-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಔಷಧೀಯ ಸಸ್ಯಗಳ ವರ್ಗೀಕರಣ- ಗುಣಗಳ ಅರಿವು ಅತಿ ಮುಖ್ಯ: ಡಾ. ಶರತ್ ಕೃಷ್ಣನ್

ಔಷಧೀಯ ಸಸ್ಯಗಳ ವರ್ಗೀಕರಣ- ಗುಣಗಳ ಅರಿವು ಅತಿ ಮುಖ್ಯ: ಡಾ. ಶರತ್ ಕೃಷ್ಣನ್

ಔಷಧೀಯ ಸಸ್ಯಗಳ ವರ್ಗೀಕರಣ- ಗುಣಗಳ ಅರಿವು ಅತಿ ಮುಖ್ಯ: ಡಾ. ಶರತ್ ಕೃಷ್ಣನ್





ಪ್ರಾಕೃತಿಕವಾಗಿ ಲಭ್ಯವಿರುವ ಗಿಡಮೂಲಿಕೆಗಳನ್ನು ಕೇವಲ ಔಷಧ ಮಾತ್ರವಲ್ಲದೆ ಪೌಷ್ಟಿಕಾಂಶಯುಕ್ತ ಆಹಾರ. ಇದು ನೈಸರ್ಗಿಕವಾಗಿ ಸಿಗುವ ಪೂರಕ ಔಷಧವೂ ಹೌದು. ಆದರೆ ಅದನ್ನು ಹೇಗೆ ಸೇವಿಸಬೇಕು ಎನ್ನುವ ಅರಿವು ನಮಗಿರಬೇಕು ಎಂದು ಅಮೆರಿಕಾದ ಒಹಿಯೊ ಸೆಂಟ್ರಲ್ ಸ್ಟೇಟ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ಪ್ರಾಧ್ಯಾಪಕ ಡಾ. ಶರತ್ ಕೃಷ್ಣನ್ ಅಭಿಪ್ರಾಯಪಟ್ಟರು.


ಅವರು ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ದ್ರವ್ಯಗುಣ ವಿಜ್ಞಾನ ವಿಭಾಗ ಮತ್ತು ಬೆಂಗಳೂರಿನ ಹಿಮಾಲಯ ವೆಲ್‌ನೆಸ್ ಕಂಪನಿ ಆಶ್ರಯದೊಂದಿಗೆ ಧನ್ವಂತರಿ ಹಾಲ್‌ನಲ್ಲಿ ಶುಕ್ರವಾರ ನಡೆದ ‘ಆಳ್ವಾಸ್ ಸಂಜೀವಿನಿ 2025- ಸಸ್ಯ ವರ್ಗೀಕರಣ ಮತ್ತು ಔಷಧ ವಿಜ್ಞಾನ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.


ಔಷಧೀಯ ಗಿಡಮೂಲಿಕೆಗಳನ್ನು ಅವಶ್ಯಕತೆಗಿಂತ ಹೆಚ್ಚು ಸೇವನೆ ಮಾಡಿದರೆ ವಿಷಕಾರಿ ಪರಿಣಾಮವನ್ನು ಬೀರುತ್ತದೆ. ಈ ರೀತಿಯ ಜ್ಞಾನ ಸಾಮಾನ್ಯ ಜನರಲ್ಲಿ ಮೂಡಿಸಬೇಕು. ಹಾಗಾಗಿ ಪ್ರತಿ ಗಿಡಮೂಲಿಕೆಯ ಬಗ್ಗೆ ನಮಗೆ ಅರಿವು ಇರಬೇಕು ಎಂದರು.


ಔಷಧೀಯ ಗುಣವಿರುವ ಗಿಡಗಳನ್ನು ಗುರುತಿಸುವುದು ತುಂಬಾ ಕಠಿಣ ವಿಚಾರ. ಆದರೆ ನಮ್ಮ ಭಾರತದಲ್ಲಿ ಪುರಾತನ ಕಾಲದಿಂದ ಕೆಲವೊಂದು ಔಷಧೀಯ ಗುಣವಿರುವ ಗಿಡಗಳನ್ನು ಅವರೇ ಅರಿತುಕೊಂಡು ಸೇವಿಸುತ್ತಾರೆ ಎಂದರು.


ಔಷಧಗಳು ವಿಷಕಾರಿಯಾಗುವಂತೆ ಸೇವಿಸುವುದಲ್ಲ, ಬದಲಾಗಿ ವಿಷದ ವಿರುದ್ಧ ಹೋರಾಡುವಂತೆ ಸೇವಿಸಬೇಕು, ಯಾವುದು ವಿಷಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಅರಿಯಬೇಕು, ಔಷಧ ಹೆಚ್ಚಾದರೆ ವಿಷದ ರೂಪದಲ್ಲಿ ಪರಿಣಾಮ ಬೀರುತ್ತದೆ ಎಂದರು.


ಬೆಂಗಳೂರು ಹಿಮಾಲಯ ವೆಲ್ನೆಸ್ ಕಂಪನಿಯ ಸಸ್ಯಶಾಸ್ತ್ರೀಯ ವಿಭಾಗದ ಪ್ರಧಾನ ಸಂಶೋಧಕ ಡಾ. ಗುರುರಾಜ್ ಕಲಗೇರಿ ಮಾತನಾಡಿ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಜ್ಞಾನ ಎಂಬುದು ಅತಿ ಮುಖ್ಯ, ಹೇಗೆ ಗಿಡ ಮೂಲಿಕೆಗಳ ಗುಣವಿರುವ ಗಿಡಗಳನ್ನು ಗುರುತಿಸುವುದು, ಅದರಲ್ಲಿರುವ ಔಷಧೀಯ ಗುಣವನ್ನು ಅರಿಯುವುದು ಅತಿ ಮುಖ್ಯ ಹಾಗೂ ಸಾಮಾನ್ಯ ಜನರಲ್ಲಿಯೂ ಅರಿವು ಮೂಡಿಸುವುದು ನಮ್ಮ ಕರ್ತವ್ಯ ಎಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ ವಿನಯ್ ಆಳ್ವ, ಆಳ್ವಾಸ್ ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಸುನಿಲ್ ಶೆಟ್ಟಿ ಇದ್ದರು.


ಡಾ. ಸುಬ್ರಹ್ಮಣ್ಯ ಪದ್ಯಾಣ ಸ್ವಾಗತಿಸಿದರು.ಡಾ.ಗೀತಾ ಬಿ. ಮಾರ್ಕಾಂಡೆ ನಿರೂಪಿಸಿದರು. ಡಾ.ಲಕ್ಷ್ಮಿ ಪೈ ವಂದಿಸಿದರು.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article