ವಿಮಾನ ಹಾರಾಟದಲ್ಲಿದ್ದಾಗಲೇ ಇಂಜಿನ್ ಆಫ್ ಮಾಡುತ್ತಿದ್ದ ರತನ್ ಟಾಟಾ




ನವದೆಹಲಿ: ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿರುವ ದೇಶದ ಪ್ರಸಿದ್ದ ಉದ್ಯಮಿ ರತನ್ ಟಾಟಾ ಅವರಿಗೆ ವಿಚಿತ್ರ ಹವ್ಯಾಸವೊಂದಿತ್ತು. ಪೈಲಟ್ ಆಗಿದ್ದ ರತನ್ ಟಾಟಾರಿಗೆ ಸ್ವತಃ ವಿಮಾನ ಚಲಾಯಿಸುವುದು ಅವರ ನೆಚ್ವಿನ ಹವ್ಯಾಸ. ಅವರು ವಿಮಾನ ಆಗಸದಲ್ಲಿರುವಾಗಲೇ ಅದರ ಎಂಜಿನ್ ಆಫ್ ಮಾಡಿ ಬಿಡುತ್ತಿದ್ದರು. ಈ ಮೂಲಕ ತಾವು ವಿಮಾನ ಹಾರಾಟ ನಡೆಸುವುದನ್ನು ನೋಡಲು ಜೊತೆಯಾದವರಿಗೆ ಭೀತಿ ಹುಟ್ಟಿಸುತ್ತಿದ್ದರು.

ರತನ್ ಟಾಟಾ ಅವರ ಜೀವನ ಕುರಿತು ಥಾಮಸ್ ಮ್ಯಾಥ್‌ ಅವರು ಬರೆದಿರುವ ಹಾಗೂ ಹಾರ್ಪರ್ ಕಾಲಿನ್ಸ್ ಪ್ರಕಾಶನ ಸಂಸ್ಥೆ ಹೊರತಂದಿರುವ 'ರತನ್ ಟಾಟಾ ಎ ಲೈಫ್' ಎಂಬ ಪುಸ್ತಕದಲ್ಲಿ ಈ ಮಾಹಿತಿಯಿದೆ.  ರತನ್ ಟಾಟಾ ಅವರ ಭಯಾನಕ ಹಾರಾಟ ಕೌಶಲ್ಯದ ಬಗ್ಗೆ ಹಲವಾರು ಕತೆಗಳಿವೆ. ವಿಮಾನವನ್ನು ಆಗಸದಲ್ಲಿ ಹಾರಾಡಿಸುತ್ತಾ ಖುಷಿಪಡುತ್ತಿದ್ದ ಟಾಟಾ, ದಿಢೀರನೆ ಇಂಜಿನ್ ಆಫ್ ಮಾಡಿ ಜತೆಗಾರರಿಗೆ ಆತಂಕ ಹುಟ್ಟಿಸುತ್ತಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ 1960ನೇ ಇಸ್ವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವಿಮಾನ ಹಾರಾಟ ಕಲಿತಿದ್ದರು. ಅಮೆರಿಕದಲ್ಲಿದ್ದಾಗ ವಿಮಾನ ಚಾಲನೆ ಮಾಡುತ್ತಿದ್ದರು. 2007ರಲ್ಲಿ ಬೆಂಗಳೂರಿನ ಏ‌ರ್ ಶೋ ವೇಳೆ ಸಹ ಪೈಲಟ್ ಆಗಿ ಎಫ್-16 ವಿಮಾನ ಹಾರಿಸಿದ್ದರು.




BREAKING NEWS
Loading latest news...
Join our WhatsApp Channel Powered By : Online Pudu