ಉದ್ಯೊಗ ಗಳಿಕೆಯಿಂದ ಸಮಾಜಕ್ಕೆ ಆಸ್ತಿಯಾಗಿ : ದಿನೇಶ್ ಗುಂಡೂರಾವ್ `- ಆಳ್ವಾಸ್ ಪ್ರಗತಿ’-2025 ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ


 


ಮೂಡುಬಿದಿರೆ: ಶಿಕ್ಷಣ ವ್ಯಕ್ತಿಗಳಿಗೆ ಉದ್ಯೋಗ ಪಡೆಯಲು ಅರ್ಹರನ್ನಾಗಿಸುವುದರ ಜತೆಗೆ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ವೈಯಕ್ತಿಕವಾಗಿ ಸಶಕ್ತರನ್ನಾಗಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜನೆಗೊಂಡಿರುವ `ಆಳ್ವಾಸ್ ಪ್ರಗತಿ' 2 ದಿನಗಳ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಳ್ವಾಸ್ ವಿದ್ಯಾರ್ಥಿಗಳ ಭವಿಷ್ಯದ ದಾರಿಯನ್ನು ಸುಗಮಗೊಳಿಸಲು ವಿನೂತನ ಸಾಧ್ಯತೆಗಳನ್ನು ಪ್ರತಿ ವರ್ಷವೂ ತೆರೆದಿಡುತ್ತದೆ. ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರವಾಗಿ ಕಾಣದೆ ಸಮಾಜದ ಒಳಿತಿಗೆ ಶ್ರಮಿಸುವ ಸಂಸ್ಥೆಯ ಬದ್ಧತೆ ನಿಜಕ್ಕೂ ಪ್ರೇರಣೀಯ. ಉತ್ತಮ ಶಿಕ್ಷಣ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು ಸರ್ಕಾರದ ಹಾಗೂ ಸಮಾಜದ ಕರ್ತವ್ಯ. ಉದ್ಯೋಗ ಗಳಿಸಿ ಸ್ವಂತಿಕೆಯಿA ಬೆಳೆೆಯುವವರು ಇತರರನ್ನೂ ಬೆಳೆಸಿ ಸಮಾಜಕ್ಕೆ ಅಮೂಲ್ಯ ಆಸ್ತಿಯಾಗುತ್ತಾರೆ. ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಲು ಸಾಧ್ಯವಾಗದೇ ಇದ್ದಾಗ ಸಮಾಜಕ್ಕೆ ಹೊರೆಯಾಗಿ ಕಾಣುತ್ತಾರೆ. ಸಂಖ್ಯೆಯನ್ನು ಕಡಿಮೆಗೊಳಿಸುವ ಜವಾಬ್ದಾರಿ ಹೆಚ್ಚಾಗಬೇಕು. ದೇಶದಲ್ಲಿರುವ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿದಾಗ ದೇಶವು ಅತ್ಯುನ್ನತ ಸ್ಥಾನ ಗಳಿಸುತ್ತದೆ. ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ದೇಶದಲ್ಲಿ ಪರಸ್ಪರ ಪ್ರೀತಿ, ಭಾಂದವ್ಯಗಳನ್ನು ಬೆಳೆಸಲು ಶಿಕ್ಷಣ ಸಂಸ್ಥೆಗಳು ಪ್ರಯತ್ನಿಸಬೇಕು. ನೆಲೆಯಲ್ಲಿ ಒಂದು ವ್ಯವಸ್ಥಿತ ಔದ್ಯೋಗಿಕÀ ವಾತಾವರಣ ನಿರ್ಮಾಣ ಮಾಡಲು, ಅತ್ಯುತ್ತಮ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವಲ್ಲಿ ಆಳ್ವಾಸ್ ಪ್ರಗತಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು. 

ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಡಾ ಪಿ. ಎಲ್ ಧರ್ಮ, ಕಾಲಕ್ಕೆ ಹೊಂದಿಕೊAಡು ಉದ್ಯೋಗದ ಸ್ವರೂಪ ಬದಲಾಗುತ್ತಿವೆÉ. ಉದ್ಯೋಗ ಕೇಳುವುದಕ್ಕೂ, ನೀಡುವುದಕ್ಕೂ ಬಹಳಷ್ಟು ಅಂತರವಿದೆ, ಉದ್ಯೋಗ ಅಕಾಂಕ್ಷಿಗಳು ಅವಕಾಶಗಳಿಗೆ ಕಾಯುತ್ತಿರುವ ಸಂದರ್ಭ, ಸಮರ್ಥ ಅಭ್ಯರ್ಥಿಗಳನ್ನು ಅರಸಿಕೊಂಡು ನೇಮಕಾತಿದಾರರು ಬರುತ್ತಿರುವುದು ನಿಜವಾದ ಸಾಧನೆ ಎಂದರು.  




ಮಾಜಿ ಸಚಿವ ರಮಾನಾಥ್ ರೈ ಆಳ್ವಾಸ್ ಪ್ರಗತಿಯ ಅಭ್ಯರ್ಥಿಗಳಿಗೆ ಅನುಕೂಲವಾಗುವ ಎಐ ತಂತ್ರಜ್ಞಾನ ಆಧಾರಿತ ಆ್ಯಪ್ಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಅಧ್ಯಕ್ಷ  ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಎಕ್ಸ÷್ಪರ್ಟೈಸ್ ಕಂಪೆನಿಯ  ಕೆಎಸ್ ಶೇಖ್ ಕರ್ನಿರೆ, ಬಿಗ್ ಬ್ಯಾಗ್ಸ್ ಇಂಟರ್ನ್ಯಾಷನಲ್ ಆಡಳಿತ ನಿರ್ದೇಶಕ ರವೀಶ್ ಕಾಮತ್, ರೋಹನ್ ಕಾರ್ಪೋರೇಶನ್ ಸಂಸ್ಥಾಪಕ ರೋಹನ್ ಮೊಂತೆರೊ, ನಿವ್ಯಯಸ್ ಸೊಲ್ಯೂಷನ್ಸ್ನ ಸುಯೋಗ್ ಶೆಟ್ಟಿ ಸೇರಿದಂತೆ, ಕರಾವಳಿ ಮೂಲದವರಾಗಿ ಇದೀಗ ಜಾಗತಿಕ ಮಟ್ಟದಲ್ಲಿ ಔದ್ಯೋಗಿಕ ವಲಯವನ್ನು ನಿರ್ಮಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿರುವ ಇವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು.

ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನಸಭಾ ಪರಿಷತ್ ಸದಸ್ಯ ಭೋಜೆ ಗೌಡ, ಅದಾನಿ ಗ್ರೂಪ್ಸ್ನ ಕಿಶೋರ್ ಆಳ್ವ, ಕುಲದೀಪ್ ಎಂ, ಉದ್ಯಮಿ ಶ್ರೀಪತಿ ಭಟ್, ನಾರಾಯಣ ಪಿ.ಎಂ.   ಮಂಗಳೂರು ವಿವಿಯ ಕುಲಸಚಿವ ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

 


 

ಆಳ್ವಾಸ್ ಪ್ರಗತಿಯ ಮೊದಲ ದಿನದ ವಿವರ:

ಆನ್ಲೈನ್ ನೋಂದಣಿ ಮಾಡಿಸಿದ ಉದ್ಯೋಗಾಕಾಂಕ್ಷಿಗಳು: 11509

ಸ್ಪಾಟ್ ನೋಂದಣಿ ಮಾಡಿಸಿದ ಅಭ್ಯರ್ಥಿಗಳು: 2307

ಉದ್ಯೋಗ ಮೇಳಕ್ಕೆ ಆಗಮಿಸಿದ ಕಂಪನಿಗಳು: 285

ಮೊದಲ ದಿನ ಆಗಮಿಸಿದ ಉದ್ಯೋಗಾಕಾಂಕ್ಷಿಗಳು: 12732