-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪತಿಗಿಂತ ಮೈದುನನೇ ಹ್ಯಾಂಡ್‌ಸಮ್: ಸುಂದರ ಮಗುವಿಗಾಗಿ ಮೈದುನನೊಂದಿಗೆ ಓಡಿಹೋದಳು ಅತ್ತಿಗೆ

ಪತಿಗಿಂತ ಮೈದುನನೇ ಹ್ಯಾಂಡ್‌ಸಮ್: ಸುಂದರ ಮಗುವಿಗಾಗಿ ಮೈದುನನೊಂದಿಗೆ ಓಡಿಹೋದಳು ಅತ್ತಿಗೆ


ಭೋಪಾಲ್: ಸುಂದರ ಮಗುವಿನ ಆಸೆಗಾಗಿ ಪತಿಗೆ ಮೋಸ ಮಾಡಿದ ಮಹಿಳೆಯೊಬ್ಬಳು ಮೈದುನನೊಂದಿಗೆ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದೀಗ ಪತಿ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರು ಜೋಡಿಯನ್ನು ಪತ್ತೆ ಮಾಡಿದರೂ ಮಹಿಳೆ ಮತ್ತೆ ಮತಿಯ ಮನೆಗೆ ಹಿಂದಿರುಗಲು ನಿರಾಕರಿಸಿದ್ದಾಳೆ.

ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ಪತಿ, ಆಕೆಗೆ ಸುಂದರವಾದ ಮಗು ಬೇಕೆಂದು, ಹ್ಯಾಂಡ್‌ಸಮ್ ಆಗಿರುವ ನನ್ನ ಸೋದರನೊಂದಿಗೆ ಓಡಿ ಹೋಗಿದ್ದಾಳೆ. ಒಂದು ವೇಳೆ ನಾನು ಆಕೆಯನ್ನು ವಾಪಸ್ ಕರೆದೊಯ್ದಲ್ಲಿ ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳುವುದಾಗಿ ಬೆದರಿಕೆಯೊಡ್ಡಿತ್ತಿದ್ದಾಳೆ. ಪತ್ನಿಯಿಂದ ನಮ್ಮನ್ನು ರಕ್ಷಿಸುವಂತೆ ಮನವಿ ಸಲ್ಲಿಸಲು ಎಸ್‌ಪಿ ಬಳಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಮದುವೆಯಾಗಿ 10 ವರ್ಷವಾದರೈ ಮಹಿಳೆ ಮಕ್ಕಳು ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಳು. ಪತಿ ನೋಡಲು ಚೆನ್ನಾಗಿರದ ಕಾರಣ ಮಗು ಮಾಡಿಕೊಳ್ಳಲು ಪತ್ನಿ ಒಪ್ಪಿಕೊಳ್ಳುತ್ತಿರಲಿಲ್ಲ. ತನ್ನ ಪತಿ ಹ್ಯಾಂಡ್‌ಸಮ್ ಮತ್ತು ಗುಡ್ ಲುಕ್ಕಿಂಗ್ ಹೊಂದಿಲ್ಲ ಎಂಬ ಭಾವನೆ ಮಹಿಳೆಯಲ್ಲಿ ಬೇರೂರಿತ್ತು. ಆದರೆ ಮೈದುನ ನೋಡಲು ತುಂಬಾ ಆಕರ್ಷಕವಾಗಿರುವ ಕಾರಣ ಆತನಿಂದ ಮಗು ಮಾಡಿಕೊಳ್ಳುವ ಆಸೆಯನ್ನು ಮಹಿಳೆ ಹೊಂದಿದ್ದಳು. ಹೀಗಾಗಿಯೇ ಮೈದುನೊಂದಿಗೆ ಆಕರ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಷಯ ಅತ್ತೆಗೆ ತಿಳಿಯುತ್ತಲೇ ಮೈದುನನೊಂದಿಗೆ ಮಹಿಳೆ ಮನೆಯಿಂದ ಪರಾರಿಯಾಗಿದ್ದಳು. ಅತ್ತೆ ಇಬ್ಬರ ಸಂಬಂಧಕ್ಕೆ ತಡೆಗೋಡೆಯಾಗಿ ನಿಂತಿದ್ದರು. ಇದೀಗ ಪತಿಯ ಇಡೀ ಕುಟುಂಬ ಎಸ್‌ಪಿ ಅವರ ಬಳಿ ಬಂದು ಮನವಿ ಮಾಡಿಕೊಂಡಿದೆ.


ಮಧ್ಯಪ್ರದೇಶದ ಛತ್‌ಪುರ್ ನಗರದ ಸೀತಾರಾಮ ಕಾಲೋನಿಯ ನಿವಾಸಿ ರಾಜೇಂದ್ರ ಕುಶ್ವಾಹ ಪತ್ನಿ ಮೀನಾ ಎಂಬಾಕೆ ಮೈದುನನೊಂದಿಗೆ ಓಡಿ ಹೋದವಳು. 10 ವರ್ಷಗಳ ಹಿಂದೆ ರಾಜೇಂದ್ರ ಮತ್ತು ಮೀನಾ ಮದುವೆಯಾಗಿತ್ತು. ಆದರೆ ಇದೀಗ ರಾಜೇಂದ್ರ ಕಿರಿಯ ಸೋದರನೊಂದಿಗೆ ಮೀನಾ ಪರಾರಿಯಾಗಿದ್ದಾಳೆ. ಇದೀಗ ಮೆಸೇಜ್ ಮಾಡುತ್ತಿರುವ ಮೀನಾ, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದ್ದಾಳೆ. ಈ ಹಿನ್ನೆಲೆ ರಾಜೇಂದ್ರ ಕುಟುಂಬ ಸಮೇತರಾಗಿ ಎಸ್‌ಪಿ ಅವರನ್ನು ಭೇಟಿಯಾಗಿ ದೂರು ದಾಖಲಿಸಲು ಬಂದಿದ್ದಾರೆ. ಮನೆಯಿಂದ ದೂರ ಹೋದರು ಪದೇ ಪದೇ ಬೆದರಿಕೆ ಹಾಕಿ ತೊಂದರೆಯನ್ನುಂಟು ಮಾಡುತ್ತಿದ್ದಾಳೆ. ಒಂದು ವೇಳೆ ಆಕೆ ತನ್ನ ಪ್ರಾಣಕ್ಕೆ ಏನಾದರೂ ಮಾಡಿಕೊಂಡ ನಮ್ಮ ಮೇಲೆಯೇ ಅಪಾದನೆ ಬರಲಿದೆ ಎಂದು ರಾಜೇಂದ್ರ ಕುಟುಂಬಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.


ಮೀನಾ ಯಾರ ಜೊತೆಯಲ್ಲಾದರೂ ಇರಲಿ, ಹೇಗಾದರೂ ಇರಲಿ. ಅದರ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ನಮಗೆ ತೊಂದರೆ ಕೊಡುವುದನ್ನು ಆಕೆ ಮೊದಲು ನಿಲ್ಲಿಸಲಿ. ಈಗಾಗಲೇ ಆಕೆಯಿಂದ ನಮ್ಮ ಕುಟುಂಬ ಸಾಕಷ್ಟು ಅವಮಾನಕ್ಕೊಳಗಾಗಿದೆ. ಇದೀಗ ಮತ್ತಷ್ಟು ಅವಮಾನ ಮತ್ತು ಆಕೆಯ  ನೀಡುತ್ತಿರುವ ಮಾನಸಿಕ ಕಿರುಕುಳವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆಕೆಯಿಂದ ನಮಗೆ ಬಿಡುಗಡೆ ಕೊಡಿಸಿ ಎಂದು ರಾಜೇಂದ್ರ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. 


Ads on article

Advertise in articles 1

advertising articles 2

Advertise under the article

ಸುರ