ಬೆಂಗಳೂರು: ಬಾಲಕನನ್ನು ಅಪಹರಿಸಿ ಕೊಲೆಗೈದ ಪ್ರಕರಣ- ಕೊನೆಗೂ ಬಯಲಾಯ್ತು ಮರ್ಡರ್ ಮಿಸ್ಟ್ರಿ
ಬೆಂಗಳೂರು: ನಿಶ್ಚಿತ್ ಎಂಬ ಬಾಲಕನನ್ನು ಅಪಹರಿಸಿ ಬನ್ನೇರುಘಟ್ಟ ಸಮೀಪ ಕೊಲೆಗೈದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಪ್ರಕರಣದಲ್ಲಿ ಇಬ್ಬರು ಅರೆಸ್ಟ್ ಆಗಿದ್ದಾರೆ. ಇದೀಗ ಬಾಲಕನನ್ನು ಅಪಹರಿಸಿ ಕೊಲೆಗೈದ ಕಾರಣ ರಿವೀಲ್ ಆಗಿದೆ. ಪೊಲೀಸ್ ತನಿಖೆಯಲ್ಲಿ ಆರೋಪಿ ಗುರುಮೂರ್ತಿಯ ಸೈಕೋ ಮನಸ್ಥಿತಿ ಗೊತ್ತಾಗಿದೆ. ಆತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ವಿಚಾರ ಬಾಲಕನ ಮನೆಯವರಿಗೆ ಗೊತ್ತಾಗುತ್ತದೆ ಎಂದು ತಿಳಿದು ಕೊಲೆ ಮಾಡಲಾಗಿದೆ.
ಸೈಕೋ ಮನಸ್ಥಿತಿಯ ಆರೋಪಿ ಗುರುಮೂರ್ತಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕ ಇದಕ್ಕೆ ವಿರೋಧ ವ್ಯಕ್ತಪಡಿಸಿದಕ್ಕೆ ಗಂಟಲಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಮೃತದೇಹ ಸುಟ್ಟು ಹಾಕಿದ್ದ. ಬಳಿಕ ಕೊಲೆ ವಿಷಯ ಮರೆಮಾಚಲು ಕಿಡ್ನಾಪ್ ಕಥೆ ಕಟ್ಟಿದ್ದು, ಬಾಲಕನ ಮನೆಯವರಿಗೆ ಕರೆ ಮಾಡಿ 5 ಲಕ್ಷ ರೂ. ಗೆ ಡಿಮ್ಯಾಂಡ್ ಮಾಡಿದ್ದ.
ಇನ್ನು ಗುರುಮೂರ್ತಿ 13ವರ್ಷದ ಬಾಲಕಿಯನ್ನು ಬಿಟ್ಟಿರಲಿಲ್ಲ. ಬಾಲಕಿಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. 2020ರಲ್ಲಿ ಆರೋಪಿ ಮೇಲೆ ಪೋಕ್ಸೊ ಕೇಸ್ ದಾಖಲಾಗಿತ್ತು. ಕೋಣನಕುಂಟೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿ, ಬಳಿಕ ಬೇಲ್ ಮೇಲೆ ಹೊರಬಂದಿದ್ದ.
ಇದೀಗ ನಿಶ್ಚಿತ್ ಮೇಲೆ ಕೂಡ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ. ಇತ್ತೀಚೆಗೆ ಹುಳಿಮಾವು ಪೊಲೀಸರು ಆರೋಪಿಗಳಾದ ಗುರುಮೂರ್ತಿ ಮತ್ತು ವೇಣುಗೋಪಾಲ್ಗೆ ಗುಂಡು ಹಾರಿಸಿ ಬಂಧಿಸಿದ್ದರು. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಅರಕೆರೆ ವೈಶ್ಯ ಬ್ಯಾಂಕ್ ಕಾಲೋನಿ ನಿವಾಸಿಯಾಗಿದ್ದ ಅಚ್ಯುತ್ ರೆಡ್ಡಿ ಮತ್ತು ಸವಿತಾ ಅವರ ಒಬ್ಬನೇ ಪುತ್ರ ಈ ನಿಶ್ಚಿತ್. ಅಚ್ಯುತ್ ರೆಡ್ಡಿ ಕಾಲೇಜೊಂದರಲ್ಲಿ ಪ್ರಾಧ್ಯಪಕಾರಾಗಿದರೆ, ತಾಯಿ ಸವಿತಾ ಸಾಫ್ಟವೇರ್ ಎಂಜಿನಿಯರ್. ಪುತ್ರನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಪೋಷಕರಿಗೆ ಬರ ಸಿಡಿಲೇ ಬಂದೆರಗಿದಂತಗಾಗಿತ್ತು. ನಿಶ್ಚಿತ್ನನ್ನು ಬನ್ನೇರುಘಟ್ಟದ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು.
ನಿಶ್ಚಿತ್ನನ್ನ ಕೊಂದಿದ್ದು ಬೇರಾರೂ ಅಚ್ಯುತ್ ರೆಡ್ಡಿ ಮನೆಯಲ್ಲಿ ಸ್ಪೇರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಗುರುಮೂರ್ತಿ ಮತ್ತು ಅವನ ಸ್ನೇಹಿತ ಗೋಪಾಲಕೃಷ್ಣ. ಸ್ಪೇರ್ ಡ್ರೈವರ್ ಆಗಿದ್ರಿಂದ ಅಚ್ಯುತ್ ರೆಡ್ಡಿ ನಿವಾಸಕ್ಕೆ ಆಗಾಗ ಬಂದು ಹೋಗ್ತಿದ್ದ ಗುರುಮೂರ್ತಿ. ಹೀಗಾಗಿ ಬಾಲಕ ನಿಶ್ಚಿತ್ಗೆ ಗುರುಮೂರ್ತಿ ಪರಿಚಯ ಇತ್ತು. ಬುಧವಾರ ಸಂಜೆ ಟ್ಯೂಶನ್ಗೆ ಹೋಗಿದ್ದ ನಿಶ್ಚಿತ್ನನ್ನ ಪಾನಿಪುರಿ ಕೊಡಿಸೋದಾಗಿ ಹೇಳಿ ಕರೆದೊಯ್ದಿದ್ದಾನೆ. ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಲಾಗಿತ್ತು.