ರಿಲೀಸ್‌ಗೂ ಮುನ್ನ 900 ಕೋಟಿ ರೂ. ಕಲೆಕ್ಷನ್‌ ಮಾಡಿದ 'ಪುಷ್ಪ-2ʼ


ಹೈದರಾಬಾದ್: ಈ ವರ್ಷದ ಬಹಳ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಅಲ್ಲು ಅರ್ಜುನ್‌ ನಟನೆಯ ʼಪುಷ್ಪ-2ʼ ರಿಲೀಸ್‌ಗೆ ದಿನಗಣನೆ ಆರಂಭವಾಗಿದೆ.

ಹಾಡು ಹಾಗೂ ಟೀಸರ್‌ನಿಂದಲೇ ಭಾರೀ ಸದ್ದು ಮಾಡಿರುವ ʼಪುಷ್ಪ-2ʼ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸುತ್ತಿದೆ. ರಿಲೀಸ್‌ ಡೇಟ್ ಮುಂದೂಡಿಕೆ ಆದ ಬಳಿಕ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಚಿತ್ರದ ಮೊದಲ ಭಾಗದ ಓಟಿಟಿ ರೈಟ್ಸ್‌ ಅನ್ನು ಅಮೆಜಾನ್ ಪ್ರೈಮ್ ವಿಡಿಯೋ  ದೊಡ್ಡ ಮೊತ್ತಕ್ಕೆ ಖರೀದಿಸಿತ್ತು. ಎರಡನೇ ಭಾಗದ ಡಿಜಿಟಲ್‌ ರೈಟ್ಸ್‌ ಕೂಡ ಭಾರೀ ಮೊತ್ತಕ್ಕೆ ಸೇಲ್‌ ಆಗಿದೆ ಎನ್ನಲಾಗಿದೆ.

ಕೆಲ ವರದಿಗಳ ಪ್ರಕಾರ ಸಿನಿಮಾ ರಿಲೀಸ್‌ಗೂ ಮುನ್ನ ʼಪುಷ್ಪ-2ʼ 900 ಕೋಟಿ ರೂ. ಕಲೆಕ್ಷನ್‌ ಮಾಡಿದೆ ಎನ್ನಲಾಗಿದೆ. ಡಿಜಿಟಲ್ ಹಕ್ಕುಗಳು ಮತ್ತು ಸ್ಯಾಟ್‌ ಲೈಟ್ ಹಕ್ಕುಗಳು ಸಾರ್ವಕಾಲಿಕ ಗರಿಷ್ಠ 900 ಕೋಟಿ ರೂ.ಗೆ ಡೀಲ್‌ ಆಗಿದೆ. ಈ ಬಗ್ಗೆ ಓಟಿಟಿ ಪ್ಲಾಟ್‌ಫಾರ್ಮ್‌ನಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಚಿತ್ರದ ಥಿಯೇಟ್ರಿಕಲ್ ಹಕ್ಕುಗಳನ್ನು ಈಗಾಗಲೇ 650 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂದು ವರದಿ ತಿಳಿಸಿವೆ.

500 ಕೋಟಿ ರೂ. ಬಜೆಟ್‌ ನಲ್ಲಿ ತಯರಾಗಿರುವ ಸುಕುಮಾರ್‌ ಅವರ ʼಪುಷ್ಪ-2ʼ ಸಿನಿಮಾದಲ್ಲಿ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ಫಹಾದ್‌ ಫಾಸಿಲ್‌, ಸುನೀಲ್‌, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಮುಂತಾದವರು ನಟಿಸಿದ್ದಾರೆ.ಇದೇ ಡಿಸೆಂಬರ್‌ 6 ರಂದು ಸಿನಿಮಾ ರಿಲೀಸ್‌ ಆಗಲಿದೆ.