ಆಳ್ವಾಸ್ ಕಾನೂನು ಕಾಲೇಜು: ಎನ್‌ಎಸ್‌ಎಸ್, ರೆಡ್‌ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ
ಮೂಡುಬಿದಿರೆ: ಆಳ್ವಾಸ್ ಕಾನೂನು ಕಾಲೇಜಿನ ನೂತನ ರಾಷ್ಟಿçÃಯ ಸೇವಾ ಯೋಜನೆ ಹಾಗೂ ರೆಡ್‌ಕ್ರಾಸ್ ಘಟಕಗಳ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ಕುವೆಂಪು ಸಭಾಭವನದಲ್ಲಿ ನೆರವೇರಿತು. ಯನಪೋಯ ವಿಶ್ವವಿದ್ಯಾಲಯದ ರಾಷ್ಟಿçÃಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜಕಿ ಹಾಗೂ ವಿಸ್ತರಣೆ ಮತ್ತು ಔಟ್‌ರೀಚ್ ಚಟುವಟಿಕೆಗಳ ನಿರ್ದೇಶಕಿ ಹಾಗೂ ಆಳ್ವಾಸ್‌ನ ಹಿರಿಯ ವಿದ್ಯಾರ್ಥಿನಿ ಡಾ ಅಶ್ವಿನಿ ಶೆಟ್ಟಿ ಉದ್ಘಾಟಿಸಿದರು.
ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕಾಲೇಜು ಅವಧಿಯಲ್ಲಿ ನೀಡಲ್ಪಡುವ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡರೆ, ಅದು ಜೀವನದ ದಿಕ್ಕನ್ನೇ ಬದಲಿಸಬಲ್ಲದು. ಎನ್‌ಎಸ್‌ಎಸ್‌ನಂತಹ ವೇದಿಕೆಗಳು ವಿದ್ಯಾರ್ಥಿಗಳಿಗೆ ನಾಯಕತ್ವ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಭಾವನೆ ಬೆಳೆಸುತ್ತವೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಅರಿಯುವ ಮತ್ತು ಪರಿಹಾರ ಮಾರ್ಗಗಳನ್ನು ಹುಡುಕುವ ಅಪರೂಪದ ಅವಕಾಶ ಇಲ್ಲಿ ದೊರಕುತ್ತದೆ. ವಿವಿಧ ನವೀನ ಯೋಜನೆಗಳು, ಸಂಶೋಧನಾ ಪ್ರಕಟಣೆಗಳು ಎನ್‌ಎಸ್‌ಎಸ್ ಚಟುವಟಿಕೆಗಳ ಮೂಲಕ ಸಾಧ್ಯವಾಗಬಲ್ಲದು. ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಅರಿವು ಮೂಡಿಸಲು ಕರ‍್ಯಕ್ರಮ ಹಮ್ಮಿಕೊಂಡು, ನಂತರ ಪ್ರೀ-ಟೆಸ್ಟ್ ಹಾಗೂ ಪೋಸ್ಟ್-ಟೆಸ್ಟ್ ವಿಧಾನದಲ್ಲಿ ಅಧ್ಯಯನ ನಡೆಸಿ, ಅದರ ಫಲಿತಾಂಶವನ್ನು ಸಂಶೋಧನಾ ಲೇಖನವಾಗಿ ಪ್ರಕಟಿಸಬಹುದು ಎಂದರು.
ಕೇAದ್ರ ಸರ್ಕಾರದ ಮೇರಾ ಯುವ ಭಾರತ್ ಯೋಜನೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಅನುಭವಾತ್ಮಕ ಕಲಿಕೆಯನ್ನು ಪಡೆಯಬಹುದು. ಇವುಗಳ ಮೂಲಕ ವಿದ್ಯಾರ್ಥಿಗಳು ನೈಜ ಜಗತ್ತಿನ ಅನುಭವವನ್ನು ಪಡೆದು, ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆಯನ್ನು ನೀಡಬಹುದು.
ದಕ್ಷಿಣ ಕನ್ನಡದವರು ಹಿಂದೆ ಸರ್ಕಾರದಿಂದ ವಿದ್ಯಾರ್ಥಿಗಳಿಗಾಗಿ ಅನೇಕ ಅನುದಾನಗಳು ಲಭ್ಯವಿವೆ. ಆದರೆ ದಕ್ಷಿಣ ಕನ್ನಡದ ಜನರು ಅವುಗಳ ಲಾಭ ಪಡೆಯುವಲ್ಲಿ ಸೋಲುತ್ತಿದ್ದಾರೆ. ಉತ್ತರ ಭಾರತದ ವಿದ್ಯಾರ್ಥಿಗಳು ಇದರ ಹೆಚ್ಚಿನ ಲಾಭಪಡೆಯುತ್ತಿದ್ದಾರೆ.
ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಎನ್‌ಎಸ್‌ಎಸ್‌ನ ಉದ್ದೇಶ ಸಮಾಜ ನಿರ್ಮಾಣ ಹಾಗೂ ಪರಸ್ಪರ ಬೆಳವಣಿಗೆ. ಸಮಾನ ಮನಸ್ಕರು ಜೊತೆಯಾಗಿ ಶ್ರಮಿಸಿದರೆ, ಬದಲಾವಣೆಯ ಶತಸಿದ್ಧ. ಕರ‍್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇಧ ಕಾಲೇಜಿನ ಪ್ರಾಚರ‍್ಯ ಡಾ ಸುಶೀಲ್ ಶೆಟ್ಟಿ, ಕಾನೂನು ಕಾಲೇಜಿನ ಪ್ರಾಚರ‍್ಯ ಪ್ರೋ ಮಹಾಂತೇಶ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಹರ್ಷಲ್ ನಿರೂಪಿಸಿ, ನಿಶಾಂತ್ ಪೂಜಾರಿ ಸ್ವಾಗತಿಸಿ, ನಿಶಿ ಕರ‍್ವೆ ವಂದಿಸಿದರು. ಡಾ ಅಶ್ವಿನಿ ಶೆಟ್ಟಿಯವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು
