ಪುತ್ತೂರಿನ ಲಾಡ್ಜ್ ನಲ್ಲಿ ಬೆಂಗಳೂರಿನ ಯುವಕ ಯುವತಿ ಪತ್ತೆ! COUPLE
ಪುತ್ತೂರು: ಪುತ್ತೂರಿನ ಲಾಡ್ಜೊಂದರಲ್ಲಿ ಭಿನ್ನ ಕೋಮುಗಳಿಗೆ ಸೇರಿದ ಯುವಕ- ಯುವತಿ ಇರುವ ವಿಷಯ ಮಂಗಳವಾರ ಪುತ್ತೂರಿನಲ್ಲಿ ಸಂಚಲನ ಮೂಡಿಸಿತು. ನಗರ ಠಾಣೆ ಪೊಲೀಸರು ಲಾಡ್ಜ್‌ಗೆ ತೆರಳಿ ಜೋಡಿಯನ್ನು ವಿಚಾರಣೆ ನಡೆಸಿದರು.
ಬೆಂಗಳೂರು ಮೂಲದ ಜೋಡಿ ಪುತ್ತೂರಿಗೆ ಬಂದು ಲಾಡ್ಜ್‌ನಲ್ಲಿ ಉಳಿದು ಕೊಂಡಿರುವ ಮಾಹಿತಿ ಪಡೆದ ಸಂಘಟನೆಗಳ ಪ್ರಮುಖರು ಪೊಲೀಸರಿಗೆ ವಿಷಯ ತಿಳಿಸಿದರು. ಈ ವೇಳೆಗೆ ಸಂಘಟನೆಗಳ ಕಾರ್ಯಕರ್ತರು ಲಾಡ್ಜ್‌ನ ಎದುರು
ಜಮಾಯಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೋಡಿಯನ್ನು ಕರೆದು ವಿಚಾರಣೆ ನಡೆಸಿದರು. ಇವರಿಬ್ಬರೂ ಬೆಂಗಳೂರು ಮೂಲದವರಾಗಿದ್ದು, ಜಮೀನು ಖರೀದಿ ಸಂಬಂಧ ವ್ಯವಹಾರ ನಡೆಸಲು ಪುತ್ತೂರಿಗೆ ಬಂದಿದ್ದಾಗಿ ಪೊಲೀಸರೆದುರು ಹೇಳಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಲಾಡ್ಜ್‌ನ ದಾಖಲೆ ಪರಿಶೀಲಿಸಿದಾಗ, ಯಾವುದೇ ವಿಳಾಸ ದಾಖಲೆ ನೀಡದೆ ಇವರು ಕೊಠಡಿ ಪಡೆದಿರುವುದು ಗೊತ್ತಾಗಿದೆ. ಜೋಡಿ ಮತ್ತು ಲಾಡ್ಜ್‌ನ ಮೇಲ್ವಿಚಾರಕರನ್ನು ಪೊಲೀಸರು ವಿಚಾರಣೆ ಮಾಡಿದ್ದಾಗಿ ತಿಳಿದುಬಂದಿದೆ.