-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಫಸ್ಟ್ ನೈಟ್‌‌ಗೆ ನವವಧುವಿನ ಬೇಡಿಕೆಗೆ ವರ ಕಂಗಾಲು: ನೆರವಿಗೆ ಬಂದ ಪೊಲೀಸ್

ಫಸ್ಟ್ ನೈಟ್‌‌ಗೆ ನವವಧುವಿನ ಬೇಡಿಕೆಗೆ ವರ ಕಂಗಾಲು: ನೆರವಿಗೆ ಬಂದ ಪೊಲೀಸ್


ವಿವಾಹ ನಡೆದು ವಧು-ವರರು ಮನೆಗೆ ಬಂದಿದ್ದಾರೆ. ಮನೆಯಲ್ಲಿ ಮೊದಲ ರಾತ್ರಿಗೆ ಕೋಣೆ ಸಿಂಗಾರಗೊಂಡಿದೆ. ಇದರ ನಡುವೆ ನವವಧು, ವರನಲ್ಲಿ ಇಟ್ಟ ಒಂದು ಬೇಡಿಕೆಯನ್ನು ಪೂರೈಸಲು ಆತ ಸಜ್ಜಾಗುತ್ತಿದ್ದಂತೆ ಮತ್ತೆರೆಡು ಬೇಡಿಕೆ ಇಟ್ಟಿದ್ದಾಳೆ. ಒಟ್ಟು ಮೂರು ಬೇಡಿಕೆಯಲ್ಲಿ ಒಂದು ಬೇಡಿಕೆ ಆತನನ್ನು ಕಂಗಾಲು ಮಾಡಿದೆ. ಕೆಲವೇ ಹೊತ್ತಲ್ಲಿ ರಂಪಾಟವೇ ನಡೆದಿದೆ. ಎರಡೂ ಕುಟುಂಬಸ್ಥರಲ್ಲಿ ಮಾತುಕತೆ, ಸಂಧಾನ ಶುರುವಾಗಿದೆ. ಆದರೆ ಇದು ಸಾಧ್ಯವಾಗದೇ ಬಳಿಕ ಪೊಲೀಸರು ಎಂಟ್ರಿಕೊಟ್ಟ ಘಟನೆ ಉತ್ತರ ಪ್ರದೇಶ ಬಸ್ತಿಯಲ್ಲಿ ನಡೆದಿದೆ.


ಸಹಾರಾನಪುರದ ಯುವಕನಿಗೆ, ಲುಧಿಯಾನದ ಯುವತಿಯೊಂದಿಗೆ ವಿವಾಹ ನೆರವೇರಿದೆ. ಕುಟುಂಬಸ್ಥರು, ಗುರು ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯಕ ಪ್ರಕಾರ ಮದುವೆ ನಡೆದಿದೆ. ಮದುವೆಯ ದಿನ ರಾತ್ರಿ ವರನ ಮನೆಯಲ್ಲಿ ದಿಖಾಯಿ ಸಂಭ್ರಮ. ಬಸ್ತಿ ಜಿಲ್ಲೆಯ ಕೆಲ ಕುಟುಂಬಗಳಲ್ಲಿ ಮೊದಲ ರಾತ್ರಿಯನ್ನು ದಿಖಾಯಿ ಸಂಭ್ರಮವಾಗಿ ಆಚರಿಸಲಾಗುತ್ತದೆ. 


ಮದುವೆ ಮುಗಿಸಿ ಮನೆಗೆ ಬಂದ ವಧು-ವರರಿಗೆ ಖಾದ್ಯಗಳು ಸೇರಿದಂತೆ ಹಲವು ಆಹಾರಗಳನ್ನು ನೀಡಲಾಗಿದೆ. ಕತ್ತಲಾಗುತ್ತಿದ್ದಂತೆ ಸಂಭ್ರಮ ಮನೆ ಮಾಡಿದೆ. ಇತ್ತ ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವರು ಮನೆಗೆ ಆಗಮಿಸಿದ್ದಾರೆ. ಎಲ್ಲೆಡೆ ಸಂಭ್ರಮವೋ ಸಂಭ್ರಮ. ಮೊದಲ ರಾತ್ರಿಗೆ ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿಯಿದೆ. ಇದರ ನಡುವೆ ವಧು ಆಗಮಿಸಿ ವರನ ಕಿವಿಯಲ್ಲಿ ಮೆಲ್ಲಗೆ ಬೇಡಿಕೆಯೊಂದನ್ನು ಇಟ್ಟಿದ್ದಾಳೆ. ಈಕೆಯ ಮೊದಲ ಬೇಡಿಕೆ, ನನಗೊಂದು ಬಿಯರ್ ಬೇಕು. ಪತ್ನಿ ಮೊದಲ ರಾತ್ರಿ ಬಿಯರ್ ಬೇಡಿಕೆ ಇಟ್ಟಿದ್ದಾಳೆ. ಈಗಿನ ಕಾಲದಲ್ಲಿ ಬಹುತೇಕರು ಬಿಯರ್ ಸೇರಿದಂತೆ ಇತರ ಮದ್ಯ ಸೇವಿಸೋದು ಸಾಮಾನ್ಯ ಎಂದು ಮನಸ್ಸಿನಲ್ಲೇ ಸಮಾಧಾನ ಪಟ್ಟುಕೊಂಡ ವರ, ಸರಿ ತರುತ್ತೇನೆ ಎಂದಿದ್ದಾನೆ.


ಪತ್ನಿಗೆ ಬಿಯರ್ ತರಲು ಕುಟುಂಬ ಸದಸ್ಯರಿಗೆ ಅಥವಾ ಆಪ್ತರಿಗೆ ಹೇಳಿದರೆ ಪ್ರಶ್ನೆ ಉದ್ಭವವಾಗುತ್ತದೆ. ತಾನು ಬಿಯರ್ ಕುಡಿಯುವುದಿಲ್ಲ, ಮದ್ಯ ಸೇವಿಸುವುದಿಲ್ಲ ಅನ್ನೋದು ಎಲ್ಲರಿಗೂ ತಿಳಿದಿದೆ. ಕುಟುಂಬಸ್ಥರಲ್ಲೂಈ ರೀತಿ ಅಭ್ಯಾಸಗಳಿಲ್ಲ. ಹೀಗಾಗಿ ಒಂದು ಬಿಯರ್ ಯಾರಿಗೆ ಅನ್ನೋ ಪ್ರಶ್ನೆ ಮೂಡಲಿದೆ. ಇದರಿಂದ ಪತ್ನಿಯ ಮಾನ ಹರಾಜಾಗಲಿದೆ. ಪೋಷಕರು, ಕುಟುಂಬಸ್ಥರು ಆತಂಕಗೊಳ್ಳಲಿದ್ದಾರೆ ಎಂದುಕೊಂಡು ತಾನೆ ಖುದ್ದಾಗಿ ಹೋಗಿ ಬಿಯರ್ ತರಲು ಮುಂದಾಗಿದ್ದಾನೆ.


ಇನ್ನೇನು ಬಿಯರ್ ತರಲು ಹೊರಡಬೇಕು ಅನ್ನುವಷ್ಟರಲ್ಲಿ ವಧು ಮತ್ತೆರಡು ಬೇಡಿಕೆ ಇಟ್ಟಿದ್ದಾಳೆ. ಬಿಯರ್ ತರುವಾಗ ಸ್ವಲ್ಪ ಗಾಂಜಾ ಹಾಗೂ ಮಟನ್ ತಂದು ಬಿಡಿ ಎಂದಿದ್ದಾಳೆ. ಈ ಮಾತು ಕೇಳುತ್ತಿದ್ದಂತೆ ವರ ಬೆಚ್ಚಿ ಬಿದ್ದಿದ್ದಾನೆ. ಇವೆಲ್ಲಾ ತರಬೇಕೇ? ಮದ್ಯವೇ ನಮ್ಮ ಕುಟುಂಬದಲ್ಲಿ ನಿಷಿದ್ಧವಾಗಿದೆ. ಆದರೆ ಈಕೆ ಕೇಳುತ್ತಿರುವುದೇನು? ಎಂದು ಆಕ್ರೋಶಗೊಂಡಿದ್ದಾನೆ. ಇವೆಲ್ಲಾ ಸಾಧ್ಯವಿಲ್ಲ ಎಂದಿದ್ದಾನೆ. ಇದೇ ವಿಚಾರಕ್ಕೆ ಜಗಳ ಶುರುವಾಗಿದೆ. 


ಸಣ್ಣ ಮಟ್ಟದಲ್ಲಿದ್ದ ಜಗಳ ದೊಡ್ಡದಾಗಿದೆ. ಎರಡೂ ಕುಟುಂಬಸ್ಥರಿಗೆ ವಿಚಾರ ಗೊತ್ತಾಗಿದೆ. ಜಗಳ ತಾರಕಕ್ಕೇರುವ ಮುನ್ನವೇ ಯುವತಿಯ ಮನೆಯವರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನ ನಡೆಸಿದ್ದಾರೆ. ಪುತ್ರಿ ಸುಮ್ಮನೆ ಜೋಕ್ ಮಾಡಿದ್ದಾಳೆ. ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ಇದು ಜೋಕ್ ಆಗಿರಲಿಲ್ಲ. ವಧು ಮೂರು ಬೇಡಿಕೆ ಪೂರೈಸಬೇಕೆಂದು ಪಟ್ಟು ಹಿಡಿದಿದ್ದಾಳೆ. ಜಗಳದ ಮಾಹಿತಿ ಪೊಲೀಸ್ ಠಾಣೆಗೂ ತಲುಪಿದೆ. ಪೊಲೀಸರು ಆಗಮಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ವರ, ಮದುವೆಯಾಗಿರುವ ಯುವತಿಯ ಮೇಲೆ ಕೆಲ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಈಕೆಯ ಗುಣಲಕ್ಷಣಗಳು ಪುರುಷರ ರೀತಿ ಇದೆ ಎಂದು ಆರೋಪಿಸಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ವಧುವನ್ನು ವಶಕ್ಕೆ ಪಡೆದಿರುವ ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ. 


Ads on article

Advertise in articles 1

advertising articles 2

Advertise under the article

ಸುರ