-->

ಎಲಾನ್ ಮಸ್ಕ್ ಟೆಸ್ಲಾದಿಂದ ಪರಿಚಯಿಸಲಾಗುತ್ತದೆ ಹೊಸ ಸೋಲಾರ್ ಸ್ಮಾರ್ಟ್‌ಫೋನ್: ಚಾರ್ಜಿಂಗ್, ಇಂಟರ್ನೆಟ್ ಎರಡೂ ಬೇಡ

ಎಲಾನ್ ಮಸ್ಕ್ ಟೆಸ್ಲಾದಿಂದ ಪರಿಚಯಿಸಲಾಗುತ್ತದೆ ಹೊಸ ಸೋಲಾರ್ ಸ್ಮಾರ್ಟ್‌ಫೋನ್: ಚಾರ್ಜಿಂಗ್, ಇಂಟರ್ನೆಟ್ ಎರಡೂ ಬೇಡ


ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಲು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಎಲಾನ್ ಮಸ್ಕ್, ಈ ವಿಷಯದಲ್ಲೂ ಸೋಶಿಯಲ್ ಮೀಡಿಯಾಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಎಲಾನ್ ಮಸ್ಕ್ ಹೊಸ ಸ್ಮಾರ್ಟ್‌ಫೋನ್‌ ಒಂದನ್ನು  ಪರಿಚಯಿಸಲಿದ್ದಾರೆ ಅನ್ನೋದೇ ಆ ಸುದ್ದಿ. ಈ ಫೋನ್‌ಗೆ ಇಂಟರ್ನೆಟ್ ಬೇಕಿಲ್ಲ, ಚಾರ್ಜ್ ಮಾಡಬೇಕೆಂದೂ ಇಲ್ಲವೆಂದು ಅವರು ಹೇಳಿದ್ದಾರೆ. ಚಾರ್ಜ್ ಇಲ್ಲದೆ, ಇಂಟರ್ನೆಟ್ ಇಲ್ಲದೆ ಫೋನ್ ಹೇಗೆ ವರ್ಕ್ ಆಗುತ್ತದೆ ಎಂದು ಕೆಲವರು ಕೇಳ್ತಿದ್ದಾರೆ.

ಈ ಟೆಸ್ಲಾ ಸ್ಮಾರ್ಟ್‌ಫೋನ್ ಬಗ್ಗೆ ಎಲಾನ್ ಮಸ್ಕ್ ಅಥವಾ ಟೆಸ್ಲಾ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ. ಟೆಸ್ಲಾ ಕಂಪೆನಿ 2021ರಿಂದಲೂ ಸ್ಮಾರ್ಟ್‌ಫೋನ್ ತಯಾರಿಸುವ ಉದ್ದೇಶ ಹೊಂದಿದೆ ಎಂಬ ಗುಲ್ಲು ಎದ್ದಿತ್ತು‌. ಆದರೆ ಇದುವರೆಗೆ ಟೆಸ್ಲಾದಿಂದ ಯಾವುದೇ ಸ್ಮಾರ್ಟ್‌ಫೋನ್ ಬಂದಿಲ್ಲ. ಮೊದಲು, ಸ್ಮಾರ್ಟ್‌ಫೋನ್ ತಯಾರಿಕೆ ಉದ್ಯಮದಲ್ಲಿ ತಾನಿಲ್ಲ ಅಂತೆಲಾನ್  ಮಸ್ಕ್ ಹೇಳಿದ್ದರು. ಆದರೆ, ಟೆಸ್ಲಾ ಪೈ ಎಂಬ ಮೂರು ಅಸಾಮಾನ್ಯ ವೈಶಿಷ್ಟ್ಯಗಳೊಂದಿಗೆ ಬರಲಿದೆ ಅಂತ ಜಾಹೀರಾತು ಮಾಡಲಾಗ್ತಿದೆ.

ಈ ಸ್ಮಾರ್ಟ್‌ಫೋನ್‌ಗೆ ಇಂಟರ್ನೆಟ್ ಬೇಕಿಲ್ಲ. ಸ್ಪೇಸ್‌ಎಕ್ಸ್ ಸ್ಯಾಟಲೈಟ್‌ನೊಂದಿಗೆ ನೇರವಾಗಿ ಕೆಲಸ ಮಾಡುತ್ತದೆ. ಸೋಲಾರ್ ಸಿಸ್ಟಮ್ ಮೂಲಕ ಆಟೋ ಚಾರ್ಜ್ ಆಗುತ್ತದೆ ಎಂಬ ಪ್ರಚಾರವೆಲ್ಲಾ ಗಾಳಿಸುದ್ದಿ ಎಂದು ತಿಳಿದು ಬಂದಿದೆ. ಟೆಸ್ಲಾ ಸ್ಮಾರ್ಟ್‌ಫೋನ್ ಬಿಡುಗಡೆ ಬಗ್ಗೆ ಈ ಹಿಂದೆ ಗಾಳಿಸುದ್ದಿಗಳು ಹರಡಿತ್ತು. ಅವುಗಳಲ್ಲಿ ಮುಖ್ಯವಾದದ್ದು ಟೆಸ್ಲಾ ಫೋನ್‌ ಚಾರ್ಜ್ ಮಾಡಲು ವಿದ್ಯುತ್ ಬೇಕಿಲ್ಲ, ಸೌರಶಕ್ತಿಯಿಂದ ಚಾರ್ಜ್ ಆಗುತ್ತೆ ಅನ್ನೋದು. ಟೆಸ್ಲಾ ಕಂಪನಿ ಈಗಾಗಲೇ ಸೋಲಾರ್ ತಂತ್ರಜ್ಞಾನವನ್ನು ಚೆನ್ನಾಗಿ ಬಳಸುತ್ತಿದೆ.

ಮಸ್ಕ್‌ಗೆ ಸೇರಿದ ಸ್ಪೇಸ್‌ಎಕ್ಸ್ ಕಂಪೆನಿ ಒದಗಿಸಿದ ಸ್ಟಾರ್ ಲಿಂಕ್, ಮಾಡೆಲ್‌ ಅನ್ನೇ ಫೋನ್‌ನಲ್ಲಿ ಬಳಸಲಾಗಿದೆ. ಇದು ವಿಶಾಲ ಬ್ರ್ಯಾಂಡ್ ವೇಗದ ಸ್ಯಾಟಲೈಟ್ ಆಧಾರಿತ ಫೋನ್ ಆಗಿದ್ದು. 5G ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲೂ ಈ ಫೋನ್ ಕವರೇಜ್ ಇದೆ. ಸ್ಟಾರ್ ಲಿಂಕ್ ತಂತ್ರಜ್ಞಾನ ತುಂಬಾ ಮುಂದುವರಿದಿದೆ ಅಂತ ಕಾಣುತ್ತೆ. ಮೇಲಿನ ಮಾಡೆಲ್‌ನಲ್ಲಿ ಬ್ರೈನ್-ಮೆಷಿನ್-ಇಂಟರ್‌ಫೇಸ್ (BMI) ಚಿಪ್‌ಗಳು ಫೋನ್‌ನಲ್ಲಿರುತ್ತವೆ ಅಂತ ನಿರೀಕ್ಷಿಸಲಾಗಿದೆ. ಅಂದರೆ ನಮ್ಮ ಆಲೋಚನೆಗಳಿಂದ ಈ ಸಾಧನಗಳನ್ನು ನಿಯಂತ್ರಿಸಬಹುದು.

ವಿಶೇಷವಾಗಿ, ಮಂಗಳ ಗ್ರಹದಲ್ಲೂ ಸಹ ಫೋನ್ ತಂತ್ರಜ್ಞಾನವಿದೆ. ಈ ಫೋನ್‌ನ ಬೆಲೆ ಸುಮಾರು 100 ಡಾಲರ್‌ಗಳಿರುತ್ತದೆ ಅಂತ ಹೇಳಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ. ಆದರೆ ಎಲಾನ್ ಮಸ್ಕ್ ಮೊಬೈಲ್ ಫೋನ್ ಉತ್ಪಾದನೆಗೆ ಖಂಡಿತ ಇಳಿಯುತ್ತಾರೆ, ಅದು ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುತ್ತೆ ಅಂತ ನಂಬಬಹುದು.



Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article