
ಸೆಂಟ್ರಲ್ ಶಾಲೆಗಳ ದಕ್ಷಿಣ ವಲಯ ಅರ್ಚರಿ ಚಾಂಪಿಯನ್‌ಶಿಪ್ 2025-2026-ಆಳ್ವಾಸ್ ಸೆಂಟ್ರಲ್ ಶಾಲೆಗೆ ಪ್ರಶಸ್ತಿ
Wednesday, August 6, 2025
ಮೂಡುಬಿದಿರೆ: ಪುಣೆಯ ತ್ರಿನಿಟಿ ಇಂಟರ್‌ನ್ಯಾಷನಲ್ ಶಾಲೆÀಯಲ್ಲಿ ನಡೆದ ಸೆಂಟ್ರಲ್ ಶಾಲೆಗಳ ದಕ್ಷಿಣ ವಲಯ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಸೆಂಟ್ರಲ್ ಶಾಲೆಯ 17 ವಯೋಮಾನದ ಬಾಲಕ ಮತ್ತು ಬಾಲಕಿಯ ತಂಡ 3ನೇ ಸ್ಥಾನವನ್ನು ಪಡೆಯಿತು.
ಇಂಡಿಯನ್ ರೌಂಡ್ ಟೀಮ್ ಅಂಡರ್ 17 ಬಾಲಕರ ವಿಭಾಗದಲ್ಲಿ ಆದಿತ್ಯ, ಶ್ರೀರಾಮ ಶಿವಾನಂದ, ಅಕ್ಷಯ್ ಪ್ರಕಾಶ್, ಬಸಯ್ಯ ವಿ ಸ್ವಾಮಿಯನ್ನು ಒಳಗೊಂಡ ತಂಡ 3ನೇ ಸ್ಥಾನ ಪಡೆದರೆ, ಬಾಲಕಿಯ ವಿಭಾಗದಲ್ಲಿ ಅಪೂರ್ವ ಪಿ, ಚೈತ್ರಾ ಕೆ, ಜೋನ್ನಾ ಪಾಟೀಲ್ ತಂಡವು 3ನೇ ಸ್ಥಾನ ಪಡೆಯಿತು. ಇಂಡಿಯನ್ ರೌಂಡ್ ಮಿಕ್ಸ್ ಟೀಮ್ ಅಂಡರ್ 17 ವಿಭಾಗದಲ್ಲಿ ಅಪೂರ್ವ ಪಿ, ಆದಿತ್ಯ ತಂಡ 5ನೇ ಸ್ಥಾನ ಪಡೆಯಿತು.
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.