ನಿಮ್ಮ ದೇಹದಲ್ಲಿ ಐರನ್ ಕೊರತೆ ಹೆಚ್ಚಾದಾಗ ಈ ಜ್ಯೂಸ್ ಗಳನ್ನು ತಪ್ಪದೆ ಸೇವಿಸಿ....!

ಐರನ್ ಕೊರತೆಯನ್ನು ನೀಗಿಸುತ್ತದೆ ಈ ಜ್ಯೂಸ್ :  
ಪಾಲಕ್ ಜ್ಯೂಸ್ :

ಪಾಲಕ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶ ಕಂಡುಬರುತ್ತದೆ. ಇದು ನಮ್ಮ ದೇಹಕ್ಕೆ ಐರನ್ ಅನ್ನು ಪೂರೈಸಲು ಸಹಾಯ ಮಾಡುತ್ತದೆ. ಪಾಲಕ್ ಜ್ಯೂಸ್ ಮಾಡುವಾಗ ಅದರ ರುಚಿ ಹೆಚ್ಚಿಸಲು ಅದಕ್ಕೆ ತೆಂಗಿನಕಾಯಿ, ಎಳನೀರು, ಗೋಡಂಬಿ ಮತ್ತು ಅನಾನಸ್ ಅನ್ನು ಸೇರಿಸಬಹುದು. ಈ ಜ್ಯೂಸ್ ಅನ್ನು ಪ್ರತಿದಿನ ಸೇವಿಸಿದರೆ ದೇಹಕ್ಕೆ ಅಗತ್ಯವಿರುವ ಐರನ್ ಸಿಗುತ್ತದೆ. 

ಬಟಾಣಿ ಪ್ರೋಟೀನ್ ಶೇಕ್: ಬಟಾಣಿ ಪ್ರೋಟೀನ್ ಶೇಕ್‌ ಸೇವಿಸುವುದರ ಮೂಲಕ ಕೂಡಾ ದೇಹದಲ್ಲಿನ ಐರನ್ ಕೊರತೆಯನ್ನು ನಿವಾರಿಸಬಹುದು. ಅದರಲ್ಲಿ ಐರನ್ ಪ್ರಮಾಣವು ಅಧಿಕವಾಗಿರುತ್ತದೆ. ಆದರೆ ಇದರಲ್ಲಿ ಯಾವುದೇ ಕಾರಣಕ್ಕೂ ಸಕ್ಕರೆಯನ್ನು ಬಳಸಬಾರದು ಎನ್ನುವುದನ್ನು ಮರೆಯಬಾರದು. 

ಬೀಟ್ರೂಟ್ ಜ್ಯೂಸ್ :
ಬೀಟ್ರೂಟ್ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಬಳಸುವುದರಿಂದ ದೇಹದ ಐರನ್ ಕೊರತೆಯನ್ನು ನೀಗಿಸಬಹುದು. ಇದು ಐರನ್ ಜೊತೆಗೆ, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್ ಸಿ ಕೊರತೆಯನ್ನು ಕೂಡಾ ನೀಗಿಸುತ್ತದೆ.  


BREAKING NEWS
Loading latest news...
Join our WhatsApp Channel Powered By : Online Pudu