ಕೆಲಸದ ನಡುವೆಯೇ ನಿದ್ದೆಗೆ ಜಾರಿದ ಉದ್ಯೋಗಿ ವಜಾ: ಕಾನೂನು ಹೋರಾಟಕ್ಕೆ ಸಿಕ್ಕಿತು ನಾಲ್ಕು ಕೋಟಿ ರೂ. ಪರಿಹಾರ


ಝೈಂಗ್ಸೂ: ಕಚೇರಿ ಕೆಲಸದ ನಡುವೆಯೇ ಉದ್ಯೋಗಿಯೊಬ್ಬ ತೂಕಡಿಸಿ, ನಿದ್ದೆ ನಿಯಂತ್ರಿಸಲು ಸಾಧ್ಯವಾಗದ ಕಾರಣ ಹಾಗೇ ಡೆಸ್ಕ್ ಮೇಲೆ ಮಲಗಿದ್ದಾನೆ. ಆದರೆ ಕೆಲಸದ ನಡುವೆಯೇ ನಿದ್ದೆಗೆ ಜಾರಿದಕ್ಕೆ ಉದ್ಯೋಗಿ ವಿರುದ್ಧ ಕೆಮಿಕಲ್ ಕಂಪನಿ ಕಠಿಣ ಕ್ರಮ ತೆಗೆದುಕೊಂಡು ಕೆಲಸದಿಂದ ವಜಾ ಮಾಡಿದೆ. ಆದರೆ ಕಂಪೆನಿ ವಿರುದ್ದ ಕಾನೂನು ಹೋರಾಟ ಮಾಡಿದ ಉದ್ಯೋಗಿಗೆ ಇದೀಗ ಪರಿಹಾರ ಸಿಕ್ಕಿದೆ. ಕಂಪೆನಿಯು ಉದ್ಯೋಗಿಗೆ ಬರೋಬ್ಬರಿ 4 ಕೋಟಿ ರೂಪಾಯಿ ಹಣವನ್ನು ಪರಿಹಾರದ ರೂಪದಲ್ಲಿ ಉದ್ಯೋಗಿಗೆ ನೀಡುವಂತೆ ಕೋರ್ಟ್ ಆದೇಶಿಸಿದ ಘಟನೆ ಚೀನಾದ ಝೈಂಗ್ಸೂ ಪ್ರಾಂತ್ಯದಲ್ಲಿ ನಡೆದಿದೆ.


ಝ್ಹಾಂಗ್ ಬ ಉದ್ಯೋಗಿ ಕಳೆದ 20 ವರ್ಷಗಳಿಂದ ಕೆಮಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೆಲಸ ಒತ್ತಡ, ಹೆಚ್ಚುವರಿ ಕೆಲಸ ಸೇರದಂತೆ ಹಲವು ಸವಾಲುಗಲನ್ನು ಝ್ಹಾಂಗ್ ಪ್ರತಿದಿನ ನಿಭಾಯಿಸುತ್ತಿದ್ದ. ಇದರಿಂದಲೇ ಕೆಲವು ಉದ್ಯೋಗಿಗಳು ಕಂಪೆನಿಯನ್ನೇ ತೊರೆದಿದ್ದರು. ಅದರ ಜವಾಬ್ದಾರಿಯೂ ಝ್ಹಾಂಗ್ ಹೆಗಲೇರಿತ್ತು. ತಡರಾತ್ರಿವರೆಗೂ ಕೆಲಸ ಮಾಡಿ ತೆರಳಿದ್ದ ಝ್ಹಾಂಗ್ ಮರುದಿನ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹಾಜರಾಗುತ್ತಿದ್ದ.


ಒಂದು ದಿನ ಮಧ್ಯಾಹ್ನದ ವೇಳೆ ಝ್ಹಾಂಗ್ ತೂಕಡಿಸಲು ಆರಂಭಿಸಿದ್ದ. ಮುಖ ತೊಳೆದುಕೊಂಡು ಬಂದು ಮತ್ತೆ ಕೆಲಸ ಮಾಡಲು ಕುಳಿತ. ಆದರೆ ಅದು ಸಾಧ್ಯವಾಗಲೇ ಇಲ್ಲ. ಏನೇ ಮಾಡಿದರೂ ನಿದ್ರೆಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಕೆಲಸ ಮಾಡುತ್ತಿದ್ದ ಡೆಸ್ಕ್‌ನಲ್ಲಿಯೇ ಮಲಗಿದ್ದಾನೆ. ತೀವ್ರ ಸುಸ್ತು, ಸರಿಯಾಗಿ ನಿದ್ದೆಯಿಲ್ಲದ ಕಾರಣ ಝ್ಹಾಂಗ್ ಸುಮಾರು 1 ಗಂಟೆಗಳ ಕಾಲ ನಿದ್ರಿಸಿದ್ದಾನೆ. ಬಳಿಕ ಎದ್ದು ಕೆಲಸ ಮುಂದುವರಿಸಿದ್ದಾನೆ. ಮರುದಿನ ಬೆಳಗ್ಗೆ ಝ್ಹಾಂಗ್ ಕೆಲಸಕ್ಕೆ ಬಂದಾಗ ಕಂಪೆನಿ ಮ್ಯಾನೇಜ್ಮೆಂಟ್ ಗರಂ ಆಗಿದೆ.

ಸಿಸಿಟಿವಿ ದೃಶ್ಯಗಳನ್ನು ಪರಿಶೀಸಿಲಿದಾಗ ಝ್ಹಾಂಗ್ ನಿದ್ದೆ ಮಾಡುತ್ತಿರುವುದು ಪತ್ತೆಯಾಗಿದೆ. 1ಗಂಟೆಗೂ ಅಧಿಕ ಕಾಲ ಆತ ನಿದ್ದೆಗೆ ಜಾರಿರುವುದು ಕಂಪನಿ ಆಕ್ರೋಶಕ್ಕೆ ಕಾರಣಾಗಿದೆ. ತಕ್ಷಣವೆ ಝ್ಹಾಂಗ್‌ಗೆ ಇಮೇಲ್ ಕಳಿಸಿ ಕಾರಣ ನೀಡಿ ಕೆಲಸದಿಂದ ವಜಾ ಮಾಡಿದೆ. 2004ರಲ್ಲಿ ಕೆಲಸಕ್ಕೆ ಹಾಜರಾಗುವಾಗ ಕಂಪೆನಿಯ ಒಪ್ಪಂದ, ಷರತ್ತುಗಳಿಗೆ ಸಹಿ ಹಾಕಿದ್ದೀರಿ. ಆದರೆ ಕಚೇರಿ ಸಮಯದಲ್ಲಿ, ಕರ್ತವ್ಯದ ನಡುವೆ ಗಂಟೆಗಳ ಕಾಲ ಮಲಗಿದ್ದೀರಿ. ಈ ಮೂಲಕ ಕಂಪೆನಿಯ ಶೂನ್ಯ ಸಹಿಷ್ಣುತೆಗೆ ನಿಯಮವನ್ನು ಉಲ್ಲಂಘಿಸಿದ್ದೀರಿ. ಕಂಪನಿಯ ಸಮಯ ವ್ಯರ್ಥ ಮಾಡಿದ್ದೀರಿ. ಇದರಿಂದ ಉತ್ಪಾದಕತೆ ಕಡಿಮೆಯಾಗಿದೆ. ಇಂತಹ ನಡವಳಿಕೆಯನ್ನು ಕಂಪನಿ ಸಹಿಸಿಕೊಳ್ಳುವುದಿಲ್ಲ. ಹೀಗಾಗಿ ಅಮಾನತು ಮಾಡಿರುವುದಾಗಿ ಇಮೇಲ್ ಮಾಡಲಾಗಿತ್ತು.

ನಿದ್ದೆ ಮಾಡಿದ ಕಾರಣಕ್ಕೆ ಏಕಾಏಕಿ ಕೆಲಸದಿಂದ ತೆಗೆದುಹಾಕಿದದ್ದರ ಕಂಪೆನಿಯ ವಿರುದ್ದ ಝ್ಹಾಂಗ್ ಕಾನೂನು ಸಮರಕ್ಕೆ ಮುಂದಾಗಿದ್ದಾನೆ. ಪ್ರಕರಣವನ್ನು ಪೀಪಲ್ ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ಕಚೇರಿಯಿಂದ ವರದಿ ಹಾಗೂ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿತ್ತು. ವಿಚಾರಣೆ ವೇಳೆ ಕೋರ್ಟ್ ಕಂಪನಿಗೆ ಛೀಮಾರಿ ಹಾಕಿತ್ತು. 20 ವರ್ಷಗಳಿಂದ ಕಂಪೆನಿಗಾಗಿ ದುಡಿದ್ದಾರೆ. ಕರ್ತವ್ಯ ಸಮಯದಲ್ಲಿ ಮಲಗುವುದು ಕಚೇರಿ ನಿಯಮದ ಪ್ರಕಾರ ತಪ್ಪು ಅನ್ನೋದು ಸರಿ. ಆದರೆ ಇದಕ್ಕೆ ಶಿಕ್ಷೆ ಈ ರೀತಿ ಕೊಡವುದು ಯಾವ ನ್ಯಾಯ. 2ದಶಕಗಳಿಂದ ಕಂಪೆನಿಯಲ್ಲಿ ಕೆಲಸ ಮಾಡಿದ ವ್ಯಕ್ತಿಗೆ ಎಷ್ಟು ಪ್ರಮೋಶನ್ ನೀಡಿದ್ದೀರಿ. ವೇತನ ಎಷ್ಟು ಬಾರಿ ಹೆಚ್ಚಿಸಿದ್ದೀರಿ ಎಂದು ಪ್ರಶ್ನಿಸಿದೆ. ಮಲಗಿದ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಕಲು ಕಾರಣವೇ ಅಲ್ಲ. ಆದ್ದರಿಂದ ಮರು ಮಾತನಾಡದೇ ಉದ್ಯೋಗಿಗೆ 4 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

BREAKING NEWS
Loading latest news...
Join our WhatsApp Channel Powered By : Online Pudu