-->
ಇನ್ನು ಮುಂದೆ ಬ್ಯಾಂಕುಗಳಲ್ಲಿ ಇರಿಸಿದ್ದ ಠೇವಣಿಗೂ ಕಟ್ಟಬೇಕು ಟ್ಯಾಕ್ಸ್: ವಿತ್ ಡ್ರಾ ನಿಯಮದಲ್ಲೂ ಬದಲಾವಣೆ ಗೆ ಮುಂದಾದ ಕೇಂದ್ರ ಸರಕಾರ

ಇನ್ನು ಮುಂದೆ ಬ್ಯಾಂಕುಗಳಲ್ಲಿ ಇರಿಸಿದ್ದ ಠೇವಣಿಗೂ ಕಟ್ಟಬೇಕು ಟ್ಯಾಕ್ಸ್: ವಿತ್ ಡ್ರಾ ನಿಯಮದಲ್ಲೂ ಬದಲಾವಣೆ ಗೆ ಮುಂದಾದ ಕೇಂದ್ರ ಸರಕಾರ



ದೆಹಲಿ: ಸಾರ್ವಜನಿಕರ ಠೇವಣಿಗಳ ಮೇಲೂ ತೆರಿಗೆ ವಿಧಿಸುವ ಹೊಸ ನಿಯಮಕ್ಕೆ ಕೇಂದ್ರ ಸರ್ಕಾರ ತಯಾರಾಗಿದೆ. ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಎಷ್ಟು ತಮ್ಮೊಂದಿಗೆ ಇಟ್ಟುಕೊಳ್ಳಬೇಕು ಮತ್ತು ಬ್ಯಾಂಕ್‌ನಲ್ಲಿ ಎಷ್ಟು ಠೇವಣಿ ಇಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸುತ್ತಿದೆ.

ಹಿಂದೆಲ್ಲ ಗಳಿಕೆಯ ಮೇಲೆ ಮಾತ್ರ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಈ ನಿಯಮ ಜಾರಿಯಾದ ಬಳಿಕ  ಕಷ್ಟಪಟ್ಟು ಸಂಪಾದಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟ ಹಣವನ್ನು ಹಿಂಪಡೆಯುವ ವೇಳೆ ತೆರಿಗೆ ಸಂಗ್ರಹಿಸುತ್ತಿದೆ. ಈ ನಿಯಮಗಳು ಎಟಿಎಂ ವಹಿವಾಟುಗಳಿಗೆ ಮಾತ್ರವಲ್ಲ, ಬ್ಯಾಂಕಿನಿಂದ ಹಿಂಪಡೆಯಲಾದ ಹಣಕ್ಕೂ ಅನ್ವಯಿಸುತ್ತವೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ಬ್ಯಾಂಕಿನಿಂದ ಹಿಂಪಡೆಯುವ ಮಿತಿ 1 ಕೋಟಿ ರೂ.ಗಳನ್ನು ಮೀರಿದರೆ, ಶೇಕಡಾ 2 ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ. ಐಟಿಆರ್ ಸಲ್ಲಿಸದವರಿಗೆ ಶೇಕಡಾ 2 ರಷ್ಟು ಮತ್ತು 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವವರು ಶೇಕಡಾ 2 ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ ಮತ್ತು ಅದು 1 ಕೋಟಿ ರೂ.ಗಿಂತ ಹೆಚ್ಚಿದ್ದರೆ ಅವರು ಶೇಕಡಾ 5 ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ.

194 ಎನ್ ಪ್ರಕಾರ, ಒಬ್ಬ ವ್ಯಕ್ತಿಯು ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕ್‌ನಿಂದ ಕೇವಲ 20 ಲಕ್ಷ ರೂ.ಗಳನ್ನು ಮಾತ್ರ ಹಿಂಪಡೆಯಬಹುದು. ಅದನ್ನು ಮೀರಿ, ವ್ಯಕ್ತಿಯು ಟಿಡಿಎಸ್ ಪಾವತಿಸಬೇಕಾಗುತ್ತದೆ. ಸತತ ಮೂರು ವರ್ಷಗಳ ಕಾಲ ಐಟಿ ರಿಟರ್ನ್ಸ್ ಸಲ್ಲಿಸದವರಿಗೆ ಈ ನಿಯಮ ಅನ್ವಯಿಸುತ್ತದೆ. ಇತರರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ.

ಆದಾಗ್ಯೂ, ಐಟಿಆರ್ ಸಲ್ಲಿಸುವವರು 1 ಕೋಟಿ ರೂ.ಗಳವರೆಗೆ ನಗದು ಹಿಂಪಡೆಯುವ ಸೌಲಭ್ಯವನ್ನು ಪಡೆಯುತ್ತಾರೆ ಎಂಬುದನ್ನು ಗಮನಿಸಬೇಕು. ಆಯಾ ಬ್ಯಾಂಕುಗಳು ಈಗಾಗಲೇ ಉಚಿತ ಮಿತಿಯನ್ನು ಮೀರಿ ಎಟಿಎಂ ವಹಿವಾಟುಗಳಿಗೆ ಶುಲ್ಕ ವಿಧಿಸುತ್ತಿವೆ. ಮಿತಿಯನ್ನು ದಾಟಿದ ನಂತರ ಪ್ರತಿ ವಹಿವಾಟಿಗೆ 20 ರೂ.ಶುಲ್ಕ ವಿಧಿಸಲಿವೆ.

ಬ್ಯಾಂಕಿನಿಂದ ಹಿಂಪಡೆಯುವ ಮಿತಿ 1 ಕೋಟಿ ರೂ.ಗಳನ್ನು ಮೀರಿದರೆ, ಶೇಕಡಾ 2ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ. ಐಟಿಆರ್ ಸಲ್ಲಿಸದವರಿಗೆ ಶೇಕಡಾ 2 ರಷ್ಟು ಮತ್ತು 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವವರು ಶೇಕಡಾ 2 ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ ಮತ್ತು ಅದು 1 ಕೋಟಿ ರೂ.ಗಿಂತ ಹೆಚ್ಚಿದ್ದರೆ ಅವರು ಶೇಕಡಾ 5 ರಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ.

Ads on article

Advertise in articles 1

advertising articles 2

Advertise under the article