2019 ಕುಕ್ಕಾಜೆ ಮಸೀದಿಗೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ಮುಖಂಡ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ರವರ ಕೊಲೆ ಯತ್ನ ಪ್ರಕರಣದ ಆರೋಪಿಗಳು ಖುಲಾಸೆ
2019 ಕುಕ್ಕಾಜೆ ಗ್ರಾಮದ ಕಾಂಗ್ರೆಸ್ ಮುಖಂಡ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಇವರಿಗೆ ನಡೆದ ಹಲ್ಲೆ ಪ್ರಕರಣ ಕ್ಕೆ ಸಂಬಂದಿಸಿದಂತೆ 11 ಜನ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಈ ಪ್ರಕರಣದ ಸಾರಾಂಶವೇನೆಂದರೆ ಮಂಚಿ ಗ್ರಾಮದ ಮೊಹಿಯುದ್ದೀನ್ ಜುಮ್ಮಾ ಮಸೀದಿಗೆ ದ.ಕ. ವಕ್ಸ್ ಬೋರ್ಡ್ ನಿಯಮಾನುಸಾರ ಆಡಳಿತ ನಡೆಯುತ್ತಿಲ್ಲ ಎಂದು ಹಾಗೂ ಎಸ್.ಕೆ.ಎಸ್.ಎಸ್. ಸಂಘಟನೆಯ ತರವಾದ ಬೈಲಾವನ್ನು ಜಮಾತಿನ ಆಡಳಿತ ನಡೆಸುವ ಮಸೀದಿಯಲ್ಲಿ ನಡೆಸುವ ಬಗ್ಗೆ ಅಲ್ಲದೆ ಮಸೀದಿಯ ಪಕ್ಕ ರಾಜ್ಯ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರಾದ ಶಾದಿ ಮಹಲ್ ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ಆಗಿರುವ ಕುರಿತು ಅಬ್ದುಲ್ ರಝಾಕ್‌ರವರು ಆಕ್ಷೇಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಕಮಿಟಿಯ ಬೆಂಬಿಲಗರು ಮತ್ತು ಆಡಳಿತ ಪದಾಧಿಕಾರಿಗಳಾದ ಆರೋಪಿಗಳಿಗೆ ಹಗೆ ಇದ್ದು ದಿನಾಂಕ 30/11/2019 ರಂದು ಅಬ್ದುಲ್ ರಝಾಕ್ ಕುಕ್ಕಾಜೆ ವೈದ್ಯರ ಸಂದರ್ಶನಕ್ಕೆ ಕುಳಿತುಕೊಂಡಿರುವಾಗ ಆರೋಪಿತರುಗಳು ತಲ್ವಾರ್‌ಗಳು ಮತ್ತು ಮರದ ದೊಣ್ಣೆಗಳನ್ನು ಹಿಡಿದುಕೊಂಡು ಅಬ್ದುಲ್ ರಝಾಕ್ ರವರನ್ನು ಅವ್ಯಾಚ್ಯ ಶಬ್ದಗಳಿಂದ ಬೈದು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಅವರ ತಲೆಗೆ ಕೈಗೆ ಹೊಡೆದು ಕೊಲೆ ಯತ್ನ ಮಾಡಿರುತ್ತಾರೆ ಎಂಬ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಪೋಲೀಸರು ತನಿಖೆ ನಡೆಸಿ 11 ಆರೋಪಿಗಳಾದ ಬಶೀರ್. ತನ್ನೀರ್ ಮೊಹಮ್ಮದ್ ಕಬೀರ್, ಕುನ್ನಿ ಮೋನು ಆಲಿಯಾಸ್ ಮೊಹಿದ್ದಿನ್ ಅಬ್ಬ, ಅಬೂಬಕ್ಕರ್ ತೋಟ, ಅದಮ್, ಕೆ.ಎನ್.ಮಜೀದ್, ನೌಷಾದ್ ಗುರ್ಮೆ, ಹಸೈನರ್.ಪಿ.ಕೆ ಮೊಹಮ್ಮದ್ ರಫೀಕ್, ಕೆ.ಇಸ್ಮಾಯಿಲ್ ಇವರುಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದರು.
ಈ ಹಲ್ಲೆ ಪ್ರಕರಣದಲ್ಲಿ 40 ದಾಖಲೆಗಳನ್ನು ಹಾಗೂ 20 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಗೌರವಾನ್ವಿತ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ. ಜಗದೀಶ್ ವಿ.ಎನ್ ರವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.
ಆರೋಪಿಗಳ ಪರವಾಗಿ ಮಂಗಳೂರಿನ ವಕೀಲರಾದ ಬಿ. ಅರುಣ ಬಂಗೇರ ಮತ್ತು ರಿಹಾನ ಪರ್ವೀನ್ ವಾದಿಸಿದ್ದರು.
