ಪೋರ್ನ್ ಫಿಲ್ಮ್‌ನಲ್ಲಿ‌ ನಟಿಸಲು ಪುತ್ರನಿಗೆ ಆಫರ್: ತಾಯಿಯ ರಿಯಾಕ್ಷನ್ ಹೇಗಿತ್ತು ಗೊತ್ತಾ?


ಪುತ್ರನಿಗೆ ಫಿಲ್ಮ್​ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದೆ ಎಂದಾಗ ಬಹುತೇಕ ಹೆತ್ತವರಿಗೆ ಸಂತೋಷವಾಗುವುದು ಸಹಜವೇ. ಅದರಲ್ಲಿಯೂ ಸೋಶಿಯಲ್​ ಮೀಡಿಯಾದಲ್ಲಿ ಗುರುತಿಸಿಕೊಂಡಿರುವವರಿಗೆ ಈ ರೀತಿಯ ಆಫರ್​ ಬಂದಿದೆ ಎಂದರೆ ಸಂತೋಷವಾಗುತ್ತದೆ. ಅದೇ ರೀತಿ, ಕಂಟೆಂಟ್ ಕ್ರಿಯೇಟರ್ ಒಬ್ಬರು ತಮಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದೆ ಎಂದು ಅಮ್ಮನಿಗೆ ಹೇಳಿದಾಗ, ಅಮ್ಮ ಖುಷಿಯಿಂದ ನಲಿದಾಡಿದ್ದಾರೆ. ಆದರೆ ಕೊನೆಗೆ ಯಾವ ಫಿಲ್ಮ್​ ಎಂದು ತಿಳಿಸಿದಾಗ ಅಮ್ಮನ ರಿಯಾಕ್ಷನ್​ ಹೇಗಿದೆ ಎನ್ನುವ ವಿಡಿಯೋ ವೈರಲ್​ ಆಗಿದೆ.

ಕಂಟೆಂಟ್​ ಕ್ರಿಯೇಟರ್​  ಅಶ್ವಿನ್ ಉನ್ನಿಯವರು ಈ ವಿಡಿಯೋ ಮಾಡಿದ್ದಾರೆ. ಅದರಲ್ಲಿ ಅವರು ಮೊದಲಿಗೆ ತಮಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದಾಗ, ತಾಯಿ ಖುಷಿಯಿಂದ ಮಗನನ್ನು ಅಪ್ಪಿ ಮುದ್ದಾಡಿದ್ದಾರೆ.


ಈ ಸಿನಿಮಾಎ ತಮಗೆ 3 ಲಕ್ಷ ರೂಪಾಯಿ ಸಿಗಲಿದೆ ಎಂದಾಗಲೂ ಅಮ್ಮ ಖುಷಿಯಾಗಿದ್ದಾರೆ. ಕೊನೆಗೆ ಅಶ್ವಿನ್​ ಅವರು ತಮಗೆ ಅವಕಾಶ ಸಿಕ್ಕಿದ್ದು ಪೋರ್ನ್ ಸಿನಿಮಾದಲ್ಲಿ ನಟಿಸಲು ಎಂದಿದ್ದಾರೆ. ಹೀಗೆ ಹೇಳಿದಾಗ ಸಹಜವಾಗಿ ಎಲ್ಲ ಅಮ್ಮಂದಿರ ಮುಖ ಹೇಗೆ ಆಗುತ್ತದೆಯೋ ಇವರ ಅಮ್ಮನ ಮುಖನೂ ಅದೇ ರೀತಿ ಆಗಿದೆ. ಅಶ್ವಿನ್ ಉನ್ನಿ ಕಂಟೆಂಟ್​ ಕ್ರಿಯೇಟರ್​ ಆಗಿದ್ದ ಕಾರಣ ಅದರ ವಿಡಿಯೋ ವೈರಲ್​ ಮಾಡಿದ್ದಾರೆ. ಅಡಲ್ಟ್​ ಫಿಲ್ಮ್​ ಹೆಸರು ಕೇಳುತ್ತಲೇ ಅವರ ಅಮ್ಮ ಶಾಕ್​ ಆಗಿರುವ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಆ್ಯಕ್ಷನ್​ ಅನ್ನು ವಿಡಿಯೋ ಮೂಲಕ ಅಶ್ವಿನ್ ಅವರು ತೋರಿಸಿದ್ದಾರೆ. 


 ಅಶ್ವಿನ್ ವಿಚಾರವನ್ನು ಮೊದಲು ತಿಳಿಸಿದಾಗ ತಾಯಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಕೊನೆಗೆ ಅಶ್ವಿನ್ ಯಾವ ಸಿನಿಮಾ ಎಂದು ಬಹಿರಂಗಪಡಿಸಿದಾಗ ತಾಯಿಯ ಸ್ವರವು ಶೀಘ್ರದಲ್ಲಿ ಬದಲಾಗುತ್ತದೆ. ನನಗೆ 3 ಲಕ್ಷ ರೂಪಾಯಿಯ ಸಿನಿಮಾ ಆಫರ್​ ಮಾಡಿದ  ಪಾತ್ರಕ್ಕೆ ನನ್ನ ತಾಯಿಯ ಪ್ರತಿಕ್ರಿಯೆ ಎಂಬ ಶೀರ್ಷಿಕೆಯಲ್ಲಿ  ಅಶ್ವಿನ್​  ಪೋಸ್ಟ್‌ ಮಾಡಿದ್ದಾರೆ.


ವಿಡಿಯೋ ಶುರುವಾಗುತ್ತಿದ್ದಂತೆಯೇ, ಅಶ್ವಿನ್ ನಟನೆಯ ಪಾತ್ರದ ಬಗ್ಗೆ ಸುದ್ದಿಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ ಎಂದು ವಿಡಿಯೋ ಶುರು ಮಾಡಿದ್ದಾರೆ. ನೀಲಿ ಚಿತ್ರದ ವಿಷಯ ತಿಳಿಯುತ್ತಲೇ ತಾಯಿ ಗೇಲಿ ಮಾಡುತ್ತಾ,  ಹೆತ್ತವರೊಂದಿಗೆ ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವುದು ಸೂಕ್ತವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್​ ಸುರಿಮಳೆಯಾಗಿದೆ. ನೀಲಿ ಚಿತ್ರದ​ ವಿಷಯ ಹೇಳಿದರೂ ತಾಯಿಗೆ ಅಷ್ಟೊಂದು ಶಾಕ್ ಆದಂತೆ ಕಾಣುತ್ತಿಲ್ಲ, ಬದಲಿಗೆ ಇಂಥ ವಿಷಯ ಪಾಲಕರ ಜೊತೆ ಹೇಳ್ತಾರೆಯೇ ಎನ್ನುವ ಮೂಲಕ ತಾಯಿ ಸಹಜವಾಗಿ ಉತ್ತರಿಸಿದಂತೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ತಮಾಷೆಗಾಗಿ ಇಂಥ ವಿಡಿಯೋ ಬೇಕಿತ್ತಾ ಎಂದು ಕೆಲವರು ಪ್ರಶ್ನಿಸಿದರೆ, ತಾವೇನಾದ್ರೂ ಇಂಥ ತಮಾಷೆ ಮಾಡಿದ್ರೆ ಮನೆಯ ಸ್ಥಿತಿಯೇ ಬೇರೆಯಾಗುತ್ತಿತ್ತು. ಆದರೆ ಅಶ್ವಿನ್​ ಅವರ ತಾಯಿ ಕೂಲ್​ ಆಗಿದ್ದಂತೆ ಕಾಣಿಸುತ್ತದೆ ಎಂದಿದ್ದಾರೆ. ಮತ್ತೆ ಕೆಲವರು ಇದನ್ನು ಮೊದಲೇ ಹೇಳಿ ಮಾಡಿಸಿದಂತೆ ಇದೆ. ಆದ್ದರಿಂದ ಅವರ ರಿಯಾಕ್ಷನ್​ ಅಷ್ಟೇನೂ ಶಾಕಿಂಗ್​ ಆಗಿರಲಿಲ್ಲ ಎಂದಿದ್ದಾರೆ.