-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಇಲ್ಲಿ ಸಿಗುತ್ತದೆ ಗೋಲ್ಡ್ ಚಾಯ್, ಆದ್ರೆ ಒಂದು ಕಪ್ ಟೀಗೆ ಬರೀ ಒಂದು ಲಕ್ಷ ರೂಪಾಯಿ ಮಾತ್ರ

ಇಲ್ಲಿ ಸಿಗುತ್ತದೆ ಗೋಲ್ಡ್ ಚಾಯ್, ಆದ್ರೆ ಒಂದು ಕಪ್ ಟೀಗೆ ಬರೀ ಒಂದು ಲಕ್ಷ ರೂಪಾಯಿ ಮಾತ್ರ


ದುಬೈ: ಭಾರತೀಯರು ದಿನಂಪ್ರತೀ ಕನಿಷ್ಠ 3 ರಿಂದ 5 ಬಾರಿ ಟೀ ಕುಡಿಯುತ್ತಾರೆ. ಮನೆಯಲ್ಲಿಯೇ ಆಗಲಿ, ಹೊರಗಡೆಯೇ ಆಗಲಿ ಭಾರತೀಯರ ದಿನ ಆರಂಭಗೊಳ್ಳುವುದೇ ಟೀ ಅಥವಾ ಕಾಫಿಯಿಂದಲೇ. ಕನಿಷ್ಠವೆಂದರೆ 10 ರೂ. ನಿಂದ ಸಾವಿರ ರೂ. ಬೆಲೆಯ ಟೀ, ಕಾಫಿ ನಮ್ಮಲ್ಲಿ ಲಭ್ಯವಿದೆ. ಆದರೆ ಭಾರತೀಯ ಮೂಲದ ಸುಚೇತಾ ಶರ್ಮಾ ನಡೆಸುತ್ತಿರುವ ಬೊಹೊ ಕೆಫೆಯಲ್ಲಿ ಒಂದು ಕಪ್ ಗೋಲ್ಡ್ ಚಾಯ್ ಬೆಲೆ ಬರೋಬ್ಬರಿ 1 ಲಕ್ಷ ರೂ. ಹೌದು ಇದರಲ್ಲಿ ಯಾವುದೇ ಚೌಕಾಸಿಯೂ ಇಲ್ವಂತೆ. 


ದುಬೈನಲ್ಲಿ ಬೊಹೊ ಕೆಫೆ ಎಂಬ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿರುವ ಸುಚೇತಾ ಶರ್ಮಾ ಹೊಸ ಗೋಲ್ಡ್ ಚಾಯ್ ಪರಿಚಯಿಸಿದ್ದಾರೆ. ಇದು ಚಿನ್ನ ಲೇಪಿತ ಚಾಯ್. ಅತ್ಯುತ್ತಮ ಸ್ವಾದವುಳ್ಳ ಈ ಟೀಯನ್ನು ನೀಡಲಾಗುತ್ತದೆ. ಈ ಚಹಾದ ಮೇಲೆ 24 ಕಾರೆಟ್ ಗೋಲ್ಡ್ ತೆಳು ಪದರವನ್ನು ಸೇರಿಸಲಾಗುತ್ತದೆ. ಆದ್ದರಿಂದಲೇ ಇದು ಚಿನ್ನ ಲೇಪಿತ ಚಾಯ್. ಇಲ್ಲಿ ಗೋಲ್ಡ್ ಚಾಯ್ ಆರ್ಡರ್ ಮಾಡಿದರೆ ಹಲವು ವಿಶೇಷತೆಗಳಿವೆ. ಗೋಲ್ಡ್ ಚಾಯ್‌ನ್ನು ಸಂಪೂರ್ಣ ಶುದ್ಧ ಬೆಳ್ಳಿ ಲೋಟದಲ್ಲಿ ನೀಡಲಾಗುತ್ತದೆ.  ಇದರೊಂದಿಗೆ ಕ್ರೊಯಿಸ್ಯಾಂಟ್ ತಿನಿಸನ್ನು ನೀಡಲಾಗುತ್ತದೆ. 

ಇನ್ನು ಚಹಾ ಬೇಡವೆಂದರೆ ಕಾಫಿ ಕೂಡ ಲಭ್ಯವಿದೆ. ಆದರೆ ಬೆಲೆಯಲ್ಲಿ ಮಾತ್ರ ಯಾವುದೇ ಚೌಕಾಸಿಯಿಲ್ಲ. ಇದು ಸಣ್ಣ ಕೆಫೆಯಾದರೂ ಬೆಲೆ ದುಬಾರಿ. ಇದೀಗ ಬೊಹೊ ಕೆಫೆಯಲ್ಲಿ ಚಾಯ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇಲ್ಲಿ ಟೀ, ಕಾಫಿ ಮಾತ್ರವಲ್ಲ, ಇತರ ಖಾದ್ಯಗಳು ಲಭ್ಯವಿದೆ. ದುಬೈನ  DIFC ಎಮಿರೇಟ್ಸ್ ಫಿನಾನ್ಶಿಯಲ್ ಟವರ್‌ನಲ್ಲಿ ಈ ಬೊಹೋ ಕೆಫೆ ಇದೆ. 


ಈ ದುಬಾರಿ ಗೋಲ್ಡ್ ಚಾಯ್ ಕುರಿತ ಫುಡ್ ವ್ಲಾಗರ್ ವೀಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ಭಾರಿ ಲೈಕ್ಸ್ ಹಾಗೂ ವೀಕ್ಷಣೆ ಪಡೆದಿದೆ. ಜೊತೆಗೆ ಹಲವರು ಕಮೆಂಟ್ ಮಾಡುತ್ತಿದ್ದಾರೆ. ಒಂದು ಕಪ್ ಚಹಾ ಬೆಲೆ 1 ಲಕ್ಷ ರೂಪಾಯಿ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಹಲವರು ಟ್ರೋಲ್ ಮಾಡಿದ್ದಾರೆ. ಬೊಹೊ ಕೆಫೆಯಲ್ಲಿ ಗೋಲ್ಡ್ ಚಾಯ್ ಕುಡಿದ ಬಳಿಕ ಬಿಲ್ ತೆಗೆದುಕೊಂಡು ಕಸ್ಟಮ್ಸ್ ಅಧಿಕಾರಿಗಳಿಗೆ ನೀಡಬೇಕು. ಇಲ್ಲದಿದ್ದರೆ ನಿಮ್ಮನ್ನು ಹೊಟ್ಟೆಯೊಳಗೆ ಚಿನ್ನ ಸಾಗಿಸುತ್ತಿದ್ದೀರಿ ಎಂದು ಅರೆಸ್ಟ್ ಮಾಡುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.


ನಾವು ಕಚೇರಿ ಕೆಳಗೆ ಒಂದಿಬ್ಬರನ್ನು ಕರೆದುಕೊಂಡು ಚಹಾ ಕುಡಿದು ಬರೋಣ ಎಂದು ಹೇಳುತ್ತೇವೆ. ಬಳಿಕ ಅವರ ಚಹಾ ಹಣವನ್ನು ಪಾವತಿಸುತ್ತೇವೆ. ಆದರೆ ಈ 1ಲಕ್ಷ ರೂಪಾಯಿ ಚಹಾ ಕುಡಿಯಲು ಸಾಲ ಮಾಡಬೇಕು. ಇಎಂಐ ಕಟ್ಟಬೇಕಾಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದರೆ. ಈ ದುಬಾರಿ ಮೊತ್ತ ಪಾವತಿಸಿ ಹಲವರು ಈ ಚಹಾ ಕುಡಿಯುತ್ತಾರೆ. ಯಾರಿಗೆ ದುಡ್ಡಿನ ಮೌಲ್ಯ ಗೊತ್ತಿಲ್ಲವೋ ಅವರೆ ಕುಡಿಯಬೇಕು ಎಂದು ಕಮೆಂಟ್ ಮಾಡಿದ್ದಾರೆ.


ಜಗತ್ತಿನ ದುಬಾರಿ ಚಹಾಗಳಲ್ಲಿ ಬೊಹೊ ಕೆಫೆಯ ಗೋಲ್ಡ್ ಚಾಯ್ ಮುಂಚೂಣಿಯಲ್ಲಿದೆ. ಭಾರತದಲ್ಲಿ ಈ ರೀತಿ ದುಬಾರಿ ಚಹಾ,ಕಾಫಿ ಪರಿಸ್ಥಿತಿ ಬರದೇ ಇರಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ.  ನಿಜಕ್ಕೂ ಈ ಚಹಾಗೆ 1 ಲಕ್ಷ ರೂಪಾಯಿ ಕೊಡಬಹುದಾ? ಜನರಲ್ಲಿ ದುಡ್ಡಿದ ಎಂದ ಮಾತ್ರಕ್ಕೆ ಈ ರೀತಿ ಹೈಟೆಕ್ ಮೋಸ ಮಾಡುವುದು ಸರಿಯೆ ಅನ್ನೋ ಪ್ರಶ್ನೆಗಳನ್ನು ಕೇಳಿದ್ದಾರೆ. 


Ads on article

Advertise in articles 1

advertising articles 2

Advertise under the article

ಸುರ