ ನಿವಾಸಿ ಸಂತೋಷ್ ಎಂಬವರೇ ಪ್ರಕರಣಕ್ಕೆ ಸಿಲುಕಿದ ಹಸುವಿನ ಮಾಲೀಕರಾಗಿದ್ದು, ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಮಾರತ್‌ಹಳ್ಳಿ ಹೊರವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್!

ಆಗಸ್ಟ್ 10 ರಂದು ಮಾರತ್‌ಹಳ್ಳಿ ಕಲಾಮಂದಿರದ ಸಮೀಪವಿರುವ ಪ್ರಮುಖ ಹೊರವರ್ತುಲ ರಸ್ತೆಯಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್‌ಟೇಬಲ್ ಎನ್. ನಾಗೇಂದ್ರ ಅವರು ಈ ಸಂಬಂಧ ದೂರು ನೀಡಿದ್ದಾರೆ. ಸಂಜೆ ವೇಳೆ ಸುಮಾರು 10ಕ್ಕೂ ಹೆಚ್ಚು ಹಸುಗಳು ರಸ್ತೆಯುದ್ದಕ್ಕೂ ಓಡಾಡಿಕೊಂಡಿದ್ದರಿಂದ, ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು.

ಹಸುಗಳನ್ನು ರಸ್ತೆಗೆ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಮಾಲೀಕ ಸಂತೋಷ್ ಅವರ ತೀವ್ರ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ, ಹೆಡ್ ಕಾನ್ಸ್‌ಟೇಬಲ್ ನಾಗೇಂದ್ರ ನೀಡಿ ದೂರಿನ ಆಧಾರದ ಮೇಲೆ ಪೊಲೀಸರು ಬಿಎನ್‌ಎಸ್ 285 (BNS 285) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಬಿಎನ್‌ಎಸ್ 285 ಕಾಯ್ದೆ ಏನು ಹೇಳುತ್ತದೆ?:

ಯಾವುದೇ ವ್ಯಕ್ತಿಯು ತನ್ನ ಸ್ವಂತ ಕೃತ್ಯದಿಂದ ಅಥವಾ ತೀವ್ರ ನಿರ್ಲಕ್ಷ್ಯದಿಂದ ಸಾರ್ವಜನಿಕ ರಸ್ತೆ/ಮಾರ್ಗಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದರೆ ಅಥವಾ ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡಿದರೆ ಬಿಎನ್‌ಎಸ್ 285 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

  • ಈ ಕಾಯ್ದೆಯಡಿ ಅಪರಾಧ ಸಾಬೀತಾದರೆ ಗರಿಷ್ಠ 5,000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ.

  • ಪ್ರಸ್ತುತ ಈ ಕಾಯ್ದೆಯು ಜಾಮೀನು ರಹಿತವಲ್ಲದ್ದು (ಜಾಮೀನು ಸಿಗಬಹುದಾದ ಪ್ರಕರಣ) ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಬಿಡಾಡಿ ದನಗಳಿಂದ ಹೆಚ್ಚುತ್ತಿರುವ ಟ್ರಾಫಿಕ್ ಕಿರಿಕಿರಿಗೆ ಸಂಚಾರ ಪೊಲೀಸರು ತೆಗೆದುಕೊಂಡಿರುವ ಈ ಕಠಿಣ ಕ್ರಮ ಹಸುಗಳ ಮಾಲೀಕರಿಗೆ ಎಚ್ಚರಿಕೆಯ ಸಂದೇಶವಾಗಿದೆ