ಬೆಳ್ತಂಗಡಿ: ರಸ್ತೆ ಕಾಮಗಾರಿ ವಾಹನದಡಿ ಸಿಲುಕಿ ವೃದ್ಧ ಮೃತ್ಯು


ಬೆಳ್ತಂಗಡಿ: ಇಲ್ಲಿನ ಮದ್ದಡ್ಕದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ರಸ್ತೆ ಕಾಮಗಾರಿ ವಾಹನದಡಿ ಸಿಲುಕಿ ವೃದ್ಧರೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ. 

ಬಂಗಾಡಿ ನಿವಾಸಿಯಾಗಿರುವ ಈ ವೃದ್ಧ 
ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದರು‌. ಈ ವೇಳೆ ರಸ್ತೆ ಕಾಮಗಾರಿಯ ಯಂತ್ರವೊಂದು ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ವೃದ್ಧನಿಗೆ ಡಿಕ್ಕಿಯಾಗಿದೆ. ಈ ವೇಳೆ ಬಿದ್ದ ಅವರ ಮೇಲೆಯೇ ವಾಹನದ ಸಂಚರಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. 

ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.