-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನೀವು ನಕಲಿ ಕಾಂಗ್ರೆಸ್‌ನ ನೇತಾರ. ನಿಮ್ಮಿಂದ ಅಸಲಿ ಕಾಂಗ್ರೆಸ್‌ಗೂ ದ್ರೋಹ, ಕಾರ್ಕಳದ ಜನತೆಗೂ ದ್ರೋಹ : ಉದಯ ಕುಮಾರ್‌ ಶೆಟ್ಟಿ ವಿರುದ್ದ ಮಹಾವೀರ ಹೆಗ್ಡೆ ಲೇವಡಿ

ನೀವು ನಕಲಿ ಕಾಂಗ್ರೆಸ್‌ನ ನೇತಾರ. ನಿಮ್ಮಿಂದ ಅಸಲಿ ಕಾಂಗ್ರೆಸ್‌ಗೂ ದ್ರೋಹ, ಕಾರ್ಕಳದ ಜನತೆಗೂ ದ್ರೋಹ : ಉದಯ ಕುಮಾರ್‌ ಶೆಟ್ಟಿ ವಿರುದ್ದ ಮಹಾವೀರ ಹೆಗ್ಡೆ ಲೇವಡಿ




 ಬೈಲೂರಿನ ಪರಶುರಾಮ ಮೂರ್ತಿ ನಕಲಿ ಎಂದು ಅಪಪ್ರಚಾರ ನಡೆಸಿದ ಉದಯ ಕುಮಾರ್‌ ಶೆಟ್ಟಿ ಮುನಿಯಾಲು ಇದೀಗ ಪರಶುರಾಮ ಮೂರ್ತಿ ಪುನರ್‌ನಿರ್ಮಾಣಕ್ಕಾಗಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಪರಶುರಾಮನ ಮೂರ್ತಿ ನಕಲಿಯಲ್ಲ. ನೀವು ನಕಲಿ ಕಾಂಗ್ರೆಸ್‌ನ ನೇತಾರ. ನಿಮ್ಮಿಂದ ಅಸಲಿ ಕಾಂಗ್ರೆಸ್‌ಗೂ ದ್ರೋಹ, ಕಾರ್ಕಳದ ಜನತೆಗೂ ದ್ರೋಹ ಎಂದು ಬಿಜೆಪಿ ಜಿಲ್ಲಾ ಉಪಾ‍ಧ್ಯಕ್ಷ ಮಹಾವೀರ ಹೆಗ್ಡೆ ಲೇವಡಿ ಮಾಡಿದರು.

ಅವರು ಜು. 31ರಂದು ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ಕಾರ್ಕಳದ ನಕಲಿ ಕಾಂಗ್ರೆಸಿಗರು ಪರಶುರಾಮ ಥೀಮ್‌ ಪಾರ್ಕ್‌ ದಾರಿಗೆ ಮಣ್ಣು ಹಾಕಿದವರು. ಶಿಲ್ಪಿಯ ಮೇಲೆ ಕೇಸು ದಾಖಲಿಸಿ ಜೈಲಿಗೆ ಕಳುಹಿಸಿದವರು. ಅನಂತರದ ದಿನಗಳಲ್ಲಿ ಇದೇ ಕಾಂಗ್ರೆಸಿಗರು ಪರಶುರಾಮನ ಮೂರ್ತಿಯನ್ನು ಪೊಲೀಸ್‌ ಠಾಣೆಯಲ್ಲಿಟ್ಟವರು ಎಂದು ಮಹಾವೀರ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

ಉದಯ ಕುಮಾರ್‌ ಶೆಟ್ಟಿಯವರು ನಿಮಗೆ ಎಷ್ಟು ನಾಲಿಗೆ ? ಎಷ್ಟು ಮುಖ ಎಂಬುದನ್ನು ಕಾರ್ಕಳದ ಜನತೆಗೆ ಸ್ಪಷ್ಟಪಡಿಸಿ. ಏಕೆಂದರೆ ಒಂದು ಕಡೆ ಪರಶುರಾಮ ಮೂರ್ತಿ ಆಗದ ಹಾಗೆ ಪ್ರತಿಭಟನೆ ಮಾಡುತ್ತೀರಿ. ಇನ್ನೊಂದೆಡೆ ಮೂರ್ತಿ ನಿರ್ಮಾಣಕ್ಕೆ ಆದೇಶಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೀರಿ. ಇಂದು ನೀವು ಕಾರ್ಕಳದ ಪ್ರವಾಸೋದ್ಯಮವನ್ನು ಹಾಳು ಮಾಡುವುದಲ್ಲೇ ರಾಜ್ಯ ಮಟ್ಟದಲ್ಲಿ ಕಾರ್ಕಳದ ಹೆಸರನ್ನು ಹಾಳು ಮಾಡುತ್ತೀದ್ದೀರಿ ಎಂದರು.

ಟೀಕೆ ಮಾಡುವವರು ಇದ್ದರೆ ಎದುರುಗಡೆ ಟೀಕೆ ಮಾಡಿ ಎನ್ನುವ ನೀವು ನಿಮ್ಮ ಬಗ್ಗೆ ಟೀಕೆ ಮಾಡಿದ ಯುವಕರ ಮೇಲೆ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸುತ್ತೀರಿ. ಅಲ್ಲದೆ ಜಾತಿಯ ಬಗ್ಗೆ ಮಾತನಾಡುವ ನೀವು ನಿಮ್ಮದೆ ಜಾತಿಯ ಯುವಕರಿಗೆ ತೊಂದರೆ ಕೊಡುತ್ತಿದ್ದೀರಿ. ಹಾಗಾದರೆ ನಿಮ್ಮ ಉದ್ದೇಶವೇನು ಎಂದು ಉದಯ್‌ ಕುಮಾರ್‌ ಶೆಟ್ಟಿಯವರಿಗೆ ಪ್ರಶ್ನಿಸಿರುವ ಮಹಾವೀರ ಹೆಗ್ಡೆ ನಿಮ್ಮ ಸರಕಾರ ಇದ್ದರೂ ಕಾರ್ಕಳದ ಅಭಿವೃದ್ದಿಗೆ ಬಿಡಿ ಕಾಸು ತರಲು ನಿಮ್ಮಿಂದ ಸಾಧ್ಯವಾಗಿಲ್ಲ ಎಂದರು.

ಪ್ರಾರಂಭದಿಂದ ಪರಶುರಾಮನ ಮೂರ್ತಿ ನಕಲಿ, ಪ್ಲಾಸ್ಟಿಕ್‌, ಸಿಮೆಂಟ್‌, ಫೈಬರ್‌ ಎಂದು ಹೀಗೆ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದೀರಿ. ನಿಮ್ಮ ಸುಳ್ಳು ಇನ್ನು ಮುಂದೆ ನಡೆಯುವುದಿಲ್ಲ. ಇದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಕಾರ್ಕಳ ಬಿಜೆಪಿಗಿದೆ. ಕಾರ್ಕಳ ಬಿಜೆಪಿ ಹೋರಾಟದಿಂದಲೇ ಬೆಳೆದು ಬಂದಿರುವಂತಹದ್ದು, 2 ವರ್ಷಗಳಿಂದ ನಿಮ್ಮ ಆಟವನ್ನು ನೋಡಿದ್ದೇವೆ. ಇನ್ನು ಮುಂದಕ್ಕೆ ನಮ್ಮ ಆಟ ಶುರು ಎಂದು ತಾಕೀತು ಮಾಡಿದರು.

ಜಿ. ಪಂ. ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ಮಾತನಾಡಿ, ಪರಶುರಾಮ ವಿಚಾರ ಕುರಿತು ಕಾರ್ಕಳದ ಕಾಂಗ್ರೆಸ್‌ ದ್ವಂದ್ವ ನೀತಿ ಅನುಸರಿಸುತ್ತಿದೆ. ಸುನಿಲ್‌ ಕುಮಾರ್‌ ಅವರ ಕಲ್ಪನೆಯಂತೆ ನಿರ್ಮಾಣವಾದ ಥೀಮ್‌ ಪಾರ್ಕ್‌ ಅನ್ನು ಕೇವಲ ರಾಜಕೀಯಕ್ಕಾಗಿ ಹಾಳುಗೆಡವಲಾಗುತ್ತಿದೆ ಎಂದರು. ಉದಯ ಕುಮಾರ್‌ ಶೆಟ್ಟಿಯವರು ಪರಶುರಾಮನ ಪುನರ್‌ ನಿರ್ಮಾಣಕ್ಕೆ ಪಿಐಎಲ್‌ ಹಾಕಿದರೆ, ಎರಡು ವರ್ಷದ ಹಿಂದೆ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್‌ನ ಕೃಷ್ಣ ಶೆಟ್ಟಿ ಪರಶುರಾಮನ ಥೀಮ್‌ ಪಾರ್ಕ್‌ ಕುರಿತಾಗಿ ಕೇಸು ದಾಖಲಿಸಿದ್ದರು ಎಂದರು.

ಪರಶುರಾಮ ಪಾರ್ಕ್‌ನ ಬಗ್ಗೆ ಆಗುತ್ತಿರುವ ಅಪಪ್ರಚಾರಗಳ ವಿರುದ್ಧ ನಮ್ಮ ಕಾರ್ಯಕರ್ತರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ಟೀಮ್‌ ಠಾಣೆಗೆ ಹೋಗಿ ಅಪಪ್ರಚಾರದ ಬಗ್ಗೆ ಮಾಹಿತಿ ನೀಡಿದೆ. ಆದರೆ ಈ ಬಗ್ಗೆ ಯಾವುದೇ ಆಕ್ಷನ್‌ ತೆಗದುಕೊಳ್ಳದ ಪೊಲೀಸ್‌ ಇಲಾಖೆ ಕೂಡ ಕಾಂಗ್ರೆಸ್‌ನ ಕಪಿಮುಷ್ಠಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಸುಮಿತ್‌ ಶೆಟ್ಟಿ ಇಲಾಖೆಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಕಾರ್ಕಳ ಕಾಂಗ್ರೆಸ್‌ ದುರಾಡಳಿತ ನಡೆಸುತ್ತಿದೆ ಎಂದರು.

ಆದಷ್ಟು ಬೇಗ ಥೀಮ್‌ ಪಾರ್ಕ್‌ನ ಅನುದಾನ ಬಿಡುಗಡೆ ಮಾಡಿ, ಹಾಕಿದ ಕೇಸುಗಳನ್ನು ತೆರವುಗೊಳಿಸಿ ಪರಶುರಾಮ್‌ ಥೀಮ್‌ ಪಾರ್ಕ್‌ ಕಾಮಗಾರಿಗೆ ಸಹಕಾರ ನೀಡಿ ಎಂಬುದು ನಮ್ಮ ಆಗ್ರಹ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರವಾದ ಹೋರಾಟವನ್ನು ಮಾಡಲಿದ್ದೇವೆ. ಈ ಬಗ್ಗೆ ಆಗಸ್ಟ್‌ 2 ರಂದು ರೂಪುರೇಷೆ ಸಿದ್ಧ ಪಡಿಸಲಿದ್ದೇವೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯರಾಮ್ ಸಾಲಿಯಾನ್, ಕಾರ್ಕಳ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ಬೋಳ ಹಾಗೂ ಸುರೇಶ್ ಶೆಟ್ಟಿ ಶಿವಪುರ, ಕಾರ್ಯದರ್ಶಿ ಪ್ರವೀಣ್ ಸಾಲ್ಯಾನ್, ಬೆಳ್ಮಣ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ದೇವೆಂದ್ರ ಶೆಟ್ಟಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article

ಸುರ