VIDEO- ಸುಳ್ಳನ್ನು ಸತ್ಯ ಮಾಡೋದು ಆರ್‌ಎಸ್‌ಎಸ್ ( RSS) ತರಬೇತಿ - ಸಚಿವ ದಿನೇಶ್ ಗುಂಡೂರಾವ್



ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಅಧಿಕಾರ ದುರುಪಯೋಗ ಮಾಡಿಲ್ಲ, ಭ್ರಷ್ಟಾಚಾರ ನಡೆಸಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬಿಜೆಪಿ ಸುಳ್ಳನ್ನು ಸತ್ಯ ಮಾಡಲು ದೇಶಾದ್ಯಂತ ಪ್ರಯತ್ನಿಸುತ್ತಿದೆ. ಅದಕ್ಕೆ ತರಬೇತಿ ಕೊಡುತ್ತದೆ ಎಂದು ಅವರು ಆರೋಪಿಸಿದರು. 





ಮೂಡಾ ಹಗರಣದ ಆರೋಪದ ಕುರಿತು ಮಾತನಾಡಿದ ಅವರು, "ಬಿಜೆಪಿ ಸಂಘ ಪರಿವಾರವು ಪ್ರಚೋದನೆ ಮಾಡುವುದು, ಗಲಾಟೆ ಎಬ್ಬಿಸುವುದು, ದಂಗೆ ಮಾಡುವುದು ಇತ್ಯಾದಿ ತರಬೇತಿ ನೀಡುತ್ತದೆ. ಅವರ ವ್ಯವಸ್ಥೆಯೇ ಅದೇ ರೀತಿ ಇದೆ," ಎಂದು ಗುಂಡೂರಾವ್ ಹೇಳಿದರು.


ರಾಜ್ಯಪಾಲರು ಸಿಎಂಗೆ 12 ಗಂಟೆಯೊಳಗೆ ಶೋಕಾಸ್ ನೋಟಿಸ್ ನೀಡಿದ ಬಗ್ಗೆ ಮಾತನಾಡಿದ ಅವರು, "ರಾಜ್ಯಪಾಲರ ನಡೆ ಪಕ್ಷಪಾತದಿಂದ ಕೂಡಿದೆ. ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ," ಎಂದು ಸ್ಪಷ್ಟಪಡಿಸಿದರು.





"ವಕೀಲರು ಯಾವ ರೀತಿ ವಾದ ಮಾಡ್ತಿದ್ದಾರೆ ಎಂದು ನಾನು ನೋಡಿಲ್ಲ. ಆದರೆ ರಾಜ್ಯಪಾಲರ ನಡೆ ಸರಿಯಿಲ್ಲವೆಂದಾದರೆ ಆದೇಶನು ತಪ್ಪಲ್ವಾ? ಇದು ರಾಜ್ಯಕ್ಕೆ ಮಾಡಿದ ದ್ರೋಹ," ಎಂದು ಗುಂಡೂರಾವ್ ಹೇಳಿದರು.


BREAKING NEWS
Loading latest news...
Join our WhatsApp Channel Powered By : Online Pudu