EMUNGARU @ SINCE 2017
BREAKING
[ಹೋಮ್] ಕರಾವಳಿ
[ಹೋಮ್] ರಾಜ್ಯ
[ಹೋಮ್] ಗ್ಲಾಮರ್
[ಹೋಮ್] ಕ್ರೈಂ
[ಹೋಮ್] ವಿಶೇಷ
[ಹೋಮ್] ದೇಶ ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ತಂತ್ರಜ್ಞಾನ
coastal

ಕ್ರಿಸ್‌ಮಸ್‌ನಿಂದ ವಿಮಾನಯಾನಿಗಳಿಗೆ ಸಿಹಿಸುದ್ದಿ: ಮಂಗಳೂರು - ನವಿ ಮುಂಬೈ ನಡುವೆ ಪ್ರತಿದಿನ ನೇರ ವಿಮಾನ ಸೇವೆ ಆರಂಭ



ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಈ ಕ್ರಿಸ್‌ಮಸ್ ದಿನದಿಂದ ಪ್ರತಿದಿನವೂ ನೇರ ವಿಮಾನ ಸೇವೆ ಆರಂಭವಾಗಲಿದೆ. ಈ ಸೇವೆಯನ್ನು ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ನಡೆಸಲಿದೆ.

ಈ ಹೊಸ ಮಾರ್ಗದಲ್ಲಿ ಮಂಗಳೂರು - ನವಿ ಮುಂಬೈ ನಡುವೆ ದೈನಂದಿನ ಒಟ್ಟು 5ವಿಮಾನಗಳು ಸಂಚಾರ ಆರಂಭಿಸಲಿದೆ. ಅದರಲ್ಲಿ 4 ಇಂಡಿಗೋ ಸಂಸ್ಥೆಯ ವಿಮಾನಗಳಾಗಿದೆ‌. ಒಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯದು.

* ನವಿ ಮುಂಬೈ - ಮಂಗಳೂರು(6E 865)  ನಡುವೆ  ಬೆಳಗ್ಗೆ 10:40 ಮತ್ತು ಮಧ್ಯಾಹ್ನ 12:10ಕ್ಕೆ ಪ್ರತಿದಿನವೂ ವಿಮಾನ ಸಂಚಾರ ನಡೆಯಲಿದೆ.
* ಮಂಗಳೂರು - ನವಿ ಮುಂಬೈ(6E 866) ನಡುವೆ ಸೋಮವಾರ ಮತ್ತು ಗುರುವಾರ ಸಂಜೆ 4.05ಕ್ಕೆ ಮತ್ತು 5.45ಕ್ಕೆ ವಿಮಾನ ಸಂಚಾರವಿರಲಿದೆ.
*ಮಂಗಳೂರು - ನವಿ ಮುಂಬೈ(6E 866) ನಡುವೆ ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಮಧ್ಯಾಹ್ನ 12:40ಕ್ಕೆ  ಮತ್ತು 2:20ಕ್ಕೆ ವಿಮಾನ ಸಂಚಾರ ಇರಲಿದೆ.

ಈ ಹೊಸ ಸಂಪರ್ಕದಿಂದ ವ್ಯಾಪಾರಿಗಳು, ಪ್ರವಾಸಿಗರು ಹಾಗೂ ಕರಾವಳಿ-ಮುಂಬೈ ನಡುವೆ ಓಡಾಡುವ ಸಾವಿರಾರು ಮಂದಿಗೆ ದೊಡ್ಡ ಮಟ್ಟದ ಸೌಲಭ್ಯವಾಗಲಿದೆ. ಪ್ರಸ್ತುತ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ (ಛತ್ರಪತಿ ಶಿವಾಜಿ) ಹಾಗೂ ತಿರುವನಂತಪುರಂ – ಈ ಆರು ದೇಶೀಯ ತಾಣಗಳಿಗೆ ವಿಮಾನ ಸಂಪರ್ಕವಿದೆ. ನವಿ ಮುಂಬೈ ಏಳನೇ ದೇಶೀಯ ಗಮ್ಯಸ್ಥಾನವಾಗಲಿದೆ. ಈ ಸೇವೆ ಕ್ರಿಸ್‌ಮಸ್ ದಿನದಿಂದಲೇ ಆರಂಭವಾಗುತ್ತಿರುವುದು ಪ್ರವಾಸಿಗರಿಗೆ ಸಿಹಿ ಸುದ್ದಿಯಾಗಿದೆ.

📢 ಇ ಮುಂಗಾರು WhatsApp ಚಾನೆಲ್ — ತಕ್ಷಣದ ಬ್ರೇಕಿಂಗ್ ನ್ಯೂಸ್!