ಮಂಗಳೂರು: 20ವರ್ಷದ ಯುವತಿ ಗುರುಪುರ ನದಿಗೆ ಹಾರಿ ಪ್ರಾಣಬಿಟ್ಟ ಯುವತಿ


ಮಂಗಳೂರು: ಸ್ನೇಹಿತೆಯೊಂದಿಗೆ ಸ್ಕೂಟರ್‌ನಲ್ಲಿ ಬಂದ ಯುವತಿಯೋರ್ವಳು ಗುರುಪುರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಮೂಡುಬಿದಿರೆಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನವ್ಯಾ(20) ಎಂದು ತಿಳಿದುಬಂದಿದೆ. 

ನವ್ಯಾ ನಿಡ್ಡೋಡಿಯ ತನ್ನ ಸ್ನೇಹಿತೆಯೊಂದಿಗೆ ಸ್ಕೂಟರ್‌ನಲ್ಲಿ ಬಂದಿದ್ದಳು‌. ಗುರುಪುರ ಸೇತುವೆ ಬಳಿ ಸ್ಕೂಟರ್ ನಿಲ್ಲಿಸಿ ತಾನು ನದಿಗೆ ಹಾರುತ್ತೇನೆ ಎಂದಿದ್ದಾಳೆ. ಜೊತೆಗಿದ್ದ ಸ್ನೇಹಿತೆ ಕೈಹಿಡಿದು ಎಳೆದರೂ ಆಕೆಯ ದೂಡಿ ನದಿಗೆ ಹಾರಿದ್ದಾಳೆ. ಅಗ್ನಿಶಾಮಕ ದಳ ತಕ್ಷಣ ಶೋಧ ಕಾರ್ಯ ನಡೆಸಿ ಯುವತಿಯನ್ನು ಮೇಲಕ್ಕೆತ್ತಿದರೂ, ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾಳೆ.