ದುಬೈ ಡ್ಯೂಟಿ ಫ್ರೀ ಮಿಲ್ಲೇನಿಯಂ ಮಿಲಿನಿಯರ್ ಲಾಟರಿಯಿಂದ ಕಾಸರಗೋಡು ನಿವಾಸಿಗೆ ಒಲಿಯಿತು 8.5 ಕೋಟಿ ರೂ.



ಕಾಸರಗೋಡು: ದುಬೈ ಡ್ಯೂಟಿ ಫ್ರೀ ಮಿಲ್ಲೇನಿಯಂ ಮಿಲಿನಿಯರ್ ಲಾಟರಿ ಖರೀದಿಸಿರುವ ಕಾಸರಗೋಡು ನಿವಾಸಿಯೋರ್ವರಿಗೆ 8.5 ಕೋಟಿ ರೂ. ಅದೃಷ್ಟ ಒಲಿದಿದೆ. 

ಸದ್ಯ ಯುಎಇ ಅಜ್ಮಾನ್‌ನಲ್ಲಿ ವಾಸವಾಗಿರುವ ವೇಣುಗೋಪಾಲ್ ಮುಲ್ಲಚ್ಚೇರಿ ಎಪ್ರಿಲ್ 23ರಂದು ದುಬೈ ವಿಮಾನ ನಿಲ್ದಾಣದ ಟರ್ಮಿನಲ್ -2ರ ಒಳಗಿರುವ ಡ್ಯೂಟಿ ಫ್ರೀ ಕೌಂಟರ್‌ನಲ್ಲಿ ಈ ಲಾಟರಿ ಟಿಕೇಟ್ ಖರೀದಿಸಿದ್ದರು. ನಿನ್ನೆ ಲಾಟರಿ ಡ್ರಾ ನಡೆದಿದ್ದು ವೇಣುಗೋಪಾಲ್ ಅವರಿಗೆ ದಾಖಲೆ ಮೊತ್ತದ ಅದೃಷ್ಟ ಒಲಿದಿದೆ.

ವೇಣುಗೋಪಾಲ್ ಅಜ್ಮಾನಿನ ವಾಣಿಜ್ಯ ಸಂಸ್ಥೆಯೊಂದರಲ್ಲಿ ಐಟಿ ಸಪೋರ್ಟ್ ಉದ್ಯೋಗಿ. ಇವರು  ಕಳೆದ 15 ವರ್ಷಗಳಿಂದ ಡ್ಯೂಟಿ ಫ್ರೀ ಟಿಕೇಟುಗಳನ್ನು ಖರೀದಿಸಿ ಅದೃಷ್ಟ ಪರೀಕ್ಷಿಸುತ್ತಿದ್ದರು.

“ಡ್ರಾ ದಿನದಂದು ದುಬೈ ಡ್ಯೂಟಿ ಫ್ರೀ ಫೇಸ್‌ಬುಕ್ ಫೇಜ್‌ನಲ್ಲಿ ವಿಜೇತರ ಆಯ್ಕೆಯನ್ನು ಲೈವ್ ನೋಡುತ್ತಿದ್ದರಂತೆ. ತನ್ನ ಟಿಕೇಟ್‌ನ ನಂಬರ್ ಅನೌನ್ಸ್ ಮಾಡಿದಾಗ ಏಕಾಏಕಿ ಭ್ರಮಾ ಲೋಕದಲ್ಲಿದ್ದೇನೆ ಎಂದು ಭಾವಿಸಿದ್ದರಂತೆ. ಡ್ಯೂಟಿ ಫ್ರೀ ಲಾಟರಿ ಸಂಸ್ಥೆಯಿಂದ ಅಧಿಕೃತ ಕರೆ ಬಂದಾಗ ವಿಶೇಷ ಸಂತೋಷವಾಯಿತು" ಎಂದು ವೇಣುಗೋಪಲ್ ಜಿಲ್ಲೆಯ ಮಾಧ್ಯಮಗಳಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu