-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಬೆಂಗಳೂರು: 40ಸಾವಿರ ಬಾಡಿಗೆ ಮನೆಗೆ 5ಲಕ್ಷ ರೂ. ಅಡ್ವಾನ್ಸ್, ಮನೆಮಾಲಕನ ಬೇಡಿಕೆಗೆ ಸುಸ್ತುಬಿದ್ದ ಮಹಿಳೆ

ಬೆಂಗಳೂರು: 40ಸಾವಿರ ಬಾಡಿಗೆ ಮನೆಗೆ 5ಲಕ್ಷ ರೂ. ಅಡ್ವಾನ್ಸ್, ಮನೆಮಾಲಕನ ಬೇಡಿಕೆಗೆ ಸುಸ್ತುಬಿದ್ದ ಮಹಿಳೆ


ಬೆಂಗಳೂರು: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಮಾತು ಬೆಂಗಳೂರಿಗರಿಗೆ ಮಾತ್ರ ಬಾಡಿಗೆ ಮನೆ ಹುಡುಕಿ ನೋಡು ಎಂದು ಬದಲಿಸಬೇಕಾಗುತ್ತದೆ. ಕಾರಣ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಅತೀ ದೊಡ್ಡ ಸವಾಲು. ನಮ್ಮ ಬೇಡಿಕೆಗೆ ತಕ್ಕಂತೆ ಇಲ್ಲಿ‌ಮನೆ ಸಿಗುವುದೇ ಇಲ್ಲ. ಒಂದು ಪಕ್ಷ ಬಾಡಿಗೆ ಮನೆ ಸಿಕ್ಕರೆ ದುಬಾರಿ, ಅದಕ್ಕೂ ತಯಾರಿದ್ದರೆ ಮಾಲಕರದ್ದು ಒಂದಷ್ಟು ಕಂಡೀಷನ್ ಹೈರಾಣಾಗಿಸುತ್ತದೆ. ಇನ್ನು ಕಚೇರಿ ಅಥವಾ ಕೆಲಸ ಮಾಡುವ ಸ್ಥಳ, ಇತರ ಅನುಕೂಲಕ್ಕೆ ತಕ್ಕಂತೆ ಮನೆ ಸಿಗುವುದಂತೂ ಕನಸಿನ ಮಾತು ಬಿಡಿ. 

ಇದೇ ರೀತಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಮನೆ ಹುಡುಕಿ  ಸುಸ್ತಾಗಿದ್ದಾರೆ. 40,000 ತಿಂಗಳ ಬಾಡಿಗೆ ಮನೆಗೆ ಮಾಲಕ ಬರೋಬ್ಬರಿ 5 ಲಕ್ಷ ರೂಪಾಯಿ ಡೆಪಾಸಿಟ್ ಮಾಡುವಂತೆ ಬೇಡಿಕೆಯಿಟ್ಟಿರುವ ವಿಚಾರವನ್ನು ಮಹಿಳೆ ಹಂಚಿಕೊಂಡಿದ್ದಾರೆ.

ದೆಹಲಿ ಸೇರಿದಂತೆ ಇತರ ನಗರಗಳಲ್ಲಿ ಡೆಪಾಸಿಟ್ ಮೊತ್ತ 2 ಅಥವಾ ಮೂರು ತಿಂಗಳ ಬಾಡಿಗೆಯ ಮೊತ್ತದಷ್ಟು ಕೇಳುತ್ತಾರೆ. ಆದರೆ ಬೆಂಗಳೂರಿನಲ್ಲಿ ಕನಿಷ್ಠ 10 ತಿಂಗಳ ಬಾಡಿಗೆ ಎಷ್ಟಾಗುತ್ತೋ ಅಷ್ಟು ಡೆಪಾಸಿಟ್ ಕೇಳಲಾಗುತ್ತದೆ. ಇನ್ನು ಡೆಪಾಸಿಟ್ ಯಾವತ್ತೂ ಲಕ್ಷ ರೂಪಾಯಿಯಲ್ಲೇ ಇರಲಿದೆ. ಹೀಗೆ ಹರ್ನಿದ್ ಕೌರ್ ಅನ್ನೋ ಮಹಿಳೆ ಬೆಂಗಳೂರಿನಲ್ಲಿ ಮನೆ ಹುಡುಕಿ ಘಟನೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ ಹರ್ನಿದ್ ಕೌರ್ ಮನೆ ಹುಡುಕಾಟಕ್ಕೆ ಆರಂಭಿಸಿದ್ದಾರೆ. ಎಲ್ಲರಂತೆ ಹರ್ನಿದ್ ಕೌರ್ ಕೂಡ ಮನೆ ಹುಡುಕುವಾಗ ಎದುರಿಸಿದ ಸವಾಲು ಒಂದೆರೆಡಲ್ಲ. ಮನೆ ಇದ್ದರೆ ಸರಿಯಾಗಿಲ್ಲ, ಏರಿಯಾ ಚೆನ್ನಾಗಿಲ್ಲ, ಸುರಕ್ಷತೆ ಕಡಿಮೆ, ಬೆಳಕಿಲ್ಲ, ನೀರು ಸಮಸ್ಯೆ, 3ನೇ ಮಹಡಿ, ನಾಲ್ಕನೇ ಮಹಡಿ ಸಮಸ್ಯೆ, ದುಬಾರಿಯಾದರೂ ಪರ್ವಾಗಿಲ್ಲ ಅಪಾರ್ಟ್‌ಮೆಂಟ್ ಮೊರೆ ಹೋಗೋಣ ಎಂದರೆ ದುಡ್ಡಿಗೆ ತಕ್ಕ ಸೌಲಭ್ಯವಿಲ್ಲ. ಈ ಮೂಲಕ ಸಾಲು ಸಾಲು ಸಮಸ್ಯೆಗಳನ್ನು ಹರ್ನಿದ್ ಕೌರ್ ಎದುರಿಸಿದ್ದಾರೆ.

ಹಲವಾರು ಅಪಾರ್ಟ್‌ಮೆಂಟ್ಗಳನ್ನು ಹತ್ತಿ ಇಳಿದ ಹರ್ನಿದ್ ಕೌರ್‌ಗೆ ಕೊನೆಗೊಂದು ಮನೆ ಸಿಕ್ಕಿದೆ. ಈ ಮನೆ ಒಕೆಯಾದ ಬಳಿಕ ಮಾಲೀಕರ ಜೊತೆ ಒಪ್ಪಂದ, ತಿಂಗಳ ಬಾಡಿಗೆ ಕುರಿತು ಮಾತುಕತೆ ಆರಂಭಗೊಂಡಿದೆ. ತಿಂಗಳ ಬಾಡಿಗೆ 40,000 ರೂಪಾಯಿ. ಆದರೆ ಸೆಕ್ಯೂರಿಟಿ ಡೆಪಾಸಿಟ್ ಮೊತ್ತ 5 ಲಕ್ಷ ರೂಪಾಯಿ ಬೇಕು ಎಂದು ಮಾಲೀಕ ಬೇಡಿಕೆ ಇಟ್ಟಿದ್ದಾರೆ. ಮೊದಲೇ 40,000 ರೂಪಾಯಿ ಬಾಡಿಗೆ ನೀಡುವಷ್ಟು ಮೌಲ್ಯದ ಫ್ಲ್ಯಾಟ್ ಅಲ್ವೇ ಅಲ್ಲ. ಆದರೂ ಇರಲಿ ಎಂದರೆ 5 ಲಕ್ಷ ರೂಪಾಯಿ ಡೆಪಾಸಿಟ್‌ನಲ್ಲಿ ಯಾವುದೇ ರೀತಿ ಚೌಕಾಸಿ ಇಲ್ಲ ಎಂದಿದ್ದಾರೆ.


ದುಬಾರಿ ಡೆಪಾಸಿಟ್ ಮೊತ್ತ ಹಾಗೂ ಅಪಾರ್ಟ್‌ಮೆಂಟ್ ಉತ್ತಮವಾಗಿಲ್ಲದ ಕಾರಣ ಹರ್ನಿದ್ ಕೌರ್ ಈ ಮನೆ ಒಕೆ ಮಾಡಲಿಲ್ಲ. ಆದರೆ ಈ ಕುರಿತು ಟ್ವೀಟ್ ಮೂಲಕ ಅಸಮಾಧಾನ ತೋಡಿಕೊಂಡಿದ್ದಾರೆ. ಇದು ಹರ್ನಿದ್ ಕೌರ್ ಒಬ್ಬರ ಕತೆಯಲ್ಲ, ಬೆಂಗಳೂರಿನಲ್ಲಿ ಮನೆ ಹುಡುಕವ ಎಲ್ಲದ್ದೂ ಇದೇ ಗೋಳು ಎಂದು ಹಲವರು ಕಮೆಂಟ್ ಮಾಡಿದ್ದರೆ. ಕನ್ನಡ ಕಲಿಯಿರಿ, ನಿಮಗೆ ಕಡಿಮೆಯಲ್ಲಿ ಮನೆ ಸಿಗಲಿದೆ ಎಂದು ಕೆಲವರು ಸಲಹೆ ನೀಡಿದ್ದಾರೆ. ಇದಕ್ಕೆ ಉತ್ತರಿಸಿರುವ ಹರ್ನಿದ್ ಕೌರ್, ಮನೆ ಮಾಲೀಕ ಕನ್ನಡಿಗನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮನೆ ಪ್ರತಿಷ್ಠಿತ ಏರಿಯಾದಲ್ಲೂ ಇಲ್ಲ. ಆದರೆ ತಿಂಗಳ ಬಾಡಿಗೆ, ಡೆಪಾಸಿಟ್ ನೋಡಿದರೆ ಖಂಡಿತ ಅಚ್ಚರಿಯಾಗುತ್ತಿದೆ. ಕೆಲವೊಮ್ಮೆ ಈ ರೀತಿ ವ್ಯವಸ್ಥೆ ನೋಡು ನಗು ಬರುತ್ತಿದೆ ಎಂದು ಹರ್ನದ್ ಕೌರ್ ಕಮೆಂಟ್‌ಗೆ ನೀಡಿರುವ ಪ್ರತಿಕ್ರಿಯೆಲ್ಲಿ ಹೇಳಿದ್ದಾರೆ. 

Ads on article

Advertise in articles 1

advertising articles 2

Advertise under the article

ಸುರ