-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಸ್ಟಾಕ್ ಮಾರ್ಕೆಟ್‌ ಹುಚ್ಚಿಗೆ ಬ್ಯಾಂಕ್ ಗ್ರಾಹಕರ ಎಫ್‌ಡಿ ಹಣ ಎಗರಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ- ಬರೋಬ್ಬರಿ 4.8ಕೋಟಿ ವಂಚನೆಗೈದ ಬ್ಯಾಂಕ್ ಮಹಿಳಾ ಮ್ಯಾನೇಜರ್ ಅರೆಸ್ಟ್

ಸ್ಟಾಕ್ ಮಾರ್ಕೆಟ್‌ ಹುಚ್ಚಿಗೆ ಬ್ಯಾಂಕ್ ಗ್ರಾಹಕರ ಎಫ್‌ಡಿ ಹಣ ಎಗರಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ- ಬರೋಬ್ಬರಿ 4.8ಕೋಟಿ ವಂಚನೆಗೈದ ಬ್ಯಾಂಕ್ ಮಹಿಳಾ ಮ್ಯಾನೇಜರ್ ಅರೆಸ್ಟ್



ಜೈಪುರ: ರಾಜಸ್ಥಾನ ರಾಜ್ಯದ ಕೋಟಾದ ಐಸಿಐಸಿಐ ಬ್ಯಾಂಕ್ ನಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಆಗಿದ್ದ 26 ವರ್ಷದ ಯುವತಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಕಡಿಮೆ ಸಮಯದಲ್ಲಿ ದುಪ್ಪಟ್ಟು ಹಣ ಮಾಡಬೇಕೆಂಬ ಆಸೆ ಬಿದ್ದು ಜೈಲು ಕಂಬಿ ಎಣಿಸುವಂತಾಗಿದೆ. 

ಹೌದು.. ಸಾಕ್ಷಿ ಗುಪ್ತಾ ಎಂಬ ಈಕೆ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲೇ 110 ಎಫ್‌ಡಿ ಖಾತೆಗಳಲ್ಲಿದ್ದ ಬರೋಬ್ಬರಿ 4.8 ಕೋಟಿ ರೂ. ಹಣವನ್ನು ಎಗರಿಸಿ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾಳೆ.

ಸಾಕ್ಷಿ ಗುಪ್ತಾ ಬ್ಯಾಂಕ್‌ನಲ್ಲಿ ಬೇರೆ ಯಾರಿಗೂ ತಿಳಿಯದಂತೆ ತನ್ನ ಗುಪ್ತ ವಹಿವಾಟು ನಡೆಸುತ್ತ ಬಂದಿದ್ದಾಳೆ. ಈಕೆ 2020ರಿಂದ 2023ರ ನಡುವೆ ಕೋಟಾ ನಗರದ ಡಿಸಿಎಂ ಪ್ರದೇಶದ ಶ್ರೀರಾಮ್ ನಗರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಇಂತಹ ಖತರ್ನಾಕ್ ವಂಚನೆ ಎಸಗಿದ್ದಾಳೆ. ಹೆಚ್ಚಾಗಿ ವೃದ್ಧರು, ವಯಸ್ಸಾದವರು, ಟೆಕ್ನಾಲಜಿ ಬಗ್ಗೆ ತಿಳಿಯದವರ ಖಾತೆಗಳನ್ನೇ ಗುಳುಂ ಸ್ವಾಹಾ ಮಾಡುದ್ದಾಳೆ. ಹೆಚ್ಚೇಕೆ ಆಕೆ ತನ್ನ ಮಾವನ ಎಫ್‌ಡಿ ಖಾತೆಯಿಂದಲೂ ಹಣ ಲಪಟಾಯಿಸಿದ್ದಾಳೆ.

ತನಿಖಾಧಿಕಾರಿಗಳ ಪ್ರಕಾರ, ಸಾಕ್ಷಿ ಗುಪ್ತಾ 41 ಗ್ರಾಹಕರ 110ಕ್ಕೂ ಅಧಿಕ ಖಾತೆಗಳಿಂದ ಹಣವನ್ನು ಲಪಟಾಯಿಸಿದ್ದಾಳೆ. ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾಗಿರುವ ಮೊಬೈಲ್ ಸಂಖ್ಯೆಗಳನ್ನು ಮೊದಲು ಆಕೆ ಬದಲಿಸಿದ್ದಾಳೆ. ಬಳಿಕ ಒಟಿಪಿ ಬಳಸಿ ಹಣ ಡ್ರಾ ಮಾಡಿದ್ದಾಳೆ. ಈ ಹಣವನ್ನು ಜೆರೋಧಾ, ಐಸಿಐಸಿಐ ಡೈರೆಕ್ಟ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾಳೆ.

ಬ್ಯಾಂಕ್‌ನ ಗ್ರಾಹಕರೊಬ್ಬರು ತಮ್ಮ ಎಫ್‌ಡಿ ಖಾತೆ ಬಗ್ಗೆ ವಿಚಾರಿಸಲು ಬ್ಯಾಂಕಿಗೆ ಬಂದಾಗ ಈ ಮಹಾ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ, ಬ್ಯಾಂಕ್ ಶಾಖೆಯಲ್ಲಿ ಮೇಲಧಿಕಾರಿಗಳು ಅಡಿಟ್ ನಡೆಸುತ್ತಿದ್ದಾಗಲೂ ಅವ್ಯವಹಾರ ಆಗಿರುವುದು ಪತ್ತೆಯಾಗಿದೆ. ಇದರಂತೆ, ಬ್ಯಾಂಕ್‌ನ ಮ್ಯಾನೇಜರ್ 2025ರ ಫೆಬ್ರವರಿ 18 ರಂದು ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೂ ಮೊದಲೇ ಸಾಕ್ಷಿ ಗುಪ್ತಾ ಅಲ್ಲಿ ಕೆಲಸ ಬಿಟ್ಟು ಹೋಗಿದ್ದಳು.

ಈಕೆ ಗ್ರಾಹರ ಎಫ್‌ಡಿ ಮೆಚ್ಯುರಿಟಿಗೆ ಬರುವ ಮೊದಲೇ, ಗ್ರಾಹಕರ ಹೆಸರಿನಲ್ಲಿಯೇ ಡ್ರಾ ಮಾಡುತ್ತಿದ್ದಳು. ಅಲ್ಲದೆ, ಅದರ ಮೇಲೆ ಸಾಲವನ್ನೂ ಪಡೆಯುತ್ತಿದ್ದಳು. 31ಗ್ರಾಹಕರ ಖಾತೆಯಲ್ಲಿದ್ದ ಫಿಕ್ಸೆಡ್ ಡಿಪಾಸಿಟ್ ಮೊತ್ತದ 1.35 ಕೋಟಿ ರೂ. ಹಣವನ್ನು ಹಲವಾರು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ, ಅದನ್ನು ತನ್ನ ಡಿಮ್ಯಾಟ್‌ ಖಾತೆಗೆ ವರ್ಗಾವಣೆ ಮಾಡುತ್ತಿದ್ದಳು. ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ನಷ್ಟಕ್ಕೀಡಾದ ಸಂದರ್ಭದಲ್ಲಿ ಮತ್ತೆ ಮತ್ತೆ ಮುಗ್ಧ ಗ್ರಾಹಕರ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸುತ್ತ ಹೋಗಿದ್ದಳು.

Ads on article

Advertise in articles 1

advertising articles 2

Advertise under the article

ಸುರ