ಆಸ್ಪತ್ರೆ ಸಭಾಂಗಣದಲ್ಲಿಯೇ ವೈದ್ಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಕೊಲೆ

ಕೋಲ್ಕತ್ತ: ಇಲ್ಲಿನ ಆ‌ರ್.ಜಿ. ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಭಾಂಗಣದಲ್ಲಿಯೇ ತರಬೇತಿಯಲ್ಲಿರುವ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಕೊಲೆಗೈದಿರುವ ಕೃತ್ಯ ನಡೆದಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.

ಆಸ್ಪತ್ರೆಗೆ ಸಂಬಂಧದ ಪಡದ ಈತ ಹೊರಗಿನವನು. ಆದರೆ ಈತ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಮುಕ್ತವಾಗಿ ತೆರಳುತ್ತಿದ್ದ. ಈತನ ಚಲನವಲನ ಶಂಕಾಸ್ಪದವಾಗಿದೆ. ಕೃತ್ಯದಲ್ಲಿ ಈತನ ನೇರ ಪಾತ್ರ ಇರುವಂತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎದೆರೋಗ ವಿಭಾಗದ 2ನೇ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯ ಮೃತದೇಹ ಅರೆನಗ್ನಾವಸ್ಥೆಯಲ್ಲಿ ಆಸ್ಪತ್ರೆ ಸೆಮಿನಾ‌ರ್ ಸಭಾಂಗಣದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿತ್ತು. ಗುರುವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಈಕೆಯ ದೇಹದಲ್ಲಿ ಗಾಯದ ಗುರುತುಗಳಿದ್ದವು. ಬಂಧಿತನಿಂದ ಬ್ಲೂಟೂತ್‌ನ ಕಿತ್ತುಹೋಗಿದ್ದ ಭಾಗ ವಶಕ್ಕೆ ಪಡೆಯಲಾಗಿದೆ. ಇದರ ಸುಳಿವು ಆಧರಿಸಿಯೇ ಆತನನ್ನು ಬಂಧಿಸಲಾಗಿದೆ. ಆಸ್ಪತ್ರೆಯ ಇತರೆ ತರಬೇತಿನಿರತ ವೈದ್ಯರೂ ಸಿ.ಸಿ. ಟಿ.ವಿ ದೃಶ್ಯಾವಳಿಗಳನ್ನು ನೋಡಿ ಶಂಕಿತನನ್ನು ಗುರುತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ವಿದ್ಯಾರ್ಥಿನಿಯ ಕೊಲೆಗೂ ಮುನ್ನ ಆಕೆಯ ಮೇಲೆ ಲೈಂಗಿಕ ದೌರ್ಜನ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯಕ್ಕೆ ಸಂಬಂಧಿಸಿದಂತೆ ಆ ದಿನಾ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ತರಬೇತಿನಿರತ ವೈದ್ಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ
BREAKING NEWS
Loading latest news...
Join our WhatsApp Channel Powered By : Online Pudu