-->

ಕೇವಲ 27,000ರೂ.ಗೆ ಐಫೋನ್‌ 16 ಖರೀದಿಸಿದ ಗ್ರಾಹಕ : ಹೀಗೆ ಮಾಡಿದರೆ ನಿಮಗೂ ಸಾಧ್ಯ ಎಂದ ಖರೀದಿದಾರ

ಕೇವಲ 27,000ರೂ.ಗೆ ಐಫೋನ್‌ 16 ಖರೀದಿಸಿದ ಗ್ರಾಹಕ : ಹೀಗೆ ಮಾಡಿದರೆ ನಿಮಗೂ ಸಾಧ್ಯ ಎಂದ ಖರೀದಿದಾರ



ಬೆಂಗಳೂರು: ಆ್ಯಪಲ್‌ನ ಐಫೋನ್ 16 ಸೀರಿಸ್ ಭಾರತದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ. ಇದನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಭಾರತದಲ್ಲಿ ಐಫೋನ್ 16 ಸೀರಿಸ್ ಫೋನ್ ಬೆಲೆ 79,9000 ರೂ.ನಿಂದ ಆರಂಭಗೊಳ್ಳುತ್ತಿದೆ. ಫ್ಲಿಪ್‌ಕಾರ್ಟ್, ಅಮೆಜಾನ್‌ಗಳಲ್ಲಿ ಬ್ಯಾಂಕ್ ಕಾರ್ಡ್ ಸೇರಿದಂತೆ ಇತರ ಕೆಲ ಆಫರ್‌ಗಳು ಲಭ್ಯವಿದೆ. ಆದರೆ ಇಲ್ಲೊಬ್ಬ 89,900 ರೂಪಾಯಿ ಬೆಲೆಯ ಐಫೋನ್ 16 ಫೋನ್ ಅನ್ನು ಕೇವಲ 27,000 ರೂಪಾಯಿಗೆ ಖರೀದಿಸಿದ್ದಾನೆ. ಈತನ ಪಾವತಿ ವಿವರದ ಬಿಲ್ ಕೂಡ ರೆಡ್ಡಿಟ್ ಮೂಲಕ ಪೋಸ್ಟ್ ಮಾಡಲಾಗಿದೆ. ಇಷ್ಟೇ ಅಲ್ಲ ಇದೇ ಟ್ರಿಕ್ಸ್ ಬಳಸಿ ನೀವೂ ಕೂಡ ಖರೀದಿಸಿ ಎಂದಿದ್ದಾನೆ.

ಸೋಶಿಯಲ್ ಮೀಡಿಯಾ ರೆಡ್ಡಿಟ್ ಬಳಕೆದಾರ 256ಜಿಬಿ ಸ್ಟೋರೇಜ್ ಸಾಮರ್ಥ್ಯದ ಐಫೋನ್ 16 ಖರೀದಿಸಿದ್ದಾನೆ. ಈತ ಪಾವತಿಸಿರುವುದು ಕೇವಲ 26,970 ರೂ. ಮಾತ್ರ. ಇನ್ನುಳಿದ ಅಷ್ಟು ಹಣ ಡಿಸ್ಕೌಂಟ್ ಆಗಿದೆ. ಇದು ಹೇಗೆ ಎಂದರೆ, ಈತ ಹೆಚ್‌ಡಿಎಫ್‌ಸಿ ಇನ್‌ಫಿನಿಯಾ ಕ್ರೆಡಿಟ್ ಕಾರ್ಡ್ ಮೂಲಕ ಫೋನ್ ಖರೀದಿಸಿದ್ದಾನೆ. ಈ ಹಿಂದೆ ಕ್ರೆಡಿಟ್‌ ಕಾರ್ಡ್ ಮೂಲಕ ಖರೀದಿ, ವಹಿವಾಟು ನಡೆಸಿದ ಪರಿಣಾಮ ಈತನ ಕ್ರೆಡಿಟ್ ಪಾಯಿಂಟ್ಸ್ ಪಡೆದುಕೊಂಡಿದ್ದಾನೆ. ಈ ಕ್ರೆಡಿಟ್ ಪಾಯಿಂಟ್ಸ್‌ನ್ನು ಈ ಬಾರಿ ಐಫೋನ್ 16 ಖರೀದಿಸುವಾಗ ಬಳಸಿಕೊಂಡಿದ್ದಾನೆ.

26,790 ರೂಪಾಯಿ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ, ಇನ್ನುಳಿದ 62,930 ರೂಪಾಯಿ ಹಣವನ್ನು ಕ್ರೆಡಿಟ್ ಪಾಯಿಂಟ್ಸ್ ರಿಡೀಮ್ ಮಾಡಿಕೊಳ್ಳುವ ಮೂಲಕ ಪಾವತಿಸಿದ್ದಾನೆ. ಹೀಗಾಗಿ ಅತೀ ಕಡಿಮೆ ಬೆಲೆಗೆ ಈತ ಐಫೋನ್ 16 ಖರೀದಿಸಿದ್ದಾನೆ. ಕ್ರಿಡಿಟ್ ಕಾರ್ಡ್ ಸರಿಯಾಗಿ ಬಳಸಿಕೊಂಡರೆ, ಪಾಯಿಂಟ್ಸ್ ಸೂಕ್ತ ಸಮಯದಲ್ಲಿ ರಿಡೀಮ್ ಮಾಡಿಕೊಂಡರೆ ಈ ರೀತಿ ಖರೀದಿ ಸಾಧ್ಯ ಎಂದಿದ್ದಾನೆ. 

ದೊಡ್ಡ ಮೊತ್ತದ ಪಾವತಿಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ಪಾಯಿಂಟ್ಸ್ ಸುಲಭವಾಗಿ ಖಾತೆಗೆ ಜಮೆ ಆಗಲಿದೆ. ಇದರಿಂದ ಸೂಕ್ತ ಸಮಯದಲ್ಲಿ ಬಳಸಿಕೊಳ್ಳಲು ಸಾಧ್ಯ. ಕ್ರಿಡಿಟ್ ಕಾರ್ಡ್ ಬಳಕೆಯಲ್ಲಿ ಎಚ್ಚರವಹಿಸಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಈ ರೀತಿ ಪಾಯಿಂಟ್ಸ್ ಬಳಸಿಕೊಂಡು ಇತರ ಕೆಲ ಉತ್ಪನ್ನ ಖರೀದಿಸಿದ ಘಟನೆಗಳನ್ನು ಹಲವರು ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಸೆಪ್ಟೆಂಬರ್ 9 ರಂದು ಆ್ಯಪಲ್ ಐಫೋನ್ 16 ಸೀರಿಸ್ ಫೋನ್ ಬಿಡುಗಡೆ ಮಾಡಿದೆ. ಐಪೋನ್ 16, ಪ್ಲಸ್, ಪ್ರೋ, ಪ್ರೋ ಮ್ಯಾಕ್ಸ್ ಸೀರಿಸ್ ಬಿಡುಗಡೆಯಾಗಿದೆ. ಜನರು ಆ್ಯಪಲ್ ಸ್ಟೋರ್ ಹಾಗೂ ಆನ್‌ಲೈನ್ ಮೂಲಕ ಹೊಸ ಫೋನ್ ಖರೀದಿಸಲು ಮುಗಿ ಬೀಳುತ್ತಿದ್ದಾರೆ. 
 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article