-->

ನಿವೇದಿತಾ ಗೌಡನೊಂದಿಗೆ ಸಂಬಂಧ ಹೀಗಿತ್ತಾ? ದಾಂಪತ್ಯ ಜೀವನದ ಕಹಿಸತ್ಯವನ್ನು ಬಿಚ್ಚಿಟ್ಟ ಚಂದನ್ ಶೆಟ್ಟಿ ವೀಡಿಯೋ ವೈರಲ್

ನಿವೇದಿತಾ ಗೌಡನೊಂದಿಗೆ ಸಂಬಂಧ ಹೀಗಿತ್ತಾ? ದಾಂಪತ್ಯ ಜೀವನದ ಕಹಿಸತ್ಯವನ್ನು ಬಿಚ್ಚಿಟ್ಟ ಚಂದನ್ ಶೆಟ್ಟಿ ವೀಡಿಯೋ ವೈರಲ್


ಬಿಗ್‌ಬಾಸ್‌ ಖ್ಯಾತಿಯ ನಟಿ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿಯ ಡಿವೋರ್ಸ್ ಆಗಿ ಆರು ತಿಂಗಳಾಗುತ್ತಾ ಬಂದಿದೆ. ಯಾವುದೇ ಗಲಾಟೆ-ಗದ್ದಲಗಳಿಗೆ ಆಸ್ಪದವಿಲ್ಲದೆ ವಿಚ್ಛೇದನ ಪಡೆದುಕೊಂಡು ಸುದ್ದಿಯಾಗಿದ್ದ ಜೋಡಿ, ಇದಕ್ಕೆ ಕಾರಣವನ್ನು ಮಾತ್ರ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಇದೇ ಕಾರಣಕ್ಕೆ, ನೆಟ್ಟಿಗರು ಹಾಗೂ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿವರಣೆ ನೀಡುತ್ತ ಬರುದ್ದಾರೆ. ಅದರಲ್ಲೂ ವಿಚ್ಛೇದನದ ಬಳಿಕ ನಿವೇದಿತಾ ಗೌಡ ಸಕತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲಾ ಬಿಟ್ಟು ಬ್ಯಾಕ್‌ಲೆಸ್‌ ಮಟ್ಟಕ್ಕೂ ಬಂದು ನಿಂತಿದ್ದಾರೆ. ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್​ಗಳ ಸುರಿಮಳೆಯೇ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್​ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರುವ ಕಮೆಂಟ್ಸ್​ ಜಾಸ್ತಿಯಾಗುತ್ತಿವೆ. 


ಈಕೆಯ ಚೆಲ್ಲಾಟಕ್ಕೆ ಚಂದನ್​ ಶೆಟ್ಟಿ ಡಿವೋರ್ಸ್​ ಪಡೆದುಕೊಂಡದ್ದು, ರೀಲ್ಸ್ ಮಾಡುವುದಕ್ಕಾಗಿಯೇ ವಿಚ್ಛೇದನ ಪಡೆದ ಮೊದಲ ಮಹಿಳೆ. ಹೀಗೆ ಏನೇನೋ ಕಮೆಂಟ್ಸ್​ ಮಾಡಿ ನಿವೇದಿತಾರ ತೇಜೋವಧೆ ಮಾಡಲಾಗುತ್ತಿದೆ. ಡಿವೋರ್ಸ್ ಬಳಿಕ ಈಕೆಯನ್ನು ಸುಮ್ಮನಿರಲು ಬಿಡುತ್ತಲೇ ಇಲ್ಲ. ಸದಾ ಟ್ರೋಲ್​ ಮಾಡುತ್ತಲೇ ಕಾಲ ಕಳೆಯುತ್ತಿದ್ದಾರೆ ನೆಟ್ಟಿಗರು. ಆದರೆ ಇದಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಂಡಿದ್ದೇ ಇಲ್ಲ. ಆದರೆ ಇದೀಗ ಚಂದನ್‌ ಶೆಟ್ಟಿಯವರು ನಿವೇದಿತಾರೊಂದಿಗೆ ವಿವಾಹವಾದ ಬಳಿಕ ಅನುಭವಿಸುತ್ತಿರುವ ನೋವಿನ ಬಗ್ಗೆ ನಗುತ್ತಲೇ ಹೇಳಿಕೊಂಡಿರುವ ವೀಡಿಯೋ ಒಂದು ವೈರಲ್‌ ಆಗಿದೆ. ಅಷ್ಟಕ್ಕೂ ಇದು ಮಜಾ ಟಾಕೀಸ್‌ ವಿಡಿಯೋ. ಈ ವಿಡಿಯೋ ಅನ್ನು ಕಲರ್ಸ್ ಕನ್ನಡ ಚಾನೆಲ್‌ ಮತ್ತೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ.

ಈಗ ಆ ಎಪಿಸೋಡ್‌ ಮತ್ತೊಮ್ಮೆ ಶೇರ್ ಆಗಿರುವುದಕ್ಕೆ ಸೂಕ್ತ ಕಾರಣವಿಲ್ಲ. ಆದರೆ ಇದರಲ್ಲಿ ನಿವೇದಿತಾ ಗೌಡ ಯಾವ ರೀತಿ ವರ್ತಿಸುತ್ತಿದ್ದರು ಎಂಬ ಬಗ್ಗೆ ಚಂದನ್‌ ಶೆಟ್ಟಿ ಆಡಿರುವ ಮಾತುಗಳನ್ನು ಕೇಳಿದವರು, ಮಾತ್ರ ಕೊನೆಗೂ ಇವರ ವಿಚ್ಛೇದನಕ್ಕೆ ಕಾರಣ ತಿಳಿಯಿತು ಬಿಡಿ ಎನ್ನುತ್ತಿದ್ದಾರೆ.

ವಿಡಿಯೋದಲ್ಲಿ ಚಂದನ್‌ ಶೆಟ್ಟಿಯವರು, ನಿವೇದಿತಾ ಗೌಡ ಮನೆಯಲ್ಲಿ ಯಾವ ಕೆಲಸವನ್ನು ಮಾಡುತ್ತಿಲ್ಲ‌. ಅವಳ ದಿನ ಪ್ರಾರಂಭವಾಗುವುದೇ ಮಧ್ಯಾಹ್ನ ಎದ್ದೇಳೋದು 12 ಅಥವಾ 1ಗಂಟೆಗೆ.‌ ತನಗೆ ಏಳು ಗಂಟೆಗೆ ಎಚ್ಚರವಾಗುತ್ತದೆ. ಹೊಟ್ಟೆ ಹಸಿವು ಆಗುತ್ತಿರುತ್ತದೆ. ಇವಳು ಏಳು ಎಂದರೆ ಏಳೋದೇ ಇಲ್ಲ. ಬೈಯೋಕೆ ಆರಂಭಿಸುತ್ತಾಳೆ. ಆಯ್ತು ಅಂತ ನಾನೇ ಹೊಂದಿಕೊಂಡು ಬ್ರೇಕ್‌ಫಾಸ್ಟ್‌ ಮಾಡಲು ಆರಂಭಿಸಿದೆ. ಬೆಳಗ್ಗೆ ಮಾಡಿದ್ರೆ ಮಧ್ಯಾಹ್ನಕ್ಕೂ ಅದೇ ಆಗುವಂತೆ ಜಾಸ್ತಿನೇ ಮಾಡುತ್ತಿದೆ. ಆದರೆ ತಿಂಗಳಾದರೂ ಇದೇ ಕಂಟಿನ್ಯೂ ಆಯ್ತು. ಫುಲ್‌ ಟೆನ್ಷನ್‌ ಆಗೋಯ್ತು. ಏಳುತ್ತಲೇ ಇರಲಿಲ್ಲ. ನಾನೇ ಎಲ್ಲವನ್ನೂ ಮಾಡಬೇಕಿತ್ತು ಮನೆಯ ಕಸ ಗುಡಿಸಬೇಕು. ನೆಲ ಒರೆಸಬೇಕು, ಪಾತ್ರೆ ತೊಳೆಯಬೇಕು ಎಲ್ಲವನ್ನೂ ನಾನೇ ಮಾಡಬೇಕಿತ್ತು. ಇವಳು ನೋಡಿದ್ರೆ ಮಲಗೇ ಇರುತ್ತಿದ್ದಳು ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ. 


ಕೊನೆಗೆ ಒಂದು ಐಡಿಯಾ ಮಾಡಿ, ಯಾರು ಒಂದು ಕೆಲಸ ಮಾಡ್ತಾರೆ ಅವರು ಇನ್ನೊಬ್ಬರಿಗೆ ಇನ್ನೂರು ರೂಪಾಯಿ ಕೊಡಬೇಕು ಎಂದು ಷರತ್ತು ವಿಧಿಸಿದೆ. ಒಂದು ಕೆಲಸಕ್ಕೆ ಇನ್ನೂರು ರೂಪಾಯಿ ಮಾಡುತ್ತಿದ್ದಂತೆಯೇ ಅವಳು ಬೆಳಗ್ಗೆ ಏಳಲು ಆರಂಭಿಸಿದಳು ಎಂದು ಹೇಳಿದ್ದಾರೆ. ಆದರೆ ಅವರು ಕೊಟ್ಟ ಲಿಸ್ಟ್‌ ನೋಡಿದ ಆ್ಯಂಕರ್ ಸೃಜನ್‌ ಲೋಕೇಶ್‌ ಅವರು, ಆ ಲಿಸ್ಟ್‌ನಲ್ಲಿ ನಿವೇದಿತಾ ಅವರೇ ಹೆಚ್ಚು ದುಡ್ಡು ಕೊಡಬೇಕಾಗಿ ಬಂದಿರುವುದನ್ನು ನೋಡಿದ್ದಾರೆ. ಅಲ್ಲಿಗೇ ಚಂದನ್‌ ಶೆಟ್ಟಿಯವರೇ ಎಲ್ಲಾ ಕೆಲಸ ಮಾಡುತ್ತಿದ್ದರು ಎನ್ನುವುದು ತಿಳಿದಿದೆ. ಇದರಿಂದಲೇ ದಂಪತಿ ನಡುವೆ ಜಗಳ ಆಗಿರಬಹುದು. ಪತ್ನಿಯಾಗಿ ಇಂಥ ವರ್ತನೆಯನ್ನು ಯಾವ ಗಂಡಸೂ ಸಹಿಸುವುದಿಲ್ಲ. ಇಷ್ಟು ದಿನ ಅವಳ ಜೊತೆ ಬಾಳಿದ್ದೇ ಹೆಚ್ಚು ಎಂದೆಲ್ಲಾ ಕಮೆಂಟಿಗರುಕಮೆಂಟ್‌ ಮಾಡುತ್ತಿದ್ದಾರೆ. 


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article