ಕೊಚ್ಚಿ: ಮಲಯಾಳಂ ಚಿತ್ರರಂಗದ ಹಿರಿಯ ನಟ ಬಾಲಚಂದ್ರ ಮೆನನ್ ವಿರುದ್ದ ನಟಿ ಮಿನು ಮುನೀರ್ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ತಮ್ಮನ್ನು 2007ರಲ್ಲಿ ತಮ್ಮ ಖಾಸಗಿ ಕೋಣೆಯೊಂದರಕ್ಕೆ ಕರೆದು ಬಲವಂತವಾಗಿ ಅಶ್ಲೀಲ ಚಿತ್ರವೊಂದನ್ನು ವೀಕ್ಷಿಸುವಂತೆ ನಟ ಮೆನನ್ ಒತ್ತಾಯಿಸಿದ್ದರು ಎಂದು ಮಿನು ಆರೋಪ ಮಾಡಿದ್ದಾರೆ.
ಕೊಠಡಿಯಲ್ಲಿ ಮೂವರು ಹುಡುಗಿ ಯರು ಹಾಗೂ ಕೆಲವು ಪುರುಷರೊಂದಿಗೆ ಮೆನನ್ ಚಿತ್ರ ವೀಕ್ಷಿಸುತ್ತಿದ್ದರು ಎಂದು ಆರೋಪ ಮಾಡಿದ ಮಿನು ಅವರು ಈ ಬಗ್ಗೆ ನೀಡಿದ ದೂರು ಅನ್ವಯಿಸಿ ಎಫ್ ಐಆರ್ ಕೂಡ ದಾಖಲಾಗಿದೆ.
ಇದಕ್ಕೂ ಮುನ್ನ ಮಿನು ಅವರು ಮಲಯಾಳಂ ಜನಪ್ರಿಯ ನಟ ಜಯಸೂರ್ಯ ಹಾಗೂ ಇತರ ಆರು ಮಂದಿರ ವಿರುದ್ಧ ದೈಹಿಕ ದೌರ್ಜನ್ಯ ಹಾಗೂ ಅವಾಚ್ಯವಾಗಿ ನಿಂದನೆಯ ಆರೋಪ ಹೊರಿಸಿದ್ದರು.
ಹೇಮಾ ಸಮಿತಿ ವರದಿ ಹಿನ್ನೆಲೆಯಲ್ಲಿ ಮಲಯಾಳಂ ಚಿತ್ರರಂಗದಲ್ಲಿ ನಟಿಯರ ವಿರುದ್ಧ ಪ್ರಭಾವಿ ನಟರು ಹಲವು ವರ್ಷಗಳಿಂದ ಲೈಂಗಿಕ ಕಿರುಕುಳ ಮಾಡಿರುವ ಭಾರಿ ಚರ್ಚೆಗೆ ಗ್ರಾಸವಾಗಿದೆ. ಎಸ್‌ಐಟಿ ತನಿಖೆ ಪ್ರಗತಿಯಲ್ಲಿದೆ.
ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ನಟಿ
ನಟಿ ಮಿನು ಮರಿಯಮ್ (ಮೀನು ಮುನೀರ್-51) ಅವರು ತಲಶ್ಶೇರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಬಹುದಾದ್ದರಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹೇಮಾ ಆಯೋಗದ ವರದಿ ಬಂದ ನಂತರ ನಟರ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸುಳ್ಳು ದೂರಿನಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಆಗ್ರಹಿಸಿದ್ದಾರೆ.
ಪ್ರಕರಣ ದಾಖಲಾಗುವ ಸಾಧ್ಯತೆಯಿದ್ದರೆ, ಬಂಧಿಸಿದರೆ ಜಾಮೀನು ನೀಡಬೇಕು ಹಾಗೂ ನ್ಯಾಯಾಲಯದ ಆದೇಶ ಸ್ವೀಕರಿಸಲು ಸಿದ್ಧ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಜಿಲ್ಲಾ ನ್ಯಾಯಾಧೀಶ ಕೆ.ಟಿ.ನಿಸಾರ್ ಅಹಮದ್ ಶುಕ್ರವಾರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದರು. ಪೊಲೀಸ್ ವರದಿ ಬೇಕು ಎಂಬ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಅಜಿತ್ ಕುಮಾರ್ ಅವರ ವಾದವನ್ನು ಪರಿಗಣಿಸಿ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಲಾಗಿದೆ.