-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಡಾ| ಕೆ ಪ್ರಕಾಶ್ ಶೆಟ್ಟಿಯವರಿಗೆ ‘’ಬಂಟ ಛತ್ರಪತಿ’’ ಬಿರುದು ಪ್ರದಾನ

ಡಾ| ಕೆ ಪ್ರಕಾಶ್ ಶೆಟ್ಟಿಯವರಿಗೆ ‘’ಬಂಟ ಛತ್ರಪತಿ’’ ಬಿರುದು ಪ್ರದಾನ

 

ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವದ ಸಂಭ್ರಮವು ಜನವರಿ 26ರಂದು ಪುಣೆ ಬಂಟರ ಸಂಘದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಂ ನ ಆಶಾ ಪ್ರಕಾಶ್ ಶೆಟ್ಟಿ ಸುವರ್ಣ ಮಹೋತ್ಸವ ವೇದಿಕೆಯಲ್ಲಿ  ಜರಗಿತು.

 ಪುಣೆಯಲ್ಲಿ ಬಂಟರ ಹಬ್ಬವಾಗಿ ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಈ ಸಂಭ್ರಮದಲ್ಲಿ ಹಲವಾರು ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳು, ಬಂಟ ಅತಿರಥ ಮಹಾರಥ ಬಂಟರ ಸಮಾಮಗಮದಲ್ಲಿ ನಡೆದ ಸಭಾ ಕಾರ್ಯಕ್ರಮ, ಸಮಾಜ ಸೇವಕರಿಗೆ ಸೇವಾ ಸಾಧಕ ಪ್ರಶಸ್ತಿ, ಅತಿಥಿ ಗಣ್ಯರಿಗೆ ಸತ್ಕಾರ ಮೊದಲಾದ ಕಾರ್ಯಕ್ರಮಗಳು ನಡೆದವು. ಈ  ಸಂದರ್ಭದಲ್ಲಿ ಬೆಂಗಳೂರು ಎಂ.ಅರ್.ಜಿ ಗ್ರೂಪ್ ನ ಸಿಎಂಡಿ, ಬಂಟ ಸಮಾಜದ ಮೇರು ವ್ಯಕ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿಶ್ವ ವಿದ್ಯಾನಿಲಯದ ಡಾಕ್ಟರೇಟ್ ಪದವಿ ಪುರಸ್ಕ್ರತ, ಎಲ್ಲಾ ಸಮಾಜದ ಶಕ್ತಿಯಾಗಿರುವ  ಸಮಾಜೋದ್ಧಾರಕ ಹಾಗೂ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರ ಸಾಧನೆಯ ದಾರಿ ದೀಪ, ಪ್ರೇರಣಾ ಶಕ್ತಿಯಾಗಿರುವ ಡಾ| ಕೆ ಪ್ರಕಾಶ್ ಶೆಟ್ಟಿಯವರನ್ನು "ಬಂಟ ಛತ್ರಪತಿ" ಎಂಬ ಬಿರುದು ನೀಡಿ ಬಂಟ ಸಮಾಜದ ಇತಿಹಾಸದಲ್ಲೇ ದಾಖಲಾಗುವ ರೀತಿಯಲ್ಲಿ ವಿಭಿನ್ನ ರೀತಿಯಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಗಣ್ಯಾತಿಗಣ್ಯರ ಸಮ್ಮುಖದಲ್ಲಿ, ನೆರೆದ ಸಾವಿರಾರು ಸಂಖ್ಯೆಯ ಸಮಾಜ ಬಾಂಧವರ ನಡುವೆ ವಾದ್ಯಘೋಷ, ನೃತ್ಯ, ಪುಷ್ಪಾರ್ಚನೆ, ವಿವಿಧ ಸಮಿತಿಗಳ ಅಭಿನಂದನೆಗಳೊಂದಿಗೆ ಶಾಲು, ಹಾರ, ಪಂಡಪುರ ವಿಟ್ಟಲ್ ರುಕ್ಮಿಣಿ ಮೂರ್ತಿ, ಶಿವಾಜಿ ಪ್ರತಿಮೆ, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಇವರ ಸಮಾಜ ಸೇವಾ ಕಾರ್ಯದ ಸಾಕ್ಷಚಿತ್ರವನ್ನು ತೋರಿಸಲಾಯಿತು. ಡಾ| ಪ್ರಕಾಶ್ ಶೆಟ್ಟಿಯವರ ಪರಿಚಯ, ಸನ್ಮಾನ ಪತ್ರವನ್ನು ಕು. ಶ್ರಾವ್ಯ ಸಂತೋಷ್ ಶೆಟ್ಟಿಯವರು ಓದಿದರು. ಈ ಸಂದರ್ಭದಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್ ನ ಸಿಎಂಡಿ ಶಶಿಕಿರಣ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ರೂಪಿ ಬಾಸ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ ಲಿನ ಎನ್ ಬಿ ಶೆಟ್ಟಿ, ಬಿಸಿಸಿಐ ಕಾರ್ಯಕಾರಿ ಸಮಿತಿ ಸದಸ್ಯ ಡಾ| ಪಿ.ವಿ ಶೆಟ್ಟಿ, ವಿ.ಕೆ ಗ್ರೂಪ್ ಆಫ್ ಕಂಪನೀಸ್ ನ ಸಿಎಂಡಿ ಕರುಣಾಕರ್ ಎಂ ಶೆಟ್ಟಿ, ಸಾಯಿರಾಧ ಗ್ರೂಪ್ ಆಫ್ ಕಂಪನೀಸ್ ನ ಸಿಎಂಡಿ ರವಿ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ದೇವಾನಂದ ಶೆಟ್ಟಿ, ಮಸ್ಕತ್ ಮಲ್ಟಿ ಟ್ರೇಡ್ ಆಂಡ್ ಕನ್ಷ್ಟ್ರಕ್ಶನ್ ಎಲ್.ಎಲ್.ಪಿ ಸಿಎಂಡಿ ದಿವಾಕರ್ ಶೆಟ್ಟಿ ಮಲ್ಲಾರ್, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಉಪ್ಪೇಂದ್ರ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮಾಲ್ವನ್ ತಡ್ಕ ಹಾಸ್ಪಿಟಾಲಿಟಿಯ ಸಿಎಂಡಿ ಹಾಲಾಡಿ ಆದರ್ಶ್ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಮುಂಬಯಿ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ, ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಸಿಟಿ ರಿಜಿನಲ್ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಜಯರಾಂ ಶೆಟ್ಟಿ, ಹುಬಳ್ಳಿ ಧಾರವಾಡ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಉಳ್ಳಾಲ ಬಂಟರ ಸಂಘದ  ಮಾಜಿ ಅಧ್ಯಕ್ಷ ಚಂದ್ರಹಾಸ್ ಅಡ್ಯಂತಾಯ, ಕುಂದಾಪುರ ಯುವ ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಡಾ| ನಿತ್ಯಾನಂದ ಶೆಟ್ಟಿ ಅಂಪಾರು, ಪುಣೆ ಬಂಟರ ಸಂಘದ ಉಪಾಧ್ಯಕ್ಷರಾದ  ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಸುವರ್ಣ ಮಹೋತ್ಸವ  ಸಮಿತಿಯ ಎಲ್ಲಾ ಸಮಿತಿಗಳ  ಸಮನ್ವಯಕರಾದ ಸುಧೀರ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ಹೆರ್ಡೆಬೀಡು ಪ್ರಶಾಂತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಸುಲತಾ ಎಸ್ ಶೆಟ್ಟಿ ಹಾಗೂ ಪುಣೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article