ಮಂಗಳೂರು: ತಪಸ್ಯ ಫೌಂಡೇಶನ್ ವತಿಯಿಂದ 4ನೇ ಆವೃತ್ತಿಯ ಮಂಗಳೂರು ಟ್ರಯತ್ಲಾನ್, ಮಂಗಳೂರು ಬೀಚ್ ಮ್ಯಾರಥಾನ್ ಹಾಗೂ ಆಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್ ಜ.9ರಿಂದ 11ರವರೆಗೆ ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯಲಿದೆ.
ಪತ್ರಿಕಾಗೋಗೋಷ್ಠಿಯಲ್ಲಿ ಈ ಕುರಿತು ತಪಸ್ಯ ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ಸಬಿತಾ ಆರ್.ಶೆಟ್ಟಿ ಅವರು ಮಾಹಿತಿ ನೀಡಿ, ಈ ಉತ್ಸವದಲ್ಲಿ ಸಂಗ್ರಹವಾಗುವ ನಿಧಿ ಕ್ಯಾನ್ಸರ್ ಪ್ಯಾಲಿಯೇಟಿವ್ ಕೇರ್‌ಗೆ ಬಳಕೆಯಾಗಲಿದೆ ಎಂದರು.
ಟ್ರಯತ್ಲಾನ್ ಸಂಬಂಧಿತ ಸ್ಪರ್ಧೆಗಳಲ್ಲದೆ ಎಸ್‌ಎಫ್‌ಐ ನ್ಯಾಶನಲ್ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್, ಅಗ್ರಿ ಟೆಕ್ ಎಕ್ಸ್‌ಪೋ, ರಾಜ್ಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ, ಕೆಡಬ್ಲ್ಯು,ಎ ರಾಜ್ಯ ಮಟ್ಟದ ಬೀಚ್ ಕುಸ್ತಿ, ಕವಿಮಜರ್ ಬೀಚ್ ಸೈಡ್ ಸ್ಟಾರ್ಟಪ್ ಕಾನ್ ಕ್ಲೀವ್, ಬೈಕ್ ಸ್ಟಂಟ್ ಶೋ, ನೃತ್ಯಾಂತರ ನೃತ್ಯ ಸ್ಪರ್ಧೆ ನಡೆಯಲಿವೆ ಎಂದು ವಿವರಿಸಿದರು.
ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್
ಇದೇ ವೇಳೆ, ಕರ್ನಾಟಕ ಕುಸ್ತಿ ಸಂಘ ವತಿಯಿಂದ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್ ನಡೆಯಲಿದೆ. ಜ. 9ರಂದು ಸಂಜೆ 4ಕ್ಕೆ ಸ್ಪರ್ಧೆಗೆ ಚಾಲನೆ ದೊರೆಯಲಿದ್ದು ಅಂಡರ್ 15 ಮತ್ತು ಅಂಡರ್ 17 ವಯೋಮಿತಿ ಹಾಗೂ ಹಿರಿಯ ವಿಭಾಗ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಗಳು ನಡೆಯಲಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲದೇ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿರುವ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ.
ಈ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದವರು ರಾಷ್ಟ್ರೀಯ 2925 ರೆಸ್ಲಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಲಿದ್ದಾರೆ. ಜ. 9ರಂದು ಬೆಳಗ್ಗೆ 8ರಿಂದ ಕುಸ್ತಿಪಟುಗಳ ದೇಹತೂಕ ಪಡೆಯಲಾಗುವುದು. ಮಧ್ಯಾಹ್ನ 3.30ರಿಂದ ಕುಸ್ತಿ ಪಂದ್ಯಾಟ ಆರಂಭವಾಗಲಿದೆ. ಜ. 10ರಂದು
.ಸಂಜೆ 3.30ಕ್ಕೆ ಎಲ್ಲ ವಿಭಾಗಗಳ ಫೈನಲ್ ಪಂದ್ಯಾಟ ನಡೆಯಲಿದೆ ಎಂದು ಕರ್ನಾಟಕ ಬೀಚ್ ರೆಸ್ಲಿಂಗ್ ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಶೆಟ್ಟಿತಿಳಿಸಿದರು.
ಟ್ರಯತ್ಲಾನ್ ವಿವರ
ಜ.10ರಂದು ಕೂಳೂರು ಕೆಐಒಸಿ ಎಲ್ ಜಂಕ್ಷನ್‌ನಿಂದ ಡ್ಯುಯತ್ಲಾನ್ (40 ಕಿ.ಮೀ ಸೈಕ್ಲಿಂಗ್ ಹಾಗೂ 10 ಕಿ.ಮೀ ರನ್ನಿಂಗ್), 40 ಕಿ.ಮೀ ಡ್ರಮ್ ಸೈಕ್ಲಿಂಗ್ ರೇಸ್ ನಡೆಯಲಿದೆ.
ಜ. 11ರಂದು ತಣ್ಣೀರುಬಾವಿ ಬೀಚ್ ಸರ್ಫ್ ಕ್ಲಬ್ ನಲ್ಲಿ ಒಲಿಂಪಿಕ್ ಡಿಸ್ಟನ್ಸ್ ಟ್ರಯತ್ಲಾನ್ (105 ಮೀ. ಸ್ವಿಮ್, 40 ಕಿ.ಮೀ ಸೈಕ್ಲಿಂಗ್,10 ಕಿ.ಮೀ ರನ್), ಸ್ಟಿಂಟ್ ಟ್ರಯತ್ಲಾನ್ (ಸೈಕ್ಲಿಂಗ್, 5 ಕಿ.ಮೀ ರನ್), ಟೀಂ ರಿಲೇ , 1000 2. ಸ್ವಿಮ್, 500 ಮೀ. ಫನ್ ಸ್ವಿಮ್, ಅಕ್ಷಾತ್ವಾನ್, ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10 ಕೆ ಡ್ರಮ್ ರನ್, 5ಕೆ ಫನ್ ರನ್, 2ಕೆ ಚಾರಿಟಿ ವಾಕ್ ನಡೆಯಲಿದೆ, ಸುಮಾರು 5,500 ಮಂದಿ ಪಾಲ್ಗೊಳ್ಳುತ್ತಿದ್ದಾರೆ ಎಂದು ರಿತೇಶ್ ಶೆಟ್ಟಿ ತಿಳಿಸಿದರು
ನವೀನ್ ಹೆಗ್ಡೆ ರಿತೇಶ್ ಶೆಟ್ಟಿ ಮುಹಮ್ಮದ್, ಅರವಿಂದ್, ಕರುಣಾಕರ್ ಉಪಸ್ಥಿತರಿದ್ದರು.
