ಖ್ಯಾತ ನಟಿಯ ಮೇಲೆ ಸಾಮೂಹಿಕ ಅತ್ಯಾಚಾರ: ಹಿರಿಯ ನಿರ್ದೇಶಕರೊಬ್ಬರು ಬಿಚ್ಚಿಟ್ಟ ಶಾಕಿಂಗ್ ನ್ಯೂಸ್


ಕೇರಳ: ಮಲಯಾಳಂ ಚಿತ್ರರಂಗದದಲ್ಲಿ ಇತ್ತೀಚೆಗೆ ಹೇಮಾ ಸಮಿತಿ ವರದಿ ಸಲ್ಲಿಕೆ ಬಳಿಕ ಖ್ಯಾತ ಕಲಾವಿದರ ಮೇಲೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ʼಮೀಟೂʼ ಪ್ರಕರಣ ಸಿನಿಮಾರಂಗದಲ್ಲಿ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಹಿರಿಯ ನಿರ್ದೇಶಕರೊಬ್ಬರು ಶಾಕಿಂಗ್‌ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.

ಕೇರಳದ ಸಿನಿಮಾ ನಿರ್ದೇಶಕ ಅಲೆಪ್ಪಿ ಅಶ್ರಫ್ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ 80ರ ದಶಕದಲ್ಲಿ ಖ್ಯಾತ ನಟಿಯೊಬ್ಬರ ಜೀವನದಲ್ಲಿ ನಡೆದ ಕರಾಳ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

“1980ರ ದಶಕದ (1982ರಲ್ಲಿ) ಆರಂಭದಲ್ಲಿ ತಾರಾ ಆರ್ಟ್ಸ್ ವಿಜಯನ್ ಪ್ರಾಯೋಜಕತ್ವದಲ್ಲಿ ನಾನು, ಬೇಬಿ ಶಾಲಿನಿ ಮತ್ತು ರೋಹಿಣಿ ಅವರನ್ನು ಒಳಗೊಂಡ ತಂಡ ಅಮೆರಿಕಾಕ್ಕೆ ಹೋಗಿ ಮಿಮಿಕ್ರಿ ಕಾರ್ಯಕ್ರಮ ನೀಡಿದ್ದೆವು. ತಾರಾ ಆರ್ಟ್ಸ್ ವಿಜಯನ್ ಪ್ರತಿ ವರ್ಷ ಅಮೆರಿಕಾದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತದೆ. ಆ ವರ್ಷ ನಮ್ಮನ್ನು ಕರೆಸಲಾಗಿತ್ತು. ಕಾರ್ಯಕ್ರಮ ಯಶಸ್ವಿಯಾಗಿ ಸಾಗಿತ್ತು. ಇದೇ ಸಂದರ್ಭದಲ್ಲಿ ಅಲ್ಲೊಂದು ಕರಾಳ ಘಟನೆ ನಡೆದಿತ್ತು” ಎಂದು ಅಶ್ರಫ್‌ ಹಳೆಯ ಘಟನೆ ಬಗ್ಗೆ ಹೇಳಿದ್ದಾರೆ.

ಆಕೆ ಮಾಲಿವುಡ್‌ ಸಿನಿಮಾರಂಗದ ಖ್ಯಾತ ನಟಿ. ನಟ ನಝೀರ್‌ ಸಿನಿಮಾದಲ್ಲಿ ಸೇರಿದಂತೆ ಇತರೆ ಭಾಷೆಯ ಸಿನಿಮಾದಲ್ಲೂ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದ ನಟಿ. ಆ ಕಾಲದಲ್ಲಿ ಆಕೆಯ ಅಭಿನಯಕ್ಕೆ ಅಪಾರ ಅಭಿಮಾನಿಗಳಿದ್ದರು. ವೃತ್ತಿ ಬದುಕು ಉತ್ತುಂಗದಲ್ಲಿದ್ದಾಗಲೇ ಆಕೆಯ ಜೀವನದಲ್ಲಿ ಒಂದು ಕರಾಳ ಘಟನೆ ನಡೆಯಿತು” ಎಂದು ಅಶ್ರಫ್‌ ಹೇಳಿದ್ದಾರೆ.

ಅದೊಂದು ದಿನ ಆಕೆಗೆ ಅಮೆರಿಕಾದಿಂದ ಕರೆಯೊಂದು ಬರುತ್ತದೆ. ನೀವು ನಮ್ಮ ಸಿನಿಮಾದಲ್ಲಿ ನಟಿಸಬೇಕು. ಆದಷ್ಟು ಬೇಗ ನ್ಯೂಯಾರ್ಕ್‌ಗೆ ಬನ್ನಿ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸುತ್ತಾರೆ. ನಟಿ ಇದು ತನಗೆ ಸಿಕ್ಕ ದೊಡ್ಡ ಅವಕಾಶವೆಂದು ಕೂಡಲೇ ಅಮೆರಿಕಾಕ್ಕೆ ತೆರಳುತ್ತಾಳೆ. ಅಲ್ಲಿಗೆ ಹೋದ ಬಳಿಕ ನಟಿಗೆ ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತ ಸಿಗುತ್ತದೆ. ಆ ಬಳಿಕ ಆಕೆಯ ವಿಶ್ರಾಂತಿಗೆ ಒಂದು ಅಪಾರ್ಟ್‌ಮೆಂಟ್‌ ನೀಡಲಾಗುತ್ತದೆ. ಅದೇ ದಿನ ಸಂಜೆ ಇಬ್ಬರು ಅಪರಿಚಿತರು ನಟಿಯ ಅಪಾರ್ಟ್‌ಮೆಂಟ್‌‌ಗೆ ಬರುತ್ತಾರೆ. ಇದರಿಂದ ನಟಿ ಇದ್ದಕ್ಕಿದ್ದಂತೆ ಗಾಬರಿಗೊಳ್ಳುತ್ತಾಳೆ. ಮನೆಗೆ ಬಂದ ಇಬ್ಬರು ನಟಿಯ ಮೇಲೆ ಸಾಮೂಹಿವಾಗಿ ಅತ್ಯಾಚಾರವೆಸಗುತ್ತಾರೆ. ಅವರು ಅಂಡರ್‌ ವರ್ಲ್ಡ್‌ ಮಾಫಿಯಾ ಗ್ಯಾಂಗ್‌ ವೊದರ ಸದಸ್ಯರಾಗಿರುತ್ತಾರೆ. ನಟಿಗೆ ತಾನು ಮೋಸದ ಜಾಲದಲ್ಲಿ ಸಿಲುಕಿದ್ದೇನೆ ಎನ್ನುವ ಅರಿವಾಗುತ್ತದೆ. ನಟಿಯನ್ನು ಕೋಣೆಯಲ್ಲಿ ಬಂಧಿಸಿ ನಿರಂತರವಾಗಿ ಕೆಲ ದಿನಗಳ ಅತ್ಯಾಚಾರವೆಸಯಲಾಗುತ್ತದೆ” ಎಂದು ಅಶ್ರಫ್‌ ತಮ್ಮ ಚಾನೆಲ್‌ ನಲ್ಲಿ ಕರಾಳ ಸಂಗತಿಯನ್ನು ಬಯಲು ಮಾಡಿದ್ದಾರೆ.

ಅತ್ಯಾಚಾರಿಗಳ ಕೈಯಲ್ಲಿ ಸಿಲುಕಿಕೊಂಡಿದ್ದ ನಟಿ ಅದೊಂದು ದಿನ ಕಿಡಿಗೇಡಿಗಳು ಇಲ್ಲದಿದ್ದಾಗ ಅಮೆರಿಕಾದಲ್ಲಿದ್ದ ಕೇರಳದ ತಾರಾ ಆರ್ಟ್ಸ್‌ನ ಮುಖ್ಯಸ್ಥ ವಿಜಯಟ್ಟನ್‌ ಅವರಿಗೆ ಕರೆ ಮಾಡಿ ಆದ ಸಂಗತಿಯನ್ನು ಹೇಳುತ್ತಾರೆ. ಆದರೆ ವಿಜಯಟ್ಟನ್‌ ಗೆ ನಟಿ  ಇರುವ ಅಪಾರ್ಟ್‌ಮೆಂಟ್‌ ಹುಡುಕಲು ಕಷ್ಟವಾಗುತ್ತದೆ. ಆಗ ನಟಿ ಕಿಟಕಿಯ ಹೊರಗಡೆ ನೋಡಿ ಬಿಲ್ಡಿಂಗ್‌ ಹೊರಗಿದ್ದ ಕೆಲ ಬೋರ್ಡ್‌ಗಳ ಹೆಸರು ಹೇಳಿ ವಿಳಾಸವನ್ನು ಹೇಳುತ್ತಾರೆ. ಇದಾದ ಬಳಿಕ ಕಾರಿನಲ್ಲಿ ಸುರಕ್ಷಿತವಾಗಿ ನಟಿಯನ್ನು ಕರೆ ತರುತ್ತಾರೆ. ನೇರವಾಗಿ ಏರ್‌ ಪೋರ್ಟ್‌ಗೆ ಬಿಟ್ಟು ರಿಟರ್ನ್‌ ಟಿಕೆಟ್‌ ತೆಗೆದು ಆಕೆಯನ್ನು ಭಾರತಕ್ಕೆ ಕಳುಹಿಸಿ ಕೊಟ್ಟರು” ಎಂದು ಅಶ್ರಫ್‌ ಹೇಳಿದ್ದಾರೆ.

“ಈ ಘಟನೆ ನಂಬಲಸಾಧ್ಯ ಎನಿಸಿದರೂ ಇದು ಸತ್ಯ. ಹೊಸ ಪೀಳಿಗೆಗೆ ಇದು ಪಾಠವಾಗಬೇಕು ಎಂಬ ಕಾರಣದಿಂದ ಈ ವಿವರಗಳನ್ನು ಈಗ ಬಹಿರಂಗಪಡಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.