ಯೂಟ್ಯೂಬ್ ವೀಕ್ಷಿಸಿ ಸ್ವಯಂ ಹೆರಿಗೆ- ಶಿಶುವಿನ ಹತ್ಯೆ ತಿಪ್ಪೆಗುಂಡಿಗೆಸೆದ ಪ್ರೇಮಿಗಳು ಅರೆಸ್ಟ್



ಬೆಳಗಾವಿ: ಇತ್ತೀಚೆಗೆ ನವಜಾತ ಶಿಶುಗಳ ಪತ್ತೆ ಪ್ರಕರಣಗಳು ಬಹಳಷ್ಟು ಕಾಣಸಿಗುತ್ತಿದೆ. ಹೆತ್ತವರೇ ಅನೇಕ ಕಡೆಗಳಲ್ಲಿ ಶಿಶುಗಳನ್ನು ತಿಪ್ಪೆಗುಂಡಿಗೋ, ರಸ್ತೆನದಿಯಲ್ಲೋ ಹಾಗೂ ನಿರ್ಜನ ಪ್ರದೇಶದಲ್ಲೋ ಎಸೆಯುವ ಘಟನೆಗಳೂ ನಡೆದಿವೆ. ಈ ಮಧ್ಯೆ ಕಿತ್ತೂರು ತಾಲೂಕಿನ ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಹೆತ್ತ ಕೂಸನ್ನೇ ಹತ್ಯೆ ಮಾಡಿರುವ ಪ್ರಕರಣ ಪತ್ತೆ ಹಚ್ಚಿ ಮಗುವಿನ ತಂದೆ - ತಾಯಿಯನ್ನು ಬಂಧಿಸಿದ್ದಾರೆ. ...

ಅಂಬಡಗಟ್ಟಿಯ ಮಹಾಬಲೇಶ್ವರ ರುದ್ರ ಕಾಮೋಜಿ (31) ಹಾಗೂ ಸಿಮ್ರನ್ ಮೌಲಾಸಾಬ್‌ ಮಾಣಿಕಬಾಯಿ (22) ಬಂಧಿತ ಆರೋಪಿಗಳು.

ಮಾ.5ರಂದು ಅಂಬಡಗಟ್ಟಿಯ ಮನೆಯೊಂದರ ಹಿತ್ತಲಿನ ತಿಪ್ಪೆಗುಂಡಿಯಲ್ಲಿ ನವಜಾತ ಶಿಶುವೊಂದರ ಮೃತದೇಹ ಪತ್ತೆಯಾಗಿತ್ತು. 

ಅಂಬಡಗಟ್ಟಿಯ ಮಹಾಬಲೇಶ್ವರ ಹಾಗೂ ಸಿಮ್ರಾನ್  ಎಂಬವರು ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಹಾಬಲೇಶ್ವರ ಹಾಗೂ ಸಿಮ್ರಾನ್ ನಡುವೆ ದೈಹಿಕ ಸಂಪರ್ಕವೂ ಬೆಳೆದಿತ್ತು. ಪರಿಣಾಮ ಸಿಮ್ರಾನ್ ಗರ್ಭಿಣಿಯಾಗಿದ್ದಳು. ಆದರೆ ಸಿಮ್ರಾನ್ ದಪ್ಪವಿದ್ದ ಕಾರಣ ಆಕೆ ಗರ್ಭಿಣಿಯಾದ ವಿಚರ ಮನೆಯವರಿಗೆ ಗೊತ್ತಾಗಿರಲಿಲ್ಲ. ಆಕೆಗೆ ಮಾ.5ರಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಬಾತ್‌ರೂಮ್‌ನಲ್ಲಿ ಹೋಗಿ ಸಿಮ್ರಾನ್ ಸ್ವಯಂ ಹೆರಿಗೆ ಮಾಡಿಕೊಂಡು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಸಂದರ್ಭ ಪ್ರಿಯಕರ ಮಹಾಬಲೇಶ್ವರ ವಿಡಿಯೊ ಕಾಲ್‌ನಲ್ಲಿ ಆಕೆಗೆ ಮಾರ್ಗದರ್ಶನ ಮಾಡಿದ್ದ. 

ಆಕೆ, ಹೆರಿಗೆ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು  ಯೂಟ್ಯೂಬ್‌ನಲ್ಲಿ ನೋಡಿದ್ದಳು. ಹೆರಿಗೆಯಾದ ಬಳಿಕ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಗುವನ್ನು ಪ್ಲಾಸ್ಟಿಕ್‌ನಲ್ಲಿ ಹಾಕಿ ತಿಪ್ಪೆಗುಂಡಿಯಲ್ಲಿ ಬಿಸಾಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ. ಸದ್ಯ ಪ್ರಕರಣ ಭೇದಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ.