-->

ಕಲ್ಲುನಾಗರ ಮೂರ್ತಿ ಮೇಲೆ ಬೆಳೆದ ಕೂದಲು - ಕಲಬುರಗಿಯಲ್ಲಿ ನಡೆಯಿತು ವಿಚಿತ್ರ ಪವಾಡ

ಕಲ್ಲುನಾಗರ ಮೂರ್ತಿ ಮೇಲೆ ಬೆಳೆದ ಕೂದಲು - ಕಲಬುರಗಿಯಲ್ಲಿ ನಡೆಯಿತು ವಿಚಿತ್ರ ಪವಾಡ



ಕಲಬುರಗಿ: ಇಲ್ಲಿನ ಕಡಣಿ ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಕಲ್ಲುನಾಗರ ಮೂರ್ತಿ ಮೇಲೆ ಕೂದಲು ಬೆಳೆದಿದೆ. ಸದ್ಯ ಈ ಕಲ್ಲಿಗೆ ಗ್ರಾಮದ ಜನರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

2023ರ ಜುಲೈ 2ರಂದು ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಮುತ್ಯಾ ಅವರು ಕಡಣಿ ಗ್ರಾಮದಲ್ಲಿ ತಮ್ಮ ಅಮೃತಹಸ್ತದಿಂದ ದೃಷ್ಟಿಲಿಂಗವನ್ನು ಪ್ರತಿಷ್ಠಾಪಿಸಿದ್ದರು. ಇದೀಗ ದೃಷ್ಟಿಲಿಂಗವೇ ಅಚ್ಚರಿಗೆ ಕಾರಣವಾಗಿದೆ. ಈ ಲಿಂಗದ ಮೇಲೆ ಕಲ್ಲುನಾಗರ ರಚನೆಯನ್ನು ಮಾಡಲಾಗಿದೆ. ಈಗ ಇದೇ ನಾಗರ ಮೂರ್ತಿ ಮೇಲೆ ಇದೀಗ ಕೂದಲು ಬೆಳೆದಿದೆ. ಇದನ್ನು ಕಂಡ ಗ್ರಾಮಸ್ಥರು ಹವಾ ಮಲ್ಲಿನಾಥ ಮುತ್ಯಾರ ಪವಾಡ ಎಂದು ಹೇಳುತ್ತಾರೆ. 

ಪ್ರತಿದಿನ ಬೆಳಗ್ಗೆ ಈ ಕಲ್ಲಿಗೆ ಪೂಜೆ ನೆರವೇರಿಸಲಾಗುತ್ತದೆ. ಅಮವಾಸ್ಯೆ ಹಾಗೂ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಪೂಜೆಗಾಗಿ ಜನರನ್ನು ನೇಮಿಸಲಾಗಿದೆ. ಒಂದು ದಿನ ಬೆಳಗ್ಗೆ ಪೂಜೆ ಸಲ್ಲಿಸಲು ಬಂದ ಹುಡುಗರಿಗೆ ಕಲ್ಲು ನಾಗರ ಮೂರ್ತಿ ಮೇಲೆ ಕೂದಲು ಬೆಳೆದಿರೋದನ್ನು ಗಮನಿಸಿದ್ದಾರೆ. ಅವರಿದನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ ಎಂದು ಭಕ್ತರೊಬ್ಬರು ಹೇಳುತ್ತಾರೆ. 


ಈ ಆಶ್ವರ್ಯಕರ ಘಟನೆಯನ್ನು ನೋಡಲು ಸುತ್ತಲಿನ ಹತ್ತಾರು ಗ್ರಾಮಗಳಿಂದ ಜನಸಾಗರವೇ ಹರಿದು ಬರುತ್ತಿದೆ. ಸುಮಾರು 1 ರಿಂದ 2 ಇಂಚುಗಳಷ್ಟು ಬಿಳಿ ಬಣ್ಣದ ಕೂದಲು ಬೆಳೆದಿದೆ. ಇದೆಲ್ಲವೂ ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಮುತ್ಯಾ ಪವಾಡ ಎಂದು ಇಲ್ಲಿನ ಭಕ್ತರು ನಂಬಿದ್ದಾರೆ. ಹವಾ ಮಲ್ಲಿನಾಥ ಮಹಾರಾಜರು ಮೂಲತಃ ಬೀದರ್ ಜಿಲ್ಲೆಯವರಾಗಿದ್ದು, ಲಿಂಗ ಸ್ಥಾಪನೆಗಾಗಿ ಕಡಣಿ ಗ್ರಾಮಕ್ಕೆ ಆಗಮಿಸಿದ್ದರು.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article