-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಗರ್ಭದಲ್ಲಿರುವಾಗಲೇ ಶಿಶು ವಿಶೇಷ ಚೈತನ್ಯ ಎನ್ನುವುದು ಗುರುತಿಸಬಹುದು: ವೈದ್ಯರು ಹೇಳಿದ್ದೇನು ಗೊತ್ತಾ?

ಗರ್ಭದಲ್ಲಿರುವಾಗಲೇ ಶಿಶು ವಿಶೇಷ ಚೈತನ್ಯ ಎನ್ನುವುದು ಗುರುತಿಸಬಹುದು: ವೈದ್ಯರು ಹೇಳಿದ್ದೇನು ಗೊತ್ತಾ?



ವಿಶೇಷ ಚೈತನ್ಯ ಶಿಶು ಹುಟ್ಟಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ರಕ್ತ ಸಂಬಂಧದಲ್ಲಿಯೇ ಆಗುವ ವಿವಾಹ. ಇದನ್ನು ಬಿಟ್ಟರೆ, ಗರ್ಭಿಣಿಯಾಗಿದ್ದ ಸಂದರ್ಭ  ಗರ್ಭಪಾತ ಮಾಡಿಸಿಕೊಳ್ಳಲು ಮಾತ್ರೆಗಳನ್ನು ನುಂಗಿ ವಿಫಲವಾಗುವುದು ಹೀಗೆ ಹಲವಾರು ಕಾರಣಗಳ ಪಟ್ಟಿಯನ್ನು ವೈದ್ಯರು ನೀಡುತ್ತಾರೆ.

ವಿವಾಹವಾದ ಬಳಿಕ ಫ್ಯಾಮಿಲಿ ಪ್ಲ್ಯಾನಿಂಗ್​ ಎಂದು ಸುದೀರ್ಘ ಅವಧಿಯವರೆಗೆ ವಿಭಿನ್ನ ರೀತಿಯ ಮಾತ್ರೆಗಳನ್ನು ನುಂಗುವುದು ಕೂಡ ಒಂದು ಕಾರಣ ಎನ್ನಲಾಗಿದೆ. ಕಾರಣ ಏನೇ ಇದ್ದರೂ, ಇಂಥಹ ಶಿಶು ಹುಟ್ಟಿದಾಗ ಅದರ ಆರೈಕೆ ಮಾಡುವುದು ಪಾಲಕರಿಗೆ ಎಷ್ಟು ಕಷ್ಟವೋ, ತನ್ನದಲ್ಲದ ತಪ್ಪಿಗೆ ಆ ಮಗು ಅನುಭವಿಸುವ ನೋವು ಕೂಡ ಹೇಳಿಕೊಳ್ಳಲಾಗದಂಥದ್ದು.


ಇದೇ ಕಾರಣಕ್ಕೆ ಶಿಶು ಗರ್ಭದಲ್ಲಿರುವಾಗಲೇ ಅದರ ಅಂಗವೈಕಲ್ಯತೆ, ಬುದ್ಧಿಮಾಂದ್ಯತೆಯ ಬಗ್ಗೆ ತಿಳಿದುಕೊಳ್ಳಬಹುದಾ ಎನ್ನುವ ಪ್ರಶ್ನೆಗೆ ಖ್ಯಾತ ವೈದ್ಯರಾಗಿರುವ ಡಾ.ನೃತ್ಯಾ ವಿವರವಾಗಿ ತಿಳಿಸಿದ್ದಾರೆ. ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.  ಮಹಿಳೆ ಗರ್ಭ ಧರಿಸಿದ 11ರಿಂದ 14ನೇ ವಾರದಲ್ಲಿ ಮಗು ಬುದ್ಧಿಮಾಂದ್ಯತೆಯುಳ್ಳದ್ದೇ ಎನ್ನುವುದನ್ನು ಕಂಡುಹಿಡಿಯಲು ಕೆಲವು ಪರೀಕ್ಷೆಗಳನ್ನು ಮಾಡಬಹುದು ಎಂದಿದ್ದಾರೆ ವೈದ್ಯರು. NT ಸ್ಕ್ಯಾನ್, ಡಬಲ್ ಮಾರ್ಕರ್ ಪರೀಕ್ಷೆ ಮತ್ತು ಅನೋಮಲಿ ಸ್ಕ್ಯಾನ್​ಗಳ ಮೂಲಕ NT ಸ್ಕ್ಯಾನ್, ಡಬಲ್ ಮಾರ್ಕರ್ ಪರೀಕ್ಷೆ ಮತ್ತು ಅನೋಮಲಿ ಸ್ಕ್ಯಾನ್ ಮೂಲಕ ಮಗುವಿನ ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯತೆಯನ್ನು ತಿಳಿಯಬಹುದಾಗಿದೆ.

ಶೇಕಡಾ 100ರಷ್ಟು ಅಲ್ಲದಿದ್ದರೂ ಶೇಕಡಾ 90ರಷ್ಟು ಈ ಸ್ಕ್ಯಾನ್​ಗಳು ಶಿಶುವಿನ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಈ ಎಲ್ಲಾ ಪ್ರಸವಪೂರ್ವ ಪರೀಕ್ಷೆಗಳು ಭ್ರೂಣದಲ್ಲಿ ಕ್ರೋಮೋಸೋಮಲ್ ಅಸಹಜತೆಗಳನ್ನು ಗುರುತಿಸಲು ಸಹಾಯ ಮಾಡುತ್ತವೆ ಎಂದಿದ್ದಾರೆ.


NT ಸ್ಕ್ಯಾನ್: ಮಗುವಿನ ಕತ್ತಿನ ಹಿಂಭಾಗದಲ್ಲಿರುವ ಸ್ಪಷ್ಟ ಅಂಗಾಂಶದ ದಪ್ಪವನ್ನು ಅಳೆಯುವ ಅಲ್ಟ್ರಾಸೌಂಡ್. ಈ ಸ್ಕ್ಯಾನ್ ಶೇಕಡಾ 70ರಷ್ಟು ಪ್ರಸವಪೂರ್ವ ಡೌನ್ ಸಿಂಡ್ರೋಮ್ ಪ್ರಕರಣಗಳನ್ನು ಪತ್ತೆ ಮಾಡುತ್ತದೆ.
ಡಬಲ್ ಮಾರ್ಕರ್ ಪರೀಕ್ಷೆ: ತಾಯಿಯ ರಕ್ತದಲ್ಲಿ ಎರಡು ಗರ್ಭಧಾರಣೆಯ ಸಂಬಂಧಿತ ಹಾರ್ಮೋನ್‌ಗಳ ಮಟ್ಟವನ್ನು ಅಳೆಯುವ ರಕ್ತ ಪರೀಕ್ಷೆ ಇದಾಗಿದೆ. ಬೀಟಾ-ಎಚ್‌ಸಿಜಿ ಮತ್ತು ಪಿಎಪಿಪಿ-ಎ ಪರೀಕ್ಷೆ ಇದಾಗಿದ್ದು,  ಈ ಪರೀಕ್ಷೆಯು ಆನುವಂಶಿಕತೆಯಿಂದ ಬಂದಿರುವ ಅನಾರೋಗ್ಯದ ಲಕ್ಷಣಗಳನ್ನು ಶಿಶುಗಳಲ್ಲಿ ಶೇಕಡಾ 90ರಷ್ಟು ಪತ್ತೆ ಮಾಡಲು ಸಹಕಾರಿಯಾಗಿದೆ.  
ಅನೋಮಲಿ ಸ್ಕ್ಯಾನ್​: ಭ್ರೂಣದಲ್ಲಿನ ಅಸಹಜತೆಯನ್ನು ಗುರುತಿಸಲು ಸಹಾಯ ಮಾಡುವ ಸ್ಕ್ಯಾನ್ ಇದಾಗಿದೆ. 
ಹೆಚ್ಚು ನಿಖರವಾದ ಫಲಿತಾಂಶಗಳನ್ನು ಒದಗಿಸಲು ಡಬಲ್ ಮಾರ್ಕರ್ ಪರೀಕ್ಷೆ ಮತ್ತು NT ಸ್ಕ್ಯಾನ್ ಅನ್ನು ಹೆಚ್ಚಾಗಿ ಒಟ್ಟಿಗೆ ನಡೆಸಲಾಗುತ್ತದೆ. ನೀವು 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಕೆಲವು ಪರಿಸ್ಥಿತಿಗಳ ಕುಟುಂಬದ ಇತಿಹಾಸವನ್ನು ಹೊಂದಿದ್ದರೆ ಅಥವಾ ಕ್ರೋಮೋಸೋಮಲ್ ಸಮಸ್ಯೆಗಳ ಹೆಚ್ಚಿನ ಅಪಾಯವನ್ನು ಹೊಂದಿದ್ದರೆ ಡಬಲ್ ಮಾರ್ಕರ್ ಪರೀಕ್ಷೆಯನ್ನು ಶಿಫಾರಸು ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article