MANGALORE: ವಾಟ್ಸಾಪ್‌ನಲ್ಲಿ ಯುವತಿಯ ನಗ್ನ ಫೊಟೋ ಹಂಚಿಕೆ: ದೂರು
Photo- AI |
ಮಂಗಳೂರುಬೆಳ್ತಂಗಡಿ ತಾಲೂಕಿನ ವೇಣೂರು ಠಾಣಾ ವ್ಯಾಪ್ತಿಯ ಬಾಲಕಿಯೊಬ್ಬಳ ನಗ್ನ ಫೋಟೋಗಳನ್ನು ವಾಟ್ಸಾಪ್‌ನಲ್ಲಿ ಹರಿಯಬಿಟ್ಟು ಬಾಲಕಿಯ ಮಾನಕ್ಕೆ ಕುಂದುಂಟುಮಾಡಿದ ಬಗ್ಗೆ ಸವಣಾಲು ನಿವಾಸಿ ನಾಗೇಶ್ ಎಂಬಾತನ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ನಾಗೇಶ್ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪ್ರೀತಿಸುತ್ತಿದ್ದನು. ಸ್ನಾಪ್ ಚಾಟ್ ಮೂಲಕ ಆಕೆಯ ಜೊತೆಗೆ ನಿರಂತರ ಚಾಟಿಂಗ್ ಮಾಡುತ್ತಿದ್ದ. ಬಾಲಕಿಯ ನಗ್ನ ಫೊಟೋಗಳನ್ನು ಆತ ವಾಟ್ಸಾಪ್‌ನಲ್ಲಿ ಪಡೆದುಕೊಂಡಿದ್ದಾನೆ.
ಬಳಿಕ ಆತ ಆಕೆಯನ್ನು ಸಂಶಯದಿಂದ ನೋಡಲಾರಂಭಿಸಿದ. ಇದರಿಂದ ನೊಂದ ಬಾಲಕಿ ಆತನೊಂದಿಗೆ ಸಂಪರ್ಕ ಕಡಿದುಕೊಳ್ಳುವ ಪ್ರಯತ್ನ ಮಾಡಿದ್ದಳು. ಇದರಿಂದ ಆತ ಬಾಲಕಿಯ ನಗ್ನ ಫೊಟೋ ಗಳನ್ನು ಎಲ್ಲರಿಗೂ ಹಂಚುವುದಾಗಿ ಬೆದರಿಸಿದ್ದ. ಅದನ್ನು ಹಂಚದಿರುವಂತೆ ವಿನಂತಿಸಿದಾಗ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದ. ಅದನ್ನು ನೀಡದಿದ್ದಾಗ ಆತ ಫೋಟೋವನ್ನು ತನ್ನ ಗೆಳೆಯರಿಗೆ ಶೇರ್ ಮಾಡಿ ವೈರಲ್ ಮಾಡುವ ಪ್ರಯತ್ನ ನಡೆಸಿರುವುದಾಗಿ ನೊಂದ ಬಾಲಕಿ ದೂರು ನೀಡಿದ್ದಾಳೆ. ವೇಣೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.