-->
ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ “ದೌರ್ಜನ್ಯ”ದ ಕಥೆ ಕಟ್ಟಿದ ತಂಗಿ! -ಅಕ್ಕನಿಂದ ಗಂಭೀರ ಆರೋಪ

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ “ದೌರ್ಜನ್ಯ”ದ ಕಥೆ ಕಟ್ಟಿದ ತಂಗಿ! -ಅಕ್ಕನಿಂದ ಗಂಭೀರ ಆರೋಪ




ಮಂಗಳೂರು: “ನನ್ನ ತಂಗಿ   ನನ್ನ ಪಿತ್ರಾರ್ಜಿತ ಆಸ್ತಿಯನ್ನು ಲಪಟಾಯಿಸಲು ಅಮ್ಮನ ಪೋರ್ಜರಿ ಸಹಿ ಹಾಕಿಸಿದ್ದು ಈಗ ನನ್ನ ಗಂಡ ಮತ್ತು ಮಗನನ್ನು ನನ್ನಿಂದ ದೂರಮಾಡಿ ತನ್ನ ಜೊತೆಗೆ ಇರಿಸಿಕೊಂಡಿದ್ದಾಳೆ. ನಾನು ನನ್ನ ಗಂಡನ ಮೇಲೆ ದೂರು ನೀಡಲು ಮೂಡಬಿದ್ರೆ ಪೊಲೀಸ್ ಠಾಣೆಗೆ ಹೋದ ಸಂದರ್ಭದಲ್ಲಿ ನನಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಲ್ಲದೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾಳೆ. ಈಗ ಮೂಡಬಿದ್ರೆ ಪೊಲೀಸರು ಹಲ್ಲೆ ಮಾಡಿದ್ದರೆಂದು ಕಥೆಯನ್ನು ಕಟ್ಟಿದ್ದಾಳೆ. ನನಗೆ ನಿರಂತರ ಜೀವ ಬೆದರಿಕೆ ಒಡುತ್ತಿದ್ದು ಆಕೆಯಿಂದ ರಕ್ಷಣೆ ಬೇಕು“ ಎಂದು ಬೆಳುವಾಯಿ ನಿವಾಸಿ ಪ್ರಫುಲ್ಲ ನಾಯ್ಕ್ ಪತ್ರಿಕಾಗೋಷ್ಟಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. 


”ನಾನು ಬೆಳುವಾಯಿಯಲ್ಲಿ ನನ್ನ ಮಗ ಹಾಗೂ ಗಂಡನ ಜೊತೆ ವಾಸಿಸುತ್ತಿದ್ದೇವೆ. ಸರಿಸುಮಾರು ಒಂದುವರೆ ತಿಂಗಳ ಹಿಂದೆ ನನ್ನ ಗಂಡ ಹಾಗೂ ಮಗ ನನ್ನ ತಂಗಿ ಮನೆಗೆ ಹೋಗಿ ಬರುತ್ತೇವೆ ಎಂದು ಹೇಳಿ ಹೋದವರು ವಾಪಾಸ್ ಬಾರದೆ ಇದ್ದುದರಿಂದ ನಾನು ಕಳವಳಗೊಂಡು ಮೂಡಬಿದ್ರೆ ಠಾಣೆ‌ಗೆ ದೂರು ಕೊಡಲು ಹೋದೆ. ದೂರು ಸ್ವೀಕರಿಸಿದ ಪೊಲೀಸರು ನನ್ನ ಗಂಡನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮ್ಮ ಮೇಲೆ ನಿಮ್ಮ ಹೆಂಡತಿ ದೂರು ನೀಡಿರುತ್ತಾರೆ. ಕೂಡಲೇ ಠಾಣೆ‌ಗೆ ಬನ್ನಿ ಎಂದು ಕರೆದರು. ಅದನ್ನು ತಿಳಿದ ನನ್ನ ಗಂಡ ನನ್ನ ತಂಗಿಗೆ ವಿಷಯ ತಿಳಿಸಿ ಅವಳ ಜೊತೆಗೆ ಠಾಣೆ‌ಗೆ ಬಂದರು. ಅವಳು ಪೊಲೀಸರ ಜೊತೆಗೆ ಏರುಧ್ವನಿಯಲ್ಲಿ ಮಾತನಾಡುತ್ತಿದ್ದಳು. ಅದನ್ನು ಕೇಳಿ ಪೊಲೀಸ್ ಸಿಬ್ಬಂದಿ ಇದು ಸ್ಟೇಶನ್ ಇಲ್ಲಿ ತುಂಬಾ ಜನ ಇದ್ದಾರೆ. ನಿಧಾನವಾಗಿ ಮಾತಾಡು ಎಂದಾಗ ಅವರಿಗೂ ಅವಾಚ್ಯ ಪದಗಳಿಂದ ಬೈದು ನನಗೆ ಚಪ್ಪಲಿನಿಂದ ಹೊಡೆಯುತ್ತಾಳೆ. ಅದನ್ನು ತಡೆಯಲು ಬಂದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾಳೆ.  ಇದು ನನ್ನ ಮತ್ತು ಇತರ ಸಾರ್ವಜನಿಕರ ಸಮ್ಮುಖದಲ್ಲಿ ನಡೆದಿದ್ದು ಆ ಬಳಿಕ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮಲಗಿ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿದ್ದಾರೆ ಎಂದು ಕಟ್ಟುಕಥೆ ಕಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ. 

 

Ads on article

Advertise in articles 1

advertising articles 2

Advertise under the article