ಆಟವಾಡುವಾಗ ಮಕ್ಕಳಿಗೆ ಹೊಡೆಯುತ್ತಾನೆಂದು ಕತ್ತು ಹಿಸುಕಿ ಬಾಲಕನ ಹತ್ಯೆ: ಆರೋಪಿ ಅಂದರ್
Thursday, May 8, 2025
ಬೆಂಗಳೂರು: ಆಟವಾಡುವಾಗ ತನ್ನ ಹೆಣ್ಣು ಮಕ್ಕಳಿಗೆ ಹೊಡೆಯುತ್ತಾನೆಂದು ಬಾಲಕನ ಕುತ್ತಿಗೆ ಹಿಸುಕಿ ಹತ್ಯೆಗೈದ ಪ್ರಕರಣದಡಿ ಬಿಹಾರ ಮೂಲದ ವ್ಯಕ್ತಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸಂದೇಶ್ವರ್ ಬಂಧಿತ ಆರೋಪಿ.
ಪರಪ್ಪನ ಅಗ್ರಹಾರ ಬಳಿಯ ರಾಯಸಂದ್ರದಲ್ಲಿ ಆರೋಪಿ ಹಾಗೂ ಮೃತ ಬಾಲಕನ ಕುಟುಂಬಸ್ಥರು ವಾಸಿಸುತ್ತಿದ್ದರು. ಆರೋಪಿ ಸಂದೇಶ್ವರ್‌ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಟವಾಡುವಾಗ ಮೃತ ಬಾಲಕನಿಗೆ ಮತ್ತು ಹೆಣ್ಣು ಮಕ್ಕಳಿಗೆ ಜಗಳವಾಗುತ್ತಿತ್ತು. ಹಾಗಾಗಿ ಆರೋಪಿ ಬಾಲಕನನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಆಗ್ನೆಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾಹಿತಿ ನೀಡಿದ್ದಾರೆ.