-->
ಮಾಧ್ಯಮದವರ ಪ್ರಶ್ನೆಗೆ ಲಾಲ್ ಬಹಾದ್ದೂರ ಶಾಸ್ತ್ರೀಜಿಯವರ ಉತ್ತರ

ಮಾಧ್ಯಮದವರ ಪ್ರಶ್ನೆಗೆ ಲಾಲ್ ಬಹಾದ್ದೂರ ಶಾಸ್ತ್ರೀಜಿಯವರ ಉತ್ತರ

ಮಾಧ್ಯಮದವರ ಪ್ರಶ್ನೆಗೆ ಲಾಲ್ ಬಹಾದ್ದೂರ ಶಾಸ್ತ್ರೀಜಿಯವರ ಉತ್ತರ






1965 ರಲ್ಲಿ ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ದುರ್ಬಲ ದೇಹದ ದುರ್ಬಲ ಪ್ರಧಾನಿ ಎಂಬ ಹೇಳಿಕೆ ನೀಡಿ ಕಾಲು ಕೆರೆದು ಯುದ್ಧಕ್ಕೆ ಬ೦ದ ಆಗಿನ ಪಾಕಿಸ್ತಾನ ದೇಶದ ಮಿಲಿಟರಿ ಸರ್ವಾಧಿಕಾರಿ ಅಧ್ಯಕ್ಷ ಮಹಮ್ಮದ್ ಅಯೂಬ್ ಖಾನ್ ನನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದ ದೇಶದ ಎರಡನೆಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಯಶೋಗಾಥೆ ನಮಗೆಲ್ಲರಿಗೂ ಅಭಿಮಾನ ತರುವ ಸಂಗತಿಯಾಗಿದೆ.


ಏಪ್ರಿಲ್ 1965 ರಿಂದ ಸೆಪ್ಟೆಂಬರ್ 1965 ರ ವರೆಗೆ ನಡೆದ ಯುದ್ಧದಲ್ಲಿ ಪಾಕಿಸ್ತಾನ ಪರಾಭವಗೊಂಡು ಸೋತು ಸುಣ್ಣಗಾಯಿತು. ಆ ಬಳಿಕ, ಯುದ್ಧವಿರಾಮ ಘೋಷಣೆ ಮಾಡುವಂತೆ ಹಾಗೂ ಭಾರತ ದೇಶದ ವೀರ ಸೈನಿಕರು ವಶಪಡಿಸಿದ ಪಾಕಿಸ್ತಾನದ ಭೂಭಾಗವನ್ನು ಮರಳಿಸುವಂತೆ ಮತ್ತು ಭಾರತೀಯ ಸೈನಿಕರು ಸೆರೆ ಹಿಡಿದ ಸಾವಿರಾರು ಪಾಕಿಸ್ತಾನಿ ಸೈನಿಕರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನ ವಿಶ್ವಸಂಸ್ಥೆಯ ಕದ ತಟ್ಟಿತು.


ಯುದ್ಧದಲ್ಲಿ ಸೋತು ಶರಣಾದ ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರಿ ಮಹಮ್ಮದ್ ಅಯೂಬ್ ಖಾನ್ ವಿಶ್ವಸಂಸ್ಥೆಯನ್ನು ಹಾಗೂ ಪ್ರಪಂಚದ ಬಲಾಢ್ಯ ರಾಷ್ಟ್ರಗಳಾದ ಅಮೆರಿಕ ಮತ್ತು ರಷ್ಯಾವನ್ನು ತಮ್ಮ ಬೇಡಿಕೆಯನ್ನು ಮುಂದಿಟ್ಟು ಗೋಗರೆದರು. ಇದರ ಪರಿಣಾಮವಾಗಿ ಉಭಯ ರಾಷ್ಟ್ರಗಳ ನಡುವೆ ರಾಜಿ ಸಂಧಾನಕ್ಕಾಗಿ ತಾಷ್ಕೆಂಟ್ ನಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.


ತಾಷ್ಕೆಂಟ್ ಸಭೆಗೆ ಹೋಗುವ ಮೊದಲು ಪತ್ರಕರ್ತರು ದೇಶದ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರೀಜಿ ಅವರಲ್ಲಿ ಈ ರೀತಿಯ ಪ್ರಶ್ನೆಯನ್ನು ಕೇಳಿದರು. ಶಾಸ್ತ್ರೀಜಿಯವರೆ ನೀವು ಕುಳ್ಳಗಿದ್ದೀರಿ. ಆದರೆ ಆಯೂಬ್ ಖಾನ್ ದೈತ್ಯ ದೇಹದ ಎತ್ತರದ ವ್ಯಕ್ತಿ. ನೀವು ಆತನೊಂದಿಗೆ ಹೇಗೆ ಮಾತನಾಡುತ್ತೀರಿ ಎಂಬ ಪ್ರಶ್ನಿಸಿದರು.


ತಕ್ಷಣ ಈ ಪ್ರಶ್ನೆಗೆ, ಶಾಸ್ತ್ರೀಜಿಯವರು ಪತ್ರಕರ್ತರನ್ನು ಉದ್ದೇಶಿಸಿ, "ನಾನು ತಲೆ ಎತ್ತಿ ಆತನೊಂದಿಗೆ ಮಾತನಾಡುತ್ತೇನೆ; ಆತ ತಲೆತಗ್ಗಿಸಿ ನನ್ನೊಂದಿಗೆ ಮಾತನಾಡಬೇಕು" ಎಂದರ೦ತೆ.





ಮಹಾನ್ ದೇಶಪ್ರೇಮಿಯಾಗಿದ್ದ ಶಾಸ್ತ್ರೀಜಿಯವರು ಅಮೆರಿಕ ಮತ್ತು ರಷ್ಯಾ ಮುಂತಾದ ಪ್ರಬಲ ರಾಷ್ಟ್ರಗಳ ಯಾವುದೇ ಗೊಡ್ಡು ಬೆದರಿಕೆಗಳಿಗೆ ಮಣಿಯದೆ ದೇಶದ ಆತ್ಮಗೌರವಕ್ಕೆ ಕುಂದು ಬಾರದ ರೀತಿಯಲ್ಲಿ ತಾಷ್ಕೆಂಟ್ ಒಪ್ಪಂದದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.


ಇಂತಹ ಪ್ರಾಮಾಣಿಕ ವ್ಯಕ್ತಿ ಪ್ರಧಾನಿ ಹುದ್ದೆಯಲ್ಲಿ ಇರುವ ವರೆಗೆ ತಮ್ಮ ಆಟ ನಡೆಯದು ಎಂಬ ಸತ್ಯವನ್ನು ಅರಿತ ದುಷ್ಟ ಕೂಟದ ಸ್ವಾರ್ಥಿಗಳ ದೇಶ ವಿದ್ರೋಹಿ ಪಿತೂರಿಯಿಂದ ದಿನಾಂಕ 11.1.1966 ರ೦ದು ಭಾರತ ಮಾತೆಯ ಮಹಾನ್ ಸುಪುತ್ರನ ಬಲಿದಾನವಾಯಿತು.


ಇಂದು ಶಾಸ್ತ್ರೀಜಿಯವರು ಹುಟ್ಟಿದ ದಿನ. ಯಾವ ದೇಶದಲ್ಲಿ ಯೋಧನಿಗೆ ಮತ್ತು ರೈತನಿಗೆ ಗೌರವ ಸಿಗುವುದಿಲ್ಲವೋ ಅಂತಹ ದೇಶ ಯಾವತ್ತೂ ಉದ್ಧಾರವಾಗುವುದಿಲ್ಲ ಎಂಬ ಸತ್ಯವನ್ನು ಅರಿತ ಶಾಸ್ತ್ರೀಜಿಯವರು ಮೊಳಗಿಸಿದ *ಜೈ ಜವಾನ್ ಜೈ ಕಿಸಾನ್* ಎಂಬ ಘೋಷ ವಾಕ್ಯ ಇ೦ದಿಗೂ ಪ್ರಸ್ತುತವಾಗಿದೆ.




Ads on article

Advertise in articles 1

advertising articles 2

Advertise under the article