-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
 ಎಳ್ಳಾರೆ ಮುಳ್ಕಾಡು ಶಾಲೆಯಲ್ಲಿ 'ಆಟಿಡೊಂಜಿ ಜೋಕ್ಲೆನ ಕೂಟ': ಸಂಸ್ಕೃತಿ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ

ಎಳ್ಳಾರೆ ಮುಳ್ಕಾಡು ಶಾಲೆಯಲ್ಲಿ 'ಆಟಿಡೊಂಜಿ ಜೋಕ್ಲೆನ ಕೂಟ': ಸಂಸ್ಕೃತಿ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ



ಕಾರ್ಕಳ, ಆಗಸ್ಟ್ 5:ತುಳುನಾಡಿನ ವೈಭವದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಪರಿಸರದ ಮಹತ್ವವನ್ನು ಬೋಧಿಸುವ ದೃಷ್ಟಿಯಿಂದ ಎಳ್ಳಾರೆ ಗ್ರಾಮದ ಮುಳ್ಕಾಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಆಟಿಡೊಂಜಿ ಜೋಕ್ಲೆನ ಕೂಟ’ ಎಂಬ ವಿಶಿಷ್ಟ ಕಾರ್ಯಕ್ರಮವು ಮಂಗಳವಾರ ಜರುಗಿತು.


ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭಾಸ್ಕರ್ ಟಿ ಅವರು, “ತುಳುನಾಡಿನ ಯಕ್ಷಗಾನ, ದೈವಾರಾಧನೆ, ನಾಗಾರಾಧನೆ ಮೊದಲಾದ ಪರಂಪರೆಗಳು ಇಂದು ನಶಿಸುತ್ತಿರುವ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಹೊಸ ಪೀಳಿಗೆಗೆ ಸಂಸ್ಕೃತಿಯ ಅರಿವು ಮೂಡಿಸುತ್ತವೆ. ಗ್ರಾಮೀಣ ಶಾಲೆಯಲ್ಲಿ ಈ ರೀತಿಯ ಶ್ಲಾಘನೀಯ ಚಟುವಟಿಕೆ ನಡೆಯುತ್ತಿದೆ ಎಂಬುದು ಸಂತಸಕರ” ಎಂದರು. ಅವರು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಉದ್ಯಮಿ ಕಮಲಾಕ್ಷ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, “ವಿದ್ಯೆ ಇಲ್ಲದವನು ಪಶು ಸಮಾನ. ವಿದ್ಯೆಯಿಂದ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣ ಬೆಳೆಯುತ್ತದೆ. ಮಕ್ಕಳಲ್ಲಿ ಗೌರವ ಮತ್ತು ವಿನಯಶೀಲತೆ ಬೆಳೆಬೇಕಾಗಿದೆ" ಎಂಬ ಸಂದೇಶ ನೀಡಿದರು.


ಕಾರ್ಯಕ್ರಮದ ರೂವಾರಿ ಹಾಗೂ SDMC ಅಧ್ಯಕ್ಷ ಸತೀಶ್ ಪೂಜಾರಿ ಮುಳ್ಳಾಡು ಮಾತನಾಡಿ, “ಸನಾತನ ಧರ್ಮದಲ್ಲಿ ಋಷಿ ಮತ್ತು ಕೃಷಿ ಪರಂಪರೆಗಳಿಗೆ ಮಹತ್ವವಿದೆ. ಶಾಲೆಯ 62 ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೆಸರಿನಲ್ಲಿ 62 ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ನೀಡಲಾಗಿದೆ. ಜೊತೆಗೆ ಆಟಿ ತಿಂಗಳ ಹಿನ್ನೆಲೆಯಲ್ಲಿ ಹಳೆಯ ಕಾಲದ ಜೀವನ ಶೈಲಿಯ ಪರಿಚಯವನ್ನೂ ಈ ಮೂಲಕ ನೀಡಲಾಗಿದೆ” ಎಂದು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ್ ಹೆಗ್ಡೆ ವಹಿಸಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ದಿನೇಶ್ ಪೈ ಮುನಿಯಾಲು, ಕವಿತಾ ರಾಮಕೃಷ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾಶಿವ ಪ್ರಭು, ಉಡುಪಿ ನಗರಸಭೆ ಸದಸ್ಯ ಸದಾನಂದ ಕುಲಾಲ್, ಜ್ಯೋತಿ ಹರೀಶ್, ಅರುಣ್ ಹೆಗ್ಡೆ, ಮಾಲತಿ ಕುಲಾಲ್, ವಿಶ್ವನಾಥ ನಾಯಕ್, ರವೀಂದ್ರ ಪ್ರಭು ಕಡ್ತಲ, ಅರಣ್ಯಾಧಿಕಾರಿ ಕರುಣಾಕರ ಜೆ. ಆಚಾರ್ಯ, ರವಿ ಪೂಜಾರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.


ಶಿಕ್ಷಕ ಸುಭಾಷ್ ಕಾರ್ಯಕ್ರಮವನ್ನು ನಿರೂಪಿಸಿದರು.ಮುಖ್ಯೋಪಾಧ್ಯಾಯ ಜನಾರ್ದನ ಬೆಳಿರಾಯ ಸ್ವಾಗತ ಭಾಷಣ ಮಾಡಿದರು. ಶಿಕ್ಷಕಿ ರೂಪಶ್ರಿ ಪ್ರಭು ಹಾಗೂ ಇತರ ಶಿಕ್ಷಕರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.


Ads on article

Advertise in articles 1

advertising articles 2

Advertise under the article