ರೈಲ್ವೇ ಇಲಾಖೆಯಲ್ಲಿ 8113 ತಾಂತ್ರಿಕೇತರ ಹುದ್ದೆಗಳು: ಪದವೀಧರ ಅಭ್ಯರ್ಥಿಗಳಿಗೆ ಸುವರ್ಣಾವಕಾಶ

ರೈಲ್ವೇ ಇಲಾಖೆಯಲ್ಲಿ 8113 ತಾಂತ್ರಿಕೇತರ ಹುದ್ದೆಗಳು: ಪದವೀಧರ ಅಭ್ಯರ್ಥಿಗಳಿಗೆ ಸುವರ್ಣಾವಕಾಶ





ರೈಲ್ವೇ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರೈಲ್ವೇ ನೇಮಕಾತಿ ಮಂಡಳಿ - ಆರ್‌ಆರ್‌ಬಿ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ.


ಸಹಾಯಕ ಲೋಕೋ ಪೈಲೆಟ್, ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಎರಡು ಹುದ್ದೆಗಳಿಗೆ ಸುಮಾರು 13 ಸಾವಿರ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುವುದು.


ಈ ಸಾಲಿಗೆ ಮತ್ತೊಂದು ದೊಡ್ಡ ನೇಮಕಾತಿ ಎಂದರೆ ನಾನ್ ಟೆಕ್ನಿಕಲ್ ಗ್ರಾಜುಯೇಟ್ಸ್‌ ವಿಭಾಗದ 8113 ತಾಂತ್ರಿಕೇತರ ಹುದ್ದೆಗಳ ನೇಮಕಾತಿ. ನಾನ್ ಟೆಕ್ನಿಕಲ್ ಗ್ರಾಜುಯೇಟ್ಸ್‌ ವಿಭಾಗದಲ್ಲಿ ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್‌ ಹಾಗೂ ಸೀನಿಯರ್ ಕ್ಲರ್ಕ್‌ ಕಮ್ ಟೈಪಿಸ್ಟ್‌ ಎಂಬ ಐದು ಬಗೆಯ ಹುದ್ದೆಗಳಿವೆ.


ಆನ್‌ಲೈನ್‌ನಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 14 ಆಗಿರುತ್ತದೆ.


ಅಂಗೀಕೃತ ವಿಶ್ವವಿದ್ಯಾನಿಲಯದ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.


ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್‌ ಹುದ್ದೆಗೆ ಇಂಗ್ಲಿಷ್ ಅಥವಾ ಹಿಂದಿ ಕಂಪ್ಯೂಟರ್ ಟೈಪಿಂಗ್ ಕೌಶಲ್ಯ ಇರಬೇಕು.


ವಯೋಮಿತಿ: ಕನಿಷ್ಟ 18 ಹಾಗೂ ಗರಿಷ್ಟ 36 ವಯಸ್ಸಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.


ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ರೈಲ್ವೇ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.