ಶ್ರೀರಾಮ ಇದ್ದ ಎಂಬುದಕ್ಕೆ ಪುರಾವೆ ಇಲ್ಲ: ತಮಿಳುನಾಡು ಸಚಿವ ವಿವಾದಾತ್ಮಕ ಹೇಳಿಕೆ | SRIRAMA



ಚೆನ್ನೈ: ರಾಮ ಎಂಬ ವ್ಯಕ್ತಿ ಇದ್ದ ಎಂಬುದಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ಹೇಳುವ ಮೂಲಕ ತಮಿಳುನಾಡಿನ ಸಚಿವರೊಬ್ಬರು ವಿವಾದಕ್ಕೆ ಕಾರಣರಾಗಿದ್ದಾರೆ. ಈ ಹೇಳಿಕೆಗೆ ಹಲವು ವಲಯಗಳಿಂದ ತೀವ್ರ ಖಂಡನೆ ಗಳು ವ್ಯಕ್ತವಾಗಿದೆ.




ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಶಿವಶಂಕರ್, ನಾವು ರಾಜೇಂದ್ರ ಚೋಳನ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಏಕೆಂದರೆ ಐತಿಹಾಸಿಕ ದಾಖಲೆಗಳಿವೆ. ರಾಮ ಇದ್ದ ಎನ್ನುವುದಕ್ಕೆ ಐತಿಹಾಸಿಕ ದಾಖಲೆಗಳಿಲ್ಲ ಎಂದು ಹೇಳಿದ್ದಾರೆ.


ರಾಮನ ಮೇಲೆ ದ್ವೇಷ ಏಕೆ?: ಅಣ್ಣಾಮಲೈ


ತಮಿಳುನಾಡು ಸಚಿವರ ಹೇಳಿಕೆ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಭಗವಾನ್ ಶ್ರೀರಾಮನ ಬಗ್ಗೆ ಡಿಎಂಕೆಗೆ ಏಕಾಏಕಿ ಕೋಪ ಉಂಟಾಗುವುದೇಕೆ? ಚೋಳ ರಾಜವಂಶಕ್ಕೆ ಸೇರಿದ ರಾಜದಂಡವನ್ನು ಪ್ರಧಾನಿ ಸಂಸತ್‌ನಲ್ಲಿ ಅಳವಡಿಸುವುದಕ್ಕೂ ವಿರೋಧ ಮಾಡಿದ್ದರು ಎಂದು ಟೀಕಿಸಿದ್ದಾರೆ.