ಕಾಂಗ್ರೆಸ್ ಬಲಗೊಳ್ಳಬೇಕೆಂದು ನಾನು ಕೂಡ ಬಯಸುತ್ತೇನೆ: ದಿಗ್ವಿಜಯ್ ಸಿಂಗ್ ಅಭಿಪ್ರಾಯ ಬೆಂಬಲಿಸಿದ ಶಶಿ ತರೂರ್

ಕಾಂಗ್ರೆಸ್ ಬಲಗೊಳ್ಳಬೇಕೆಂದು ನಾನು ಕೂಡ ಬಯಸುತ್ತೇನೆ: ದಿಗ್ವಿಜಯ್ ಸಿಂಗ್ ಅಭಿಪ್ರಾಯ ಬೆಂಬಲಿಸಿದ ಶಶಿ ತರೂರ್

ಕಾಂಗ್ರೆಸ್ ಬಲಗೊಳ್ಳಬೇಕೆಂದು ನಾನು ಕೂಡ ಬಯಸುತ್ತೇನೆ: ದಿಗ್ವಿಜಯ್ ಸಿಂಗ್ ಅಭಿಪ್ರಾಯ ಬೆಂಬಲಿಸಿದ ಶಶಿ ತರೂರ್

ನವದೆಹಲಿ
ನಮ್ಮ ಪಕ್ಷದ ಸಂಘಟನೆಯನ್ನು ಬಲಪಡಿಸಬೇಕೆಂದು ನಾನೂ ಬಯಸುತ್ತೇನೆ, ಅದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುವ ಮೂಲಕ ತಮ್ಮ ಸಹೋದ್ಯೋಗಿ ದಿಗ್ವಿಜಯ ಸಿಂಗ್ ಅವರ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಬೆಂಬಲಿಸಿದ್ದಾರೆ.
ರವಿವಾರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ 140ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ತರೂರ್ ಅವರು ದಿಗ್ವಿಜಯ್ ಸಿಂಗ್ ಪಕ್ಕದಲ್ಲಿಯೇ ಕುಳಿತಿದ್ದರು.
ಸಿಂಗ್ ಪಕ್ಕದಲ್ಲಿ ಕುಳಿತಿದ್ದಾಗ ಇಬ್ಬರೂ ಅಭಿಪ್ರಾಯದ ಕುರಿತು ಚರ್ಚಿಸಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ನಾವು ಪರಸ್ಪರ ಮಾತನಾಡುತ್ತಲೇ ಇರುತ್ತೇವೆ, ನಾವು ಸ್ನೇಹಿತರು ಮತ್ತು ಪರಸ್ಪರ ಮಾತನಾಡುತ್ತೇವೆ' ಎಂದು ಹೇಳಿದ್ದಾರೆ.
"ಇಂದು ಕಾಂಗ್ರೆಸ್ಸಿನ 140ನೇ ಸಂಸ್ಥಾಪನಾ ದಿನ. ಇದು ಪಕ್ಷಕ್ಕೆ ಬಹಳ ಮುಖ್ಯವಾದ ಘಟನೆಯಾಗಿದೆ. ಇದು ನಮ್ಮ ಗಮನಾರ್ಹ ಇತಿಹಾಸ ಮತ್ತು ಪಕ್ಷವು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ನಾವು ಹಿಂತಿರುಗಿ ನೋಡುವ ದಿನವಾಗಿದೆ" ಎಂದು ಅವರು ತಿಳಿಸಿದ್ದಾರೆ.
"1885 ರಲ್ಲಿ ನಡೆದ ಮೊದಲ ಅಧಿವೇಶನದಿಂದ, ಪಕ್ಷವು ರಾಷ್ಟ್ರದ ಪ್ರಜಾಪ್ರಭುತ್ವ ಪ್ರಯಾಣ ಮತ್ತು ರಾಜಕೀಯ ವಿಕಾಸದ ಮೂಲಾಧಾರವಾಗಿದೆ. ಇಂದು ಇಂದಿರಾ ಭವನದಲ್ಲಿ ಈ ಸಂದರ್ಭವನ್ನು ಗಂಭೀರತೆ ಮತ್ತು ಸೌಹಾರ್ದತೆಯಿಂದ ಗುರುತಿಸಲಾಗಿದೆ" ಎಂದು ತರೂರ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ದಿಗ್ವಿಜಯ್ ಸಿಂಗ್ ಪೋಸ್ಟ್ನಲ್ಲೇನಿದೆ?

ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರ ಕಾಲಿನ ಮುಂದೆ ನರೇಂದ್ರ ಮೋದಿ ಅವರು ಕುಳಿತಿರುವ ಹಳೆಯ ಫೋಟೋವನ್ನು ಹಂಚಿಕೊಂಡಿರುವ ಎಕ್ಸ್ನಲ್ಲಿ ಹಂಚಿಕೊಂಡಿರುವ ದಿಗ್ವಿಜಯ್ ಸಿಂಗ್, 'ನಾನು ಈ ಫೋಟೋವನ್ನು ಕ್ಯೂರಾದಲ್ಲಿ ನೋಡಿದೆ. ಇದು ತುಂಬಾ ಪ್ರಭಾವಶಾಲಿಯಾಗಿದೆ. ಒಬ್ಬ ತಳಮಟ್ಟದ ಆರ್‌ಎಸ್‌ಎಸ್ ಸ್ವಯಂಸೇವಕ ಮತ್ತು ಜನಸಂಘ (ಈಗ ಬಿಜೆಪಿ) ಕಾರ್ಯಕರ್ತ, ನಾಯಕರ ಕಾಲುಗಳ ಮುಂದೆ ನೆಲದ ಮೇಲೆ ಕುಳಿತು ಹೇಗೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ದೇಶದ ಪ್ರಧಾನಮಂತ್ರಿಯಾದರು. ಇದು ಸಂಘಟನೆಯ ಶಕ್ತಿ. ಜೈ ಸಿಯಾ ರಾಮ್' ಎಂದು ಬರೆದುಕೊಂಡಿದ್ದರು.

ಪೋಸ್ಟ್ ಕುರಿತು ದಿಗ್ವಿಜಯ್ ಸಿಂಗ್ ಸ್ಪಷ್ಟೀಕರಣ

ಈ ಪೋಸ್ಟ್ ಬೆನ್ನಲ್ಲೇ ದಿಗ್ವಿಜಯ್ ಸಿಂಗ್ ಅವರು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಂತರ ಅವರು ಹೊರಬಂದಾಗ ಪತ್ರಕರ್ತರು ಈ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, 'ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ, ನಾನು ಸಂಘಟನೆ ಬಗ್ಗೆ ಹೊಗಳಿರುವುದಾಗಿ' ಕಾಂಗ್ರೆಸ್ ಹಿರಿಯ ನಾಯಕ ಪ್ರತಿಕ್ರಿಯೆ ನೀಡಿದ್ದರು.