ಮಂಗಳೂರಿನ ಅಪೂರ್ವ ಶೆಟ್ಟಿ 'ಕೌನ್ ಬಗೇಗಾ ಕರೋಡ್‌ಪತಿಗೆ ಆಯ್ಕೆ (VIDEO)
ಮಂಗಳೂರು: ಸೋನಿ ಟಿವಿಯಲ್ಲಿ ಪ್ರಸಾರಗೊಳ್ಳುವ ಕೌನ್ ಬನೇಗಾ ಕರೋಡ್‌ಪತಿ ರಸಪ್ರಶ್ನೆಯ ಧಾರವಾಹಿಯಲ್ಲಿ ಮಂಗಳೂರಿನ ಕಂಕನಾಡಿ ಪಂಪ್‌ವೆಲ್ ನಿವಾಸಿ ಅಪೂರ್ವ ಶೆಟ್ಟಿ ಭಾಗವಹಿಸಿದ್ದು ಸೆ. 27ರಂದು ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ ಎಂದು ಅಪೂರ್ವ ಶೆಟ್ಟಿ ತಿಳಿಸಿದ್ದಾರೆ.
ನಗರದ ಉದ್ಯಮಿ ಲೋಕನಾಥ ಶೆಟ್ಟಿ ಮತ್ತು ಮಧುರಾ ಎಲ್. ಶೆಟ್ಟಿ ಇವರ ಸುಪುತ್ರಿಯಾದ ಅಪೂರ್ವ ಶೆಟ್ಟಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸೈಂಟ್ ತೆರೆಸಾ ಶಾಲೆ, ಪಿಯುಸಿ ವಿದ್ಯಾಭ್ಯಾಸವನ್ನು ಸೈಂಟ್ ಆ್ಯಗ್ನೆಸ್ ಪಿಯು ಕಾಲೇಜು ಬಳಿಕ ಬಿಕಾಂ ಪದವಿಯನ್ನು ಮ್ಯಾಪ್ಸ್ ಕಾಲೇಜಿನಲ್ಲಿ ಪೂರ್ತಿಗೊಳಿಸಿರುವರು. ಪ್ರಸ್ತುತ ಇವರು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಅಪೂರ್ವ ಶೆಟ್ಟಿ 2022 ರಿಂದ ಕೆಬಿಸಿಗೆ ನಿರಂತರ ಪ್ರಯತ್ನಪಡುತ್ತಿದ್ದು ಇದೀಗ ಈ ಕನಸು ನನಸಾಗಿದೆಯೆಂದರು. ಅಲ್ಲದೇ, ತನ್ನ ತಂದೆಯವರ ಬಹುದಿನದ ಕನಸನ್ನು ನನಸಾಗಿಸಿದ್ದಾರೆ. ಈ ಕೆಬಿಸಿಯ ಅನುಭವವು ತನಗೆ ರೋಮಾಂಚನಗೊಳಿಸಿದೆಯೆಂದರು. ಈ ಮೊದಲು ಇಂಡಿಯಾ ಚ್ಯಾಲೆಂಜರ್ ಸಪ್ತಾಹದಲ್ಲಿ ಭಾಗವಹಿಸಿದ್ದನ್ನು ತಿಳಿಸಿದ್ದು ಸ್ಪರ್ಧಾತ್ಮಕ ಅನುಭವವನ್ನು ಹಂಚಿಕೊಂಡಿರುವರು.
ಇದೇ ಬರುವ ಶುಕ್ರವಾರ, ಸಪ್ಟೆಂಬರ್ 27ರಂದು ರಾತ್ರಿ 9.00 ಗಂಟೆಗೆ ಸೋನಿ ಟಿವಿಯಲ್ಲಿ ಇವರ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.