
ಪರ್ಪಲೆ ಗಿರಿಯ ಹಸಿರು ಹೊರೆ ಕಾಣಿಕೆ ಮೆರವಣಿಗೆ
Sunday, May 18, 2025
ಕಾರ್ಕಳ,ಮೇ17 ರಂದು ಕಾರ್ಕಳ, ಪರ್ಪಲೆ ಗಿರಿಯ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಕಲ್ಕುಡ,ಕಲ್ಲುರ್ಟಿ ತೂಕತ್ತೇರಿ ದೈವಗಳ ಪಂಚಲೋಹದ ವಿಗ್ರಹಗಳು ವಿಜೃಂಭಣೆಯಿಂದ ನಡೆಯಿತು.
ಬಂಡಿಮಠ ಮೂಡು ಗಣಪತಿ ದೇವಸ್ಥಾನದಿಂದ ಸಾಲ್ಮರ್, ವೆಂಕಟ್ರಮಣ ದೇವಸ್ಥಾನ ,ನಂತರ ಬಸ್ ನಿಲ್ದಾಣ ಮಾರಿಯಮ್ಮ ದೇವಸ್ಥಾನ ಮುಂದೆ ಅನಂತಶಯನ ಅನಂತಪದ್ಮನಾಭ ದೇವಸ್ಥಾನ, ಜೈನ ಬಸದಿ,ಮುಂದೆ ಆನೆಕೆರೆ ಕೃಷ್ಣ ಮಂದಿರ ರಸ್ತೆ ಯಾಗಿ ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನವಾಗಿ ಮುಂದೆ ಅತ್ತೂರು ದ್ವಾರ ಅಲ್ಲಲ್ಲಿ ಹಸಿರು ಹೊರೆಕಾಣಿಕೆ ಭಕ್ತಾದಿಗಳು ನೀಡಿದ್ದಾರೆ.
ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರ ಪರ್ಪಲೆ ಗಿರಿಯ ದೈವಸ್ಥಾನದ ವರೆಗೆ ಬ್ರಹತ್ ವಾಹನ ಜಾಥಾ ಬೈಕು, ಆಟೋ ರಿಕ್ಷಾ,ಹಾಗೂ ಕಾರುಗಳಲ್ಲಿ ಭಕ್ತರು ಆಗಮಿಸಿ ಅಲ್ಲಿ ನಂತರ ವಿವಿಧ ಚೆಂಡೆ ವಾದ್ಯ ಘೋಷ ಹಾಗೂ ಹಲವಾರು ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ,ಕುಣಿತ ಭಜನೆ ನಡೆಯಿತು. ಪರ್ಪಲೆ ಗಿರಿಯ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸಮಿತಿ ಸರ್ವ ಸದಸ್ಯರು ಪದಾಧಿಕಾರಿಗಳು ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.