ಪುಷ್ಪಾ 2 ಐಟಂ ಸಾಂಗ್‌ಗೆ ಸೊಂಟ ಬಳಕಿಸೋದಕ್ಕೆ ನಿಮಿಷಕ್ಕೆ 1.50ಕೋಟಿ ಸಂಭಾವನೆ ಪಡೆದ ಬಾಲಿವುಡ್ ನಟಿ


ಹೈದರಾಬಾದ್: ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2: ದಿ ರೂಲ್' ಸಿನಿಮಾದ ಬಿಡುಗಡೆಗೆ 50 ದಿನಗಳೂ ಇಲ್ಲ. ಈ ಸಿನಿಮಾವನ್ನು ದೊಡ್ಡದಾಗಿ ಮಾಡಲು ನಿರ್ಮಾಪಕರು ದೊಡ್ಡ ಮಟ್ಟದಲ್ಲಿ ಸಾಹಸ ಮಾಡುತ್ತಿದ್ದಾರೆ. ಅದಕ್ಕಾಗಿ ಬಾಲಿವುಡ್‌ನ ಬ್ಲಾಕ್‌ಬಸ್ಟರ್ 'ಸ್ತ್ರೀ 2' ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಿರುವ ನಟಿ ಶ್ರದ್ಧಾ ಕಪೂರ್ ಅವರನ್ನು ಚಿತ್ರಕ್ಕೆ ಬರಮಾಡಿಕೊಂಡಿದೆ ಎನ್ನಲಾಗುತ್ತಿದೆ. 

ಶ್ರದ್ಧಾ ಕಪೂರ್ ಅವರು 'ಪುಷ್ಪ 2' ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲು ಹೊರಟಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿವೆ. 'ಪುಷ್ಪ' ಚಿತ್ರದ ಮೊದಲ ಭಾಗದಲ್ಲಿ ಸಮಂತಾ ರುತ್ ಪ್ರಭು ಊ ಅಂಟವಾ ಮಾಮ ಊಹೂ ಅಂಟಾವ ಎಂದು ಹಾಡುತ್ತಾ, ಸೊಂಟ ಬಳುಕಿಸಿದ್ದು, ಇದೀಗ ಪುಷ್ಪ 2 ನಲ್ಲಿ ಶ್ರದ್ಧಾ ಕಪೂರ್ ಮತ್ತೊಂದು ಐಟಂ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಅಷ್ಟೇ ಅಲ್ಲ, ಶ್ರದ್ಧಾ ಕಪೂರ್ ಅವರ ಸಂಭಾವನೆಯ ಬಗ್ಗೆಯೂ ಮಾಹಿತಿ ಬಹಿರಂಗವಾಗಿದೆ. ವರದಿಗಳ ಪ್ರಕಾರ, 'ಪುಷ್ಪ 2' ಚಿತ್ರದ ಐಟಂ ಹಾಡಿಗೆ ಶ್ರದ್ಧಾ ಕಪೂರ್ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. 'ಪುಷ್ಪ' ಚಿತ್ರದ ಮೊದಲ ಭಾಗದಲ್ಲಿ ಸಮಂತಾ ರುತ್ ಪ್ರಭು ಅವರ ಐಟಂ ನಂಬರ್ 'ಊ ಅಂಟಾವ’ ಹಾಡಿನ ಅವಧಿ 3.49 ನಿಮಿಷಗಳಾಗಿತ್ತು. 

ಪುಷ್ಪ 2' ಚಿತ್ರದಲ್ಲಿ ಶ್ರದ್ಧಾ ಕಪೂರ್ ಐಟಂ ಸಾಂಗ್ ಕೂಡ ಇದೇ ಅವಧಿಯದ್ದಾಗಿರುತ್ತದೆ ಎನ್ನಲಾಗುತ್ತಿದೆ. ಇದು ನಿಜವಾಗಿದ್ದು, ಶ್ರದ್ಧಾ 5 ಕೋಟಿ ಪಡೆಯುತ್ತಿರೋದು ಕೂಡ ನಿಜವಾಗಿದ್ದರೆ, ಅವರು 'ಪುಷ್ಪ 2' ಗಾಗಿ ನಿಮಿಷಕ್ಕೆ 1.5 ಕೋಟಿ ರೂ.ಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.
 

ವರದಿಗಳ ಪ್ರಕಾರ, ದಿಶಾ ಪಟಾನಿ ಅಥವಾ ತ್ರಿಪ್ತಿ ಡಿಮ್ರಿಯವರನ್ನು ಈ ಹಿಂದೆ 'ಪುಷ್ಪಾ 2: ದಿ ರೂಲ್' ಐಟಂ ಹಾಡಿಗೆ ಆಯ್ಕೆ ಮಾಡುವ ಯೋಚನೆಯಿತ್ತು. ಆದರೆ ಕೊನೆಯದಾಗಿ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡಲಾಯಿತು. ಶ್ರದ್ಧಾ ಅವರ ದೊಡ್ಡದಾದ ಅಭಿಮಾನಿ ಬಳಗ ಮತ್ತು ಅವರ ಇತ್ತೀಚಿನ ಚಿತ್ರ 'ಸ್ತ್ರೀ 2' ಯಶಸ್ಸಿನಿಂದಾಗಿ ಸಿನಿಮಾ ತಂಡ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
 
ಸುಕುಮಾರ್ ನಿರ್ದೇಶನದ 'ಪುಷ್ಪ 2: ದಿ ರೂಲ್' ಡಿಸೆಂಬರ್ 6 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಜಿಲ್, ಪ್ರಕಾಶ್ ರಾಜ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ಸುನಿಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 
 
ಸುದ್ದಿಯ ಪ್ರಕಾರ, ಈ ಚಿತ್ರವನ್ನು 500 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗಿದೆ ಮತ್ತು ಬಿಡುಗಡೆಗೆ ಮೊದಲು ಥಿಯೇಟ್ರಿಕಲ್ ಮತ್ತು ನಾನ್ ಥಿಯೇಟ್ರಿಕಲ್ ಹಕ್ಕುಗಳಿಂದ ಈಗಾಗಲೇ 1085 ಕೋಟಿ ರೂ.ಗಳನ್ನು ಗಳಿಸಿದೆ ಎನ್ನುವ ಸುದ್ದಿಯೂ ಬಂದಿದೆ. 
  

BREAKING NEWS
Loading latest news...
Join our WhatsApp Channel Powered By : Online Pudu