ಕೆನರಾ ಎಂಜಿನಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸಂಸ್ಥೆಯ ಮಾನ್ಯತೆ

 



ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿರುವ ಕೆನರಾ ಎಂಜಿನಿಯರಿಂಗ್ ಕಾಲೇಜಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸ್ವಾಯತ್ತ ಸಂಸ್ಥೆಯ ಮಾನ್ಯತೆ ನೀಡಿದೆ. ಇದರಿಂದ ಪಠ್ಯಕ್ರಮದಲ್ಲಿ ಬದಲಾವಣೆ, ಪರೀಕ್ಷೆ, ಉತ್ತಮ ಫಲಿತಾಂಶ ನೀಡಲು ಸಾಧ್ಯವಾಗಲಿದೆ ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್ ಹೇಳಿದರು.

 

.

 

ಮಂಗಳೂರಿನಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆನರಾ ಎಂಜಿನಿಯರಿಂಗ್ ಕಾಲೇಜು ರಜತ ಮಹೋತ್ಸವ ಸಂಭ್ರಮದ ಸಿದ್ದತೆಯಲ್ಲಿರು ವಾಗಲೇ ಸ್ಥಾನಮಾನ ಲಭಿಸಿರುವುದು ಹರ್ಷ ತಂದಿದೆ. ಶೈಕ್ಷಣಿಕ ಅನ್ವೇಷಣೆ, ಸರಳೀಕೃತ ದಕ್ಷತೆಯ ಹೊಸ ಅಧ್ಯಾಯ ಆರಂಭವಾಗಲಿದೆ. ಇದು ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಯ ಪರಂಪರೆ ಮತ್ತು ಮೂಲ ಆಶಯವನ್ನು ಇನ್ನಷ್ಟು ಬಲಗೊಳಿಸಿದಂತಾಗಿದೆ ಎಂದರು.

 


-

 

ಕೆನರಾ ಎಂಜಿನಿಯರಿಂಗ್ ಕಾಲೇಜು ಪ್ರಸ್ತುತ ಏಳು ಯುಜಿ ಎಂಜಿನಿಯರಿಂಗ್ ಕೋರ್ಸ್ಗಳನ್ನು ನೀಡುತ್ತಿದೆ. ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಶಿನ್

 

లని౯ంగా, ಇನ್ಸಾರ್ಮೇಶನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಆ್ಯಂಡ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಡಿಸೈನ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಬ್ಯುಸಿನೆಸ್ ಸಿಸ್ಟಮ್, ಮೆಕ್ಯಾನಿಕಲ್ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯ ರಿಂಗ್ ಕೋರ್ಸ್ಗಳಿವೆ ಎಂದರು.

 

ಕಾಲೇಜು ನ್ಯಾಕ್ನಿಂದ ಗ್ರೇಡ್ ಮಾನ್ಯತೆ ಹೊಂದಿದೆ. ಕಂಪ್ಯೂಟರ್ ಸೈನ್ಸ್, ಇನ್ನಾರ್ಮೇಶನ್ ಸೈನ್ಸ್, ಎಲೆಕ್ಟ್ರಾನಿಕ್ಸ್ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ಕೋರ್ಸ್ಗಳು 2028 ಜೂ.30 ವರೆಗೆ ಎನ್ಬಿಎ ಮಾನ್ಯತೆ ಹೊಂದಿವೆ. ಕಾಲೇಜು ಐಎಸ್ 9001:2015 ಮತ್ತು ಐಎಸ್ 21001: 2018 ಪ್ರಮಾಣಪತ್ರವನ್ನೂ ಪಡೆದಿದೆ ಎಂದರು.

 

ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಟಿ.ಗೋಪಾಲಕೃಷ್ಣ ಶೆಣೈ, ಉಪಾಧ್ಯಕ್ಷ ಕೆ. ಸುರೇಶ್ ಕಾಮತ್, ಕೋಶಾಧಿಕಾರಿ ಎಂ. ಜಗನ್ನಾಥ ಕಾಮತ್, ಕೆನರಾ ವಿಕಾಸ್ ಸಮೂಹ ಸಂಸ್ಥೆಗಳ ಸಂಯೋಜಕ ಬಸ್ತಿ ಪುರುಷೋತ್ತಮ ಶೆಣೈ, ಪ್ರಮುಖರಾದ ಡಿ.ವಿಕ್ರಮ್ ಪೈ, ರಾಘವೇಂದ್ರ ಕುಡ್ವ ಎಂ.ನರೇಶ್ ಶೆಣೈ, ಎಂಜಿನಿಯರಿಂಗ್ ಕಾಲೇಜು ಪ್ರಿನ್ಸಿಪಾಲ್ ಡಾ.ನಾಗೇಶ್ ಎಚ್.ಆರ್. ಉಪಸ್ಥಿತರಿದ್ದರು.

 

ಕಂಪನಿಗಳ ಪ್ಲೇಸ್ಮೆಂಟ್ ಡೈವ್ನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ

 

26 ಎಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಕಾಲೇಜು ಪ್ರಸ್ತುತ 2,171 ವಿದ್ಯಾರ್ಥಿಗಳನ್ನು ಹೊಂದಿದ್ದು 126 ಬೋಧಕರ ಪೈಕಿ 30 ಮಂದಿ ಪಿಎಚ್ಡಿ ಪದವೀಧರರಿದ್ದಾರೆ. ಕೆನರಾ ಎಂಜಿನಿಯರಿಂಗ್ ಕಾಲೇಜು ತನ್ನ ಪ್ಲೇಸ್ಮೆಂಟ್ಗಾಗಿ ಖ್ಯಾತಿ ಹೊಂದಿದ್ದು 2024-25 ಸಾಲಿನಲ್ಲಿ 152 ಪ್ರತಿಷ್ಠಿತ ಕಂಪನಿಗಳ ಪ್ಲೇಸ್ಮೆಂಟ್ ಡೈವ್ ಮೂಲಕ ಶೇ.73ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. 2024-25 ಸಾಲಿನಲ್ಲಿ ಶೇ.100 ಫಲಿತಾಂಶ ಪಡೆದಿದೆ. ಸುಸಜ್ಜಿತ ಲ್ಯಾಬ್ಗಳು, 705 ಕಂಪ್ಯೂಟಿಂಗ್ ಸಿಸ್ಟಂ, 600 ಎಂಬಿಪಿಎಸ್ ನೆಟ್ವರ್ಕ್, 2000 ಆಸನಗಳ ಅಡಿಟೋರಿಯಂ, 200 ಕೆವಿ ಸೋಲಾರ್ ಚಾವಣಿ ಹೊಂದಿದೆ. ಸಮಗ್ರ ಹಾಸ್ಟೆಲ್ ಸೌಲಭ್ಯ, ಆರೋಗ್ಯ, ಸಾರಿಗೆ, ಕೌನ್ಸೆಲಿಂಗ್ ಸೌಲಭ್ಯಗಳನ್ನೂ ಒದಗಿಸುತ್ತಿದೆ ಎಂದು ಎಂ.ರಂಗನಾಥ ಭಟ್ ತಿಳಿಸಿದರು.