ದ್ವೇಷ ಭಾಷಣ, ಜಾಮೀನು ಷರತ್ತು ಉಲ್ಲಂಘನೆ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ರಿಯಾಜ್ ಬಂಧನ

ದ್ವೇಷ ಭಾಷಣ, ಜಾಮೀನು ಷರತ್ತು ಉಲ್ಲಂಘನೆ: ಎಸ್‌ಡಿಪಿಐ ರಾಜ್ಯಾಧ್ಯಕ್ಷ ರಿಯಾಜ್ ಬಂಧನ





ದ್ವೇಷ ಭಾಷಣ, ಜಾಮೀನು ಷರತ್ತು ಉಲ್ಲಂಘನೆ ಮಾಡಿದ ಆರೋಪದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಎಸ್‌ಡಿಪಿಐ ರಾಜ್ಯ ಅಧ್ಯಕ್ಷ ರಿಯಾಜ್ ಅವರನ್ನು ಬಂಧನ ಮಾಡಲಾಗಿದೆ.


ಉಡುಪಿ ಜಿಲ್ಲಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ದ್ವೇಷ ಭಾಷಣ ಮತ್ತು ಜಾಮೀನು ಷರತ್ತು ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ರಿಯಾಜ್‌ ಕಡಂಬು ಅವರನ್ನು ಬಂಧಿಸಲಾಗಿದೆ.


ಜಾಮೀನು ಷರತ್ತು ಉಲ್ಲಂಘಿಸಿ, ದ್ವೇಷ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಕಳೆದ ಗುರುವಾರ ರಾತ್ರಿ ಆರೋಪಿಯನ್ನು ಬಂಧಿಸಲಾಗಿತ್ತು.


ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.